"ಸರಳ ಕಾನೂನು ಅರಿವಿಲ್ಲದೆ ಮೋಸ ಹೋಗದಿರಿ": ಕಾನೂನು ಮಾಹಿತಿ ಪುಸ್ತಕ ಬಿಡುಗಡೆ
ಸರಳ ಕಾನೂನುಗಳ ಅರಿವಿಲ್ಲದೆ ಮೋಸ ಹೋಗದಿರಿ ಎಂಬ ಕಾನೂನು ಮಾಹಿತಿ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.
ಮಂಗಳೂರಿನ ವಕೀಲರು ಮತ್ತು ನೋಟರಿ ಆಗಿರುವ ಮೂಡಬಿದಿರೆ ಚೌಟರ ಅರಮನೆಯ ಡಾ. ಅಕ್ಷತಾ ಆದರ್ಶ್ ಬರೆದ ಈ ಪುಸ್ತಕವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಬಿಡುಗಡೆ ಮಾಡಿದರು.
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ ಮೋಹನ್ ಆಳ್ವ ಹಾಗೂ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ವಿ ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಹಲವು ರೀತಿಯ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರ ನೂರಾರು ಪ್ರಶ್ನೆಗಳಿಗೆ ಕಾನೂನಿನ ಉತ್ತರಗಳು ಈ ಪುಸ್ತಕದಲ್ಲಿರುವುದು ವಿಶೇಷವಾಗಿದೆ.
