-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಂಗಳೂರು: ಮಹಿಳೆಯೊಂದಿಗೆ ಅರುಣ್ ಪುತ್ತಿಲ‌ ಮಾತನಾಡಿದ್ದು ಎನ್ನಲಾದ ಸ್ಪೋಟಕ ಆಡಿಯೋ ವೈರಲ್

ಮಂಗಳೂರು: ಮಹಿಳೆಯೊಂದಿಗೆ ಅರುಣ್ ಪುತ್ತಿಲ‌ ಮಾತನಾಡಿದ್ದು ಎನ್ನಲಾದ ಸ್ಪೋಟಕ ಆಡಿಯೋ ವೈರಲ್


ಮಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಭಾರೀ ಸದ್ದು ಮಾಡಿದ್ದ ಅರುಣ್ ಪುತ್ತಿಲ ಎಂಪಿ ಚುನಾವಣೆ ವೇಳೆ ಮತ್ತೆ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದೀಗ ಬಿಜೆಪಿ ಸೇರ್ಪಡೆ ಬಳಿಕ ಮಹಿಳೆಯೊಬ್ಬರೊಂದಿಗೆ ಪುತ್ತಿಲ ಮಾತನಾಡಿದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. 7.46ನಿಮಿಷದ ಈ ಆಡಿಯೋ ಕರಾವಳಿ ರಾಜಕೀಯ ವಲಯದಲ್ಲಿ ಅದರಲ್ಲೂ ಬಿಜೆಪಿ ಪಾಳಯದಲ್ಲಿ ಭಾರೀ ಸಂಚಲನ ಸೃಷ್ಟಿಸಲಿದೆ.

ಆಡಿಯೋದಲ್ಲಿ ಆರಂಭದಲ್ಲಿ ಹಲೋ ಓ... ಎಂದು ಪುತ್ತಿಲರದ್ದು ಎನ್ನಲಾದ ಧ್ವನಿ ಕೇಳುತ್ತದೆ. ಆಗ ಮಹಿಳೆ ಎಂಥದು ಓ.. ಆಯ್ತಲ್ಲ ನಿಮ್ಮದು ಕಥೆ ಇನ್ನು ಪುತ್ತಿಲ ಅಧ್ಯಾಯ ಮುಗಿಯಿತು. ಪುತ್ತಿಲ ಇತಿಹಾಸ ಆಯ್ತು. ಇನ್ನು ಪಕ್ಷದ ಬ್ಯಾನರ್ ಕಟ್ಕೊಂಡು ಕುಳಿತುಕೊಳ್ಳಬೇಕು ಎಂದು ಸಂಭಾಷಣೆ ಆರಂಭವಾಗುತ್ತದೆ. 




'ನಾವು ಯಾವಾಗಲೂ ಆಶಾವಾದಿಗಳು' ಪುತ್ತಿಲ ಹೇಳಿದ್ರೆ. 'ಎಂಥ ಆಶಾವಾದಿಗಳು ಎಂಎಲ್ಎ ಟಿಕೆಟ್ ಸಿಗೋಲ್ಲ‌. ಜವಾಬ್ದಾರಿ ಇಲ್ಲದೆ ಬಿಜೆಪಿ ಆಫೀಸ್‌ಗೆ ಕಾಲಿಡೋಲ್ಲ ಅಂತ ಹೇಳಿ ಈಗ ನಾಚಿಗೆಗೆಟ್ರಲ್ಲ. ಹೇಸಿಗೆಯಾಯ್ತು ಥೂ...' ಎಂದು ಮಹಿಳೆ ಹೇಳಿದ್ರೆ, ''ರಾಜಕೀಯದಲ್ಲಿ ನಾಚಿಗೆ, ಹೇಸಿಗೆ, ಥೂ ಇದೆಲ್ಲಾ ಯಾವುದೂ ಇಲ್ಲ. ಅದು ಬಿಟ್ಟವರೇ ಪೊಲಿಟೀಶಿಯನ್‌ಗಳು. ಮಾನ ಮರ್ಯಾದೆ ಎರಡು ಬಿಡದಿದ್ದರೇ ಉನ್ನತ ಹುದ್ದೆಗೆ ಹೋಗಲು ಸಾಧ್ಯವಿಲ್ಲ‌" ಎಂದು ಹೇಳಿದಾಗ ಮಹಿಳೆ ಇದು ನೂರಕ್ಕೆ ನೂರು ಸತ್ಯ ಎನ್ನುತ್ತಾರೆ. "ಅದು ಬಿಟ್ಟದ್ದರಿಂದಲೇ ಪರಿವಾರದ ಜನತೆ ದೊಡ್ಡದೊಡ್ಡ ಜನ ಆದದ್ದು'' ಎಂದು ಪುತ್ತಿಲ ವಾಯ್ಸ್ ಕೇಳುತ್ತದೆ.

ಪುತ್ತಿಲ ವಾಯ್ಸ್ 'ಕಾಲಾಯ ತಸ್ಮೈ ನಮಃ' ಸಂಸ್ಕೃತ ಮಾತು ಉದ್ಧರಿಸಿದರೆ, ಮಹಿಳೆಯೂ 'ಸಂಶಯಾತ್ಮಾ ವಿನಶ್ಯತಿ' ಎಂದು ಸಂಸ್ಕೃತ ಉಕ್ತಿಯನ್ನು ಹೇಳಿ ಈಗ ಆಗಿದ್ದು ಇದೇ ಯಾರು ಎಲ್ಲರನ್ನೂ ಸಂಶಯದಿಂದ ನೋಡ್ತಾನೋ ಅವನು ನಾಶ ಆಗ್ತಾನೆ ಅಂಥ. ಈಗ ಅಕ್ಷರಶಃ ನೀವು ನಾಶ ಎಂದು ಹೇಳುತ್ತಾರೆ.‌ ಜೊತೆಗೆ 3.5 ಕೋಟಿ ಹಣ ಪಡೆದಿರುವ ಬಗ್ಗೆ ಕೂಡ ಆಡಿಯೋದಲ್ಲಿ ಪ್ರಸ್ತಾಪವಾಗುತ್ತದೆ. ಹಣ ತೆಗೆದುಕೊಂಡ ಬಗ್ಗೆ ಪುತ್ತಿಲ ಪರೋಕ್ಷವಾಗಿ ಒಪ್ಪಿಕೊಳ್ಳುವ ಮಾತು ಬರುತ್ತದೆ. ಈಗ ಈ ವಿಷಯ ಬೇಡ ಬೆಂಗಳೂರಿನಲ್ಲಿ ಒಂಟಿಯಾಗಿ ಸಿಕ್ಕಗ ಮಾತನಾಡುತ್ತೇನೆ ಎಂದು ಮಹಿಳೆ ಹೇಳುತ್ತಾ 'ನಿಮಗೆ ಇವತ್ತು ಕಡ್ಡಿ ಇಟ್ಟಿದ್ದೇನೆ' ಎಂದು ಹೇಳುತ್ತಾ ಆಡಿಯೊ ಅಂತ್ಯಗೊಳ್ಳುತ್ತದೆ.



Ads on article

Advertise in articles 1

advertising articles 2

Advertise under the article