-->
1000938341
ಮಂಗಳೂರು: "ಅಶ್ವಿನಿ ನಕ್ಷತ್ರ" ಖ್ಯಾತಿಯ ಮಯೂರಿ ಮರಳಿ ಕಿರುತೆರೆಗೆ - ಕಲರ್ಸ್‌ನಲ್ಲಿ ಜುಲೈ 8ರಿಂದ ‘ನನ್ನ ದೇವ್ರು’ ಪ್ರಸಾರ

ಮಂಗಳೂರು: "ಅಶ್ವಿನಿ ನಕ್ಷತ್ರ" ಖ್ಯಾತಿಯ ಮಯೂರಿ ಮರಳಿ ಕಿರುತೆರೆಗೆ - ಕಲರ್ಸ್‌ನಲ್ಲಿ ಜುಲೈ 8ರಿಂದ ‘ನನ್ನ ದೇವ್ರು’ ಪ್ರಸಾರ

ಮಂಗಳೂರು: ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವ ಸದಭಿರುಚಿಯ ಸೀರಿಯಲ್‌ಗಳಿಗೆ ಹೆಸರಾಗಿರುವ ಕಲರ್ಸ್‌ ಕನ್ನಡ ಇದೀಗ ‘ನನ್ನ ದೇವ್ರು’ ಎಂಬ ಹೊಸಕತೆಯನ್ನು ಜುಲೈ 8ರಿಂದ ಪ್ರಸಾರ ಆರಂಭಿಸಲಿದೆ. ಈ ವಿನೂತನ ಸೀರಿಯಲ್ ಅನ್ನು ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದು ಸಂಜೆ 6.30ರಿಂದ ವೀಕ್ಷಿಸಬಹುದು.

‘“ಅಶ್ವಿನಿ ನಕ್ಷತ್ರ’ ಧಾರವಾಹಿಯಿಂದ ಮನೆಮಾತಾಗಿದ್ದ ನಟಿ ಮಯೂರಿ ನನ್ನ ದೇವ್ರು’ ಸೀರಿಯಲ್ ಮೂಲಕ  ಮತ್ತೆ ಕಿರುತೆರೆಗೆ ಮರಳಿದ್ದಾರೆ. ಈ ಧಾರಾವಾಹಿಯಲ್ಲಿ ಮಯೂರಿಯದು ಸಣ್ಣ ಊರಿನ ಬಡ ನರ್ಸ್‌ ಪಾತ್ರ. ಊರೇ ಮೆಚ್ಚುವ ಉದ್ಯಮಿ ಸಚ್ಚಿದಾನಂದರಿಗೆ ಸೇರಿದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಬಡ ಹುಡುಗಿ ಮಯೂರಿ. ಜನಾನುರಾಗಿ ಸಚ್ಚಿದಾನಂದರ 20ವರ್ಷದ ಮಗಳಿಗೆ ಅಪ್ಪನನ್ನು ಕಂಡರೆ ಇಷ್ಟವಿಲ್ಲ. ತನ್ನಿಂದ ದೂರಾಗಿ ಬದುಕುತ್ತಿರುವ ಪುತ್ರಿಯ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳಲು ಹಲುಬುತ್ತಿರುವ ಸಚ್ಚಿದಾನಂದರ ಬದುಕಿನಲ್ಲಿ ಮಯೂರಿಯ ಪ್ರವೇಶವಾಗುತ್ತದೆ. ತಾನು ಆರಾಧಿಸುವ ಸಚ್ಚಿದಾನಂದನ ಬಾಳನ್ನು ಸರಿದಾರಿಗೆ ತರುವ ಹಾದಿಯಲ್ಲಿ ಮಯೂರಿ ಎದುರಿಸುವ ಸವಾಲುಗಳೇನು ಎಂಬುದೇ ಮುಂದಿನ ಕತೆ. ಸುತ್ತಲಿನವರ ಸಂಚುಗಳಿಂದ ಮಯೂರಿ ಹೇಗೆ ಸಚ್ಚಿದಾನಂದರನ್ನು ಕಾಪಾಡುತ್ತಾಳೆ ಎಂಬುದೇ ಕುತೂಹಲ.

‘ಅಶ್ವಿನಿ ನಕ್ಷತ್ರ’ದಿಂದ ಹೆಸರಾದ ಮಯೂರಿ ಬಹಳ ವರ್ಷಗಳ ಬಳಿಕ ಟಿವಿಗೆ ಮರಳಿ ‘ನನ್ನ ದೇವ್ರು’ ನಾಯಕಿಯಾಗಿದ್ದಾರೆ. ನಾಯಕನಾಗಿ ನಟಿಸುತ್ತಿರುವ ಅವಿನಾಶ್ ದಿವಾಕರ್ ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ ಅನ್ನುವುದು ಇನ್ನೊಂದು ವಿಶೇಷ. ಇವರೊಂದಿಗೆ ಯುಕ್ತಾ ಮಲ್ನಾಡ್, ಸ್ವಾತಿ, ವಿ. ಮನೋಹರ್, ರೇಖಾದಾಸ್, ನಿಶ್ವಿತಾ ಗೌಡ, ಮಾಲತಿ ಸುಧೀರ್, ಯಮುನಾ ಶ್ರೀನಿಧಿ, ರವಿ ಬ್ರಹ್ಮ, ಅಭಿಷೇಕ್ ಶ್ರೀಕಾಂತ್... ಹೀಗೆ ‘ನನ್ನ ದೇವ್ರು’ ತಾರಾಗಣದಲ್ಲಿ ಜನಪ್ರಿಯ ನಟ ನಟಿಯರು ತುಂಬಾ ಮಂದಿ ಇದ್ದಾರೆ.
ಈ ಮೊದಲು ‘ಒಲವಿನ ನಿಲ್ದಾಣ’ ಧಾರಾವಾಹಿಯನ್ನು ನಿರ್ಮಿಸಿದ್ದ ಶ್ರುತಿ ನಾಯ್ಡು ‘ನನ್ನ ದೇವ್ರು’ ಧಾರಾವಾಹಿಯ ನಿರ್ಮಾಪಕಿ. ಇತ್ತೀಚಿಗೆ ಬೆಳ್ಳಿತೆರೆಯ ಮೇಲೆ ಖಳನಟನಾಗಿ ಗಮನ ಸೆಳೆಯುತ್ತಿರುವ ರಮೇಶ್ ಇಂದಿರಾ ‘ನನ್ನ ದೇವ್ರು’ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

ಈ ಹೊಸ ಧಾರಾವಾಹಿ ಬಗ್ಗೆ ಉತ್ಸುಕತೆ ತೋರಿದ ಕಲರ್ಸ್‌ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಮಾತನಾಡಿ, ‘ಸದಾ ಹೊಸತನಕ್ಕಾಗಿ ತುಡಿಯುವ ಕಲರ್ಸ್‌ ಕನ್ನಡ ವಾಹಿನಿಯು ಈ ಹೊಸ ಧಾರಾವಾಹಿಯ ಮೂಲಕ ಮುಗ್ಧತೆ ಮತ್ತು ಪ್ರಾಮಾಣಿಕತೆ ತಂದೊಡ್ಡುವ ಸವಾಲುಗಳ  ಕತೆಯೊಂದನ್ನು ವೀಕ್ಷಕರಿಗೆ ಉಣಬಡಿಸಲಿದೆ’ ಎಂದು ಹೇಳಿದರು.
ಕಲರ್ಸ್‌ ಕನ್ನಡದ ವಾಹಿನಿಯಲ್ಲಿ ಜುಲೈ 8ರಂದು ಸಂಜೆ ೬.೩೦ಕ್ಕೆ ‘ನನ್ನ ದೇವ್ರು’ ಧಾರಾವಾಹಿಯ ಮೊದಲ ಕಂತು ಪ್ರಸಾರವಾಗಲಿದೆ. ಇದನ್ನು ನೀವು ಜಿಯೋ ಸಿನಿಮಾ ಮೂಲಕ ನಿಮ್ಮ ಫೋನಿನಲ್ಲೂ ನೋಡಬಹುದು

Ads on article

Advertise in articles 1

advertising articles 2

Advertise under the article