'ನಾನು ನಂದಿನಿ ಬೆಂಗಳೂರು ಬಂದೀನಿ' ವಿಕ್ಕಿಪಿಡಿಯಾಗೆ ಬೆಂಗಳೂರು ಪೊಲೀಸರಿಂದ ಶಾಕ್



ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ಶೈಲಿಯ ವಿಡಿಯೋ ಮಾಡುತ್ತಾ ತಮ್ಮದೇ ಸ್ಟೈಲಿನಲ್ಲಿ ಜನರಿಗೆ ಮನೋರಂಜನೆ ನೀಡುತ್ತಾ ಬಂದಿರುವ ವಿಕಾಸ್ ಅಲಿಯಾಸ್ ವಿಕ್ಕಿಪೀಡಿಯಾರಿಗೆ ಬೆಂಗಳೂರು ಪೊಲೀಸರು ಶಾಕ್ ನೀಡಿದ್ದಾರೆ. ನಾನು ನಂದಿನಿ ಬೆಂಗಳೂರಿಗ್ ಬಂದೀನಿ ರೀಲ್ಸ್ ಮೂಲಕ ಸಖತ್ತ್ ವೈರಲ್ ಆಗಿದ್ದ ವಿಕ್ಕಿಪೀಡಿಯಾ ಕೆಲವು ದಿನಗಳ ಹಿಂದೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವಿಚಾರವಾಗಿ ಪೊಲೀಸರು ಅವರಿಗೆ ಕರೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಭಿನ್ನ ವಿಭಿನ್ನ ರೀಲ್ಸ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಖತ್ ಸುದ್ದಿಯಲ್ಲಿ ಇರುವ ವಿಕಾಸ್ ಅಲಿಯಾಸ್ ವಿಕ್ಕಿಪೀಡಿಯಾ ಮಾದಕದ್ರವ್ಯ ವ್ಯಸನದ ಬಗ್ಗೆ ವಿಡಿಯೋ ಮಾಡಿದ್ದರು. ಈ ವಿಡಿಯೋ ವಿಚಾರವಾಗಿ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ವಿಕಾಸ್‌ರನ್ನು ಅವರನ್ನು ಕರೆಸಿ ಹೇಳಿಕೆ ಪಡೆದಿದ್ದು, ಬಳಿಕ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇಂದಿನ ಯುವಕರು ಎಂಜಾಯ್‌ಮೆಂಟ್‌ಗೆಂದು ಎಣ್ಣೆ ಹೊಡಿತಾರೆ, ಸಿಗರೇಟ್ ಸೇದ್ತಾರೆ, ಹುಡುಗೀರ್ ಹಿಂದೆ ಹೋಗ್ತಾರೆ. ಆದರೆ, ನಾನು ಎಂಜಾಯ್‌ಮೆಂಟ್‌ಗೆಂದು ಡ್ರಗ್ಸ್ ತಗೋತೀನಿ ಎಂಬ ವಿಡಿಯೋವನ್ನು ವಿಕ್ಕಿಪೀಡಿಯಾ ಕೆಲವು ದಿನಗಳ ಹಿಂದೆ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಪೊಲೀಸರು ತಕ್ಷಣ ವಿಕಾಸ್‌ಗೆ ಕರೆ ಮಾಡಿ ಆ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದಾರೆ. ಅಲ್ಲದೇ ಮತ್ತೆ ಎಂದು ಈ ರೀತಿಯ ವಿಡಿಯೋ ಮಾಡದಂತೆ ಸೂಚನೆ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಖ್ಯಾತಿ ಪಡೆದಿರುವ ವಿಕಾಸ್, ವಿಕ್ಕಿಪೀಡಿಯಾ ಅಂತಾಲೇ ಫುಲ್ ಫೇಮಸ್ ಆಗಿದ್ದಾರೆ. ಕಾಮಿಡಿ ವಿಡಿಯೋಗಳು, ಹಾಡುಗಳು ಹಾಗೂ ಸಾಮಾಜಿಕ ಕಳಕಳಿ ಇರುವಂತಹ ವಿಡಿಯೋಗಳನ್ನು ಮಾಡುವ ಇವರು ನಾನು ನಂದಿನಿ ಬೆಂಗಳೂರಿಗೆ ಬಂದೀನಿ ಎನ್ನುವ ಹಾಡಿನ ಮೂಲಕ ಸಖತ್ ವೈರಲ್ ಆಗಿದ್ದರು. ಜೊತೆಗೆ ಕರಿಮಣಿ ಮಾಲೀಕ ರಾವುಲ್ಲಾ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಿರೀಕ್ಷೆಗೂ ಮೀರಿ ಹಿಟ್ ಆಗಿತ್ತು. ಸಿನಿಮಾ ಹಾಗೂ ಕೆಲವು ಪ್ರಾಡಕ್ಟ್‌ಗಳ ಪ್ರಮೋಷನ್ ಅನ್ನು ಬಹಳ ಡಿಫರೆಂಟ್ ಆಗಿ ಮಾಡುವ ವಿಕ್ಕಿಪೀಡಿಯಾ ಹಾಗೂ ಅವರ ತಂಡದ ಕಾಮಿಡಿ ಕಟೆಂಟ್‌ಗಳನ್ನು ನೋಡದವರಿಲ್ಲ, ನೋಡಿ ನಗದವರಿಲ್ಲ ಎನ್ನುವಷ್ಟರ ಮಟ್ಟಿಗೆ ಇವರ ವಿಡಿಯೋಗಳು ವೈರಲ್ ಆಗಿ ಟ್ರೆಂಡಿಂಗ್ ಆಗುತ್ತದೆ.