Mangalore: ಸ್ನಾನ ಮಾಡುತ್ತಿದ್ದ ಯುವತಿಯ ವೀಡಿಯೋ ಚಿತ್ರೀಕರಣ: ಯುವಕನಿಗೆ ಧರ್ಮದೇಟು

 



ಮಂಗಳೂರು: ಮಂಗಳೂರು ಸಮೀಪದ ತೋಟಬೆಂಗ್ರೆಯಲ್ಲಿ ಯುವತಿಯೊಬ್ಬಳು ಸ್ನಾನ ಮಾಡುತ್ತಿದ್ದಾಗ ಮನೆಯ ಹಿಂಭಾಗದಿಂದ ಯುವಕನೊಬ್ಬ ವೀಡಿಯೋ ಮಾಡುತ್ತಿದ್ದಾಗ ಸಿಕ್ಕಿಬಿದ್ದು ಸ್ಥಳೀಯರಿಂದ ಏಟು ತಿಂದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.


ಬೆಂಗ್ರೆ ನಿವಾಸಿ ಮೊಹಮ್ಮದ್ ರಂಶಿದ್ (21) ಆರೋಪಿ. ಈತ ಮಾದಕ ದ್ರವ್ಯ ವ್ಯವಸನಿಯೂ ಆಗಿದ್ದ ಎನ್ನಲಾಗಿದೆ. ಈತನನ್ನು ಪಣಂಬೂರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.