ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಟಿವಿ ಪರದೆ ಸ್ವಚ್ಛಗೊಳಿಸುವುದು ಹೇಗೆ ಇಲ್ಲಿದೆ ಟಿಪ್ಸ್


ಎಲೆಕ್ಟ್ರಾನಿಕ್ ವಸ್ತುವನ್ನು ಸ್ವಚ್ಛಗೊಳಿಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು ಸರಿಯಾಗಿ ಸ್ವಚ್ಛಗೊಳಿಸಬೇಕು. ಇಲ್ಲವಾದರೆ ಇದರಿಂದ ಟಿವಿ ಪರದೆಯ ಮೇಲೆ ಗೀಚು ಬಿದ್ದು ಪರದೆ ಹಾಳಾಗುತ್ತದೆ. ಹಾಗೇ ಶಾಕ್ ಸರ್ಕ್ಯೂಟ್ ಆಗುವ ಸಂಭವವಿರುತ್ತದೆ. ಹಾಗಾಗಿ ಟಿವಿ ಸ್ವಚ್ಛಗೊಳಿಸುವಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಉತ್ತಮ
-ಟಿವಿ ಪರದೆಯನ್ನು ಕ್ಲೀನ್ ಮಾಡುವಾಗ ಟಿವಿಯನ್ನು ಆಪ್ ಮಾಡಿ ಕನೆಕ್ಷನ್ ತೆಗೆದುಹಾಕಿ, ಇದರಿಂದ ಶಾಕ್ ತಗುಲುವ ಸಂಭವ ಕಡಿಮೆಯಾಗುತ್ತದೆ.
-ಟಿ ವಿ ಪರದೆಯನ್ನು ಸ್ವಚ್ಚಗೊಳಿಸುವಾಗ ಮೈಕೋಫೈಬರ್ ಬಟ್ಟೆಯನ್ನು ಬಳಸಿ. ಈ ಬಟ್ಟೆಯನ್ನು ಒದ್ದೆ ಮಾಡದೆ ಟಿವಿ ಪರದೆಯನ್ನು ಸ್ವಚ್ಛಗೊಳಿಸಿದರೆ ಉತ್ತಮ. ಇಲ್ಲವಾದರೆ ಸ್ವಲ್ಪ ಒದ್ದೆ ಮಾಡಿ ಒರೆಸಿ. ಆದರೆ ಬೇರೆ ಯಾವುದೇ ರೀತಿಯ ಬಟ್ಟೆಗಳನ್ನು ಬಳಸಬೇಡಿ. ಅದು ಟಿವಿ ಪರದೆಯನ್ನು ಹಾಳು ಮಾಡುತ್ತದೆ.
-ಟಿವಿ ಪರದೆಯ ಮೇಲಿರುವ ಕಲೆಗಳನ್ನು ತೆಗೆದುಹಾಕಲು ತುಂಬಾ ಒತ್ತಡ ಹಾಕಬೇಡಿ. ಒಂದು ವೇಳೆ ಒತ್ತಡ ಹಾಕದೆ ಕಲೆಯನ್ನು ಸುಲಭವಾಗಿ ತೆಗೆಯಲು ನೀರಿಲ್ಲಿ ಸ್ವಲ್ಪ ವಿನೆಗರ್ ಮಿಕ್ಸ್ ಮಾಡಿ ಅದರಲ್ಲಿ ಮೈಕೋಫೈಬರ್ ಬಟ್ಟೆಯನ್ನು ಅದ್ದಿ ಸ್ವಚ್ಛಗೊಳಿಸಿದರೆ ಕಲೆ ಸುಲಭವಾಗಿ ನಿವಾರಣೆಯಾಗುತ್ತದೆ.