-->
1000938341
ಬೆಂಗಳೂರು: ರಿಲ್ಸ್‌ಗಾಗಿ ಶೋಕಿ ಮಾಡಲು ಹೋದ ಶೋಕಿವಾಲಾ ಪರಪ್ಪನ ಅಗ್ರಹಾರ ಜೈಲು ಸೇರಿದ

ಬೆಂಗಳೂರು: ರಿಲ್ಸ್‌ಗಾಗಿ ಶೋಕಿ ಮಾಡಲು ಹೋದ ಶೋಕಿವಾಲಾ ಪರಪ್ಪನ ಅಗ್ರಹಾರ ಜೈಲು ಸೇರಿದ


ಬೆಂಗಳೂರು: ರಿಲ್ಸ್‌ಗಾಗಿ ಶೋಕಿ ಮಾಡಲು ಹೋದವನನ್ನು ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ. ಅರುಣ್ ಕಟಾರೆ ಜೈಲು ಸೇರಿರುವ ಶೋಕಿವಾಲ.

ಅರುಣ್ ಕಟಾರೆ ಐಷಾರಾಮಿ ಕಾರುಗಳಲ್ಲಿ ಮೈಮೇಲೆ ಕೆಜಿಗಟ್ಟಲೆ ಚಿನ್ನ ಧರಿಸಿಕೊಂಡು, ಮರ್ಸಿಡಿಸ್ ಕಾರುತುಂಬಾ ಚೆಲುವೆಯರನ್ನು ಇಟ್ಟುಕೊಂಡು ನಗರದಲ್ಲಿ ಶೋಕಿ ಮಾಡುತ್ತಿದ್ದ. ಇಷ್ಟೇ ಆದರೆ ಪರವಾಗಿಲ್ಲ‌. ಈತ ಎಕೆ 47 ರೈಫಲ್ ಹಿಡಿದ ಗನ್ ಮ್ಯಾನ್‌ಗಳನ್ನು ಇಟ್ಟುಕೊಂಡು ಬೀದಿಬೀದಿಯಲ್ಲಿ ತಿರುಗಾಡುತ್ತಿದ್ದ. ಇದರಿಂದ ಜನರು ಆತಂಕಕ್ಕೊಳಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ರೌಡಿ ಚಟುವಟಿಕೆ ಮತ್ತು ಹಳೆಯ ಎಂಓಬಿಗಳ ಮೇಲೆ ನಿಗಾ ವಹಿಸಿದ್ದ ಕೊತ್ತನೂರು ಪೊಲೀಸರು ಅರುಣ್ ಕಟಾರೆಯನ್ನು ವಶಕ್ಕೆ ಪಡೆದಿದ್ದಾರೆ. ಆರ್ಮ್ಸ್ ಕಾಯ್ದೆಯನ್ವಯ ಸೆಕ್ಷನ್ 290 ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ನಕಲಿ ಗನ್ ಹಿಡಿದು ಏರಿಯಾದಲ್ಲಿ ಹವಾ ಸೃಷ್ಟಿಸಲು ಹೋದವನ ಗುಟ್ಟು ಬಯಲಾಗಿದೆ. ರೀಲ್ಸ್ ಶೋಕಿಗೆ ಬಿದ್ದ ಯುವಕನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳಿಸಿಕೊಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article