-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
 “ಅನರ್ಕಲಿ" ತುಳು ಸಿನಿಮಾ ಕರಾವಳಿಯಾದ್ಯಂತ ತೆರೆಗೆ

“ಅನರ್ಕಲಿ" ತುಳು ಸಿನಿಮಾ ಕರಾವಳಿಯಾದ್ಯಂತ ತೆರೆಗೆ



ಮಂಗಳೂರು: ಲಕುಮಿ ಸಿನಿ ಕ್ರಿಯೇಷನ್ ಮತ್ತು ಲೋ ಬಜೆಟ್ ಪ್ರೊಡಕ್ಷನ್ ನಿರ್ಮಾಣದಲ್ಲಿ ಹರ್ಷಿತ್ ಸೊಮೇಶ್ವರ ನಿರ್ದೇಶನದಲ್ಲಿ ತಯಾರಾದ "ಅನರ್ ಕಲಿ" ತುಳು ಸಿನಿಮಾದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಭಾರತ್ ಸಿನಿಮಾಸ್ ನಲ್ಲಿ ನಡೆಯಿತು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು, “ತುಳು ಭಾಷೆಯ ಉಳಿವಿಗಾಗಿ ತುಳು ನಾಟಕ ಮತ್ತು ಸಿನಿಮಾಗಳ ಪಾತ್ರ ಹೆಚ್ಚಿನದಾಗಿದೆ. ಇದ್ಕಕಾಗಿ ಶ್ರಮ ಪಡುತ್ತಿರುವ ಲೈಟ್ ಬಾಯ್ ನಿಂದ ಹಿಡಿದು ಎಲ್ಲರನ್ನು ಈ ಸಂದರ್ಭದಲ್ಲಿ ನೆನೆಯಬೇಕಿದೆ. "ಅನರ್ಕಲಿ" ತುಳು ಸಿನಿಮಾ ಚೆನ್ನಾಗಿದೆ ಎಂದು ಈಗಾಗಲೇ ಪ್ರೇಕ್ಷಕರು ಬೆನ್ನುತಟ್ಟಿದಾರೆ. ಒಂದು ಒಳ್ಳೆಯ ಪ್ರಯತ್ನವನ್ನು ತುಳುನಾಡಿನ ಪ್ರೇಕ್ಷಕರು ಖಂಡಿತ ಬೆಂಬಲಿಸುತ್ತಾರೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ“ ಎಂದರು. 

ನವನೀತ್ ಶೆಟ್ಟಿ ಕದ್ರಿ ಮಾತನಾಡಿ, ”ನಾವು ಬಾಲ್ಯದಲ್ಲಿ ನೋಡುತ್ತಿದ್ದ ಅನರ್ಕಲಿ ವೇಷವನ್ನು ಮತ್ತೊಮ್ಮೆ ತುಳುನಾಡಿನ ಜನರಿಗೆ ಪರಿಚಯಿಸಲು ಚಿತ್ರತಂಡ ಮುಂದಾಗಿದೆ. ಚಿತ್ರ ನೋಡಿದವರು ಪ್ರಶಂಸೆಯ ಮಾತನಾಡಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ“ ಎಂದರು. 

ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, ”ನಾನು ಸಿನಿಮಾ ನೋಡಿದ್ದೇನೆ ನನಗೆ ತುಂಬಾ ಖುಷಿಯಾಗಿದೆ. ಬಹಳ ಸಮಯದ ಬಳಿಕ ಒಂದೊಳ್ಳೆ ಸಿನಿಮಾ ನೋಡಲು ಸಿಕ್ಕಿದೆ. ಎಲ್ಲರೂ ಸಿನಿಮಾ ನೋಡಿ“ ಎಂದರು. 

ಅರವಿಂದ್ ಬೋಳಾರ್ ಮಾತಾಡಿ, ”ತುಳುವರು ಸಿನಿಮಾ ನೋಡಿ ಗೆಲ್ಲಿಸಿದಲ್ಲಿ ನಮ್ಮ ನಿರ್ಮಾಪಕರ ಶ್ರಮ ಸಾರ್ಥಕವಾಗುತ್ತದೆ. ಎಲ್ಲರೂ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಆಶಿರ್ವದಿಸಿ“ ಎಂದು ಹೇಳಿದರು.

ವೇದಿಕೆಯಲ್ಲಿ ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್,  ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಚಂದ್ರಶೇಖರ ಶೆಟ್ಟಿ, ಚಂದ್ರಹಾಸ ಶೆಟ್ಟಿನಟ ಲಂಚುಲಾಲ್,  ವಿಜಯ್ ಶೋಭರಾಜ್ ಪಾವೂರು, ನಟಿ ಮಧುರಾ ಆರ್.ಜೆ., ಪುರುಷೋತ್ತಮ ಭಂಡಾರಿ ಅಡ್ಯಾರ್, ಪ್ರದೀಪ್ ಆಳ್ವ ಕದ್ರಿ, ಗಿರೀಶ್ ಎಂ  ಶೆಟ್ಟಿ ಕಟೀಲು, ಕಿಶೋರ್ ಡಿ. ಶೆಟ್ಟಿ, ದಿವಾಕರ ಶೆಟ್ಟಿ, ಮೋಹನ್ ಕೊಪ್ಪಲ, ಇಸ್ಮಾಯಿಲ್ ಮೂಡುಶೆಡ್ಡೆ, ತಾರಾನಾಥ್ ಶೆಟ್ಟಿ  ಬೋಳಾರ್, ಪತ್ರಕರ್ತ  ಬಾಳ ಜಗನ್ನಾಥ ಶೆಟ್ಟಿ ಬಾಳ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು,  ಯಶೋಧ ಸಂಜೀವ ಕೋಟ್ಯಾನ್, ರಜನೀಶ್ ಕೋಟ್ಯಾನ್, ವಾತ್ಸಲ್ಯ, ನಿರ್ದೇಶಕ ಹರ್ಷಿತ್ ಸೋಮೇಶ್ವರ, ರೋಜಿತ್ ಪೂಜಾರಿ, ರವಿ ರಾಮಕುಂಜ, ಪುಷ್ಪರಾಜ್ ಬೊಳ್ಳೂರು, ಅಶ್ವಿನಿ ಪ್ರಕಾಶ್, ಕುಡುಪಿ ಅರವಿಂದ ಶೆಣೈ, ವತ್ಸಲಲಕ್ಷ್ಮೀ ರಜನೀಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಮಧುರ ಆರ್ ಜೆ ಕಾರ್ಯಕ್ರಮ‌ ನಿರೂಪಿಸಿದರು. 


ಅನರ್ ಕಲಿ ತುಳು ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಪಿವಿಆರ್, ಭಾರತ್ ಸಿನಿಮಾಸ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ನಲ್ಲಿ ತೆರೆ ಕಾಣಲಿದೆ. 

"ಅನರ್ ಕಲಿ" ಸಿನಿಮಾ ಒಂದೇ ಹಂತದಲ್ಲಿ 18 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಪೊಳಲಿ, ಕಟೀಲು, ಸೋಮೇಶ್ವರ, ಉಳ್ಳಾಲ, ಉಳಿಯ, ನೀರ್ ಮಾರ್ಗ, ಹಾಗೂ ಕಳಸದಲ್ಲಿ ಸಿನಿಮಾಕ್ಕೆ ಚಿತ್ರೀಕರಣ ನಡೆದಿದೆ. 

ಸಿನಿಮಾದಲ್ಲಿ ಒಂದು ಕಥಾಹಂದರವನ್ನು ಇಟ್ಟುಕೊಂಡು ಸಂಪೂರ್ಣ ಹಾಸ್ಯಭರಿತವಾಗಿ ಸಿನಿಮಾ ಸಾಗಿದೆ.  ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ದೀಪಕ್ ಪಾಣಾಜೆ, ರವಿ ರಾಮಕುಂಜ, ಪುಷ್ಪರಾಜ್ ಬೊಳ್ಳೂರು, ಸುಜಾತ ಶಕ್ತಿನಗರ, ನಮಿತಾ ಕುಳೂರು ಮುಖ್ಯ ಭೂಮಿಕೆಯಲ್ಲಿದ್ದಾರೆ. ನಾಯಕ  ನಟನಾಗಿ ವಿಜಯ್ ಶೋಭರಾಜ್ ಪಾವೂರು, ನಾಯಕಿಯಾಗಿ ಮಧುರ ಆರ್ ಜೆ ಅಭಿನಯಿಸಿದ್ದಾರೆ. ಇನ್ನುಳಿದಂತೆ ಮೋಹನ್ ಕೊಪ್ಪಲ, ಹರ್ಷಿತ್ ಸೋಮೇಶ್ವರ, ಮಂಜು ರೈ ಮುಳೂರು, ರಂಜನ್ ಬೋಳೂರು ಶರಣ್ ಕೈಕಂಬ,  ಪ್ರಕಾಶ್ ಶೆಟ್ಟಿ ಧರ್ಮನಗರ, ಮಧುರ ಆರ್.ಜೆ ವಾತ್ಸಲ್ಯ ಸಾಲಿಯಾನ್ , ವಿನಾಯಕ್ ಜೆಪ್ಪು ತಾರಾಗಣದಲ್ಲಿದ್ದಾರೆ.

ಛಾಯಾಗ್ರಹಣ ಅನಿಲ್ ಕುಮಾರ್, ಅರುಣ್ ರೈ ಪುತ್ತೂರು, ಸಹಾಯಕ ಛಾಯಾಗ್ರಹಣ ಚರಣ್ ಆಚಾರ್ಯ, ಪ್ರಜ್ವಲ್ ಸುವರ್ಣ, ಸಂಗೀತ ರೋಹಿತ್ ಪೂಜಾರಿ, ಕಾರ್ಯಕಾರಿ ನಿರ್ಮಾಪಕರು ಮಹೇಶ್ ಪುತ್ತೂರು, ವೀರ ಕೇಸರಿ, ನಿರ್ಮಾಣ ನಿರ್ವಹಣೆ ವಾತ್ಸಲ್ಯ ಸಾಲಿಯಾನ್, ವರ್ಣಾಲಂಕಾರ ಚೇತನ್ ಕಲ್ಲಡ್ಕ, ಸಹಾಯಕ ವರ್ಣಾಲಂಕಾರ ಸವ್ಯರಾಜ್ ಕಲ್ಲಡ್ಕ, ಚರಣ್ ರಾಜ್ ಪಚ್ಚಿನಡ್ಕ, ಕಲಾ ನಿರ್ದೇಶನ ಭರತ್ ತುಳುವ, ಸಹ ನಿರ್ದೇಶಕರು

ವೀರಕೇಸರಿ,  ಭರತ್ ತುಳುವ, ವಿವೇಕ್ ಶೆಟ್ಟಿ, ಸಹಾಯಕ ನಿರ್ದೇಶಕರು ಸುದೇಶ್ ಪೂಜಾರಿ, ಮೋಕ್ಷಿತ್ ಕನಕಮಜಲು ಪವಿತ್ರಪ್ರಭು, ಅಮಿತ್, ಕೀರ್ತನ್ ರೈ ಸುಳ್ಯ, ವಸ್ತ್ರ ವಿನ್ಯಾಸ ಸವಿತ ಶೇಖರ್ ವಿದ್ಯಾ ಉಚ್ಚಿಲ್,  ನೃತ್ಯ ನಿರ್ದೇಶನ ಶಶಾಂಕ್ ಸುವರ್ಣ, ಸಾಹಿತ್ಯ ಸುದೇಶ್ ಪೂಜಾರಿ, ಹರ್ಷಿತ್ ಸೋಮೇಶ್ವರ, ಹಿನ್ನಲೆ ಗಾಯನ ನಕುಲ್ ಅಭಯಂಕರ್, ಅರ್ಫಾಜ್ ಉಳ್ಳಾಲ್, ಸತೀಶ್ ಪಟ್ಲ, ಸೃಜನ್ ಕುಮಾರ್ ತೋನ್ಸೆ, ರೋಹಿತ್ ಪೂಜಾರಿ, ವಾತ್ಸಲ್ಯ ಸಾಲಿಯಾನದ, ಸೌಜನ್ಯ. ಪ್ರಚಾರ ವಿನ್ಯಾಸ ಪವನ್ ಆಚಾರ್ಯ ಬೋಳೂರು, 

ರಚನೆ ಮತ್ತು ನಿರ್ದೇಶನ ಹರ್ಷಿತ್ ಸೋಮೇಶ್ವರ, ನಿರ್ಮಾಣ  ಲಂಚು ಲಾಲ್, ಲೋ ಬಜೆಟ್ ಪ್ರೊಡಕ್ಷನ್,  ಸಹ ನಿರ್ಮಾಣ:  ಕಿಶೋರ್ ಡಿ ಶೆಟ್ಟಿ, ರಜನೀಶ್ ಕೋಟ್ಯಾನ್.

Ads on article

Advertise in articles 1

advertising articles 2

Advertise under the article