₹300 ಒಡವೆ 6 ಕೋಟಿ ರೂ.ಗೆ ಸೇಲ್: ಅಮೆರಿಕ ಮಹಿಳೆಗೆ ಭಾರತದಲ್ಲಿ ಮೋಸ!


ಜೈಪುರ: ರಾಜಸ್ಥಾನದ ಜೈಪುರದಲ್ಲಿ ಅಮೆರಿಕ ಮೂಲದ ಮಹಿಳೆಯೊಬ್ಬರಿಗೆ 300 ರೂ. ಮೌಲ್ಯದ ಒಡವೆಯನ್ನು 6 ಕೋಟಿ ರೂ.ಗಳಿಗೆ ಮಾರಾಟ ಮಾಡಿ ವಂಚಿಸಿರುವ ಘಟನೆ ನಡೆದಿದೆ.


ಜೈಪುರದ ರಾಜೇಂದ್ರ ಸೋನಿ ಹಾಗೂ ಗೌರವ್ ಎಂಬವರ ಮಾಲಕತ್ವದ ಒಡವೆ ಅಂಗಡಿಯಲ್ಲಿ ಚೆರಿಶ್ ಎಂಬ ಮಹಿಳೆ 6 ಕೋಟಿ ರೂ. ನೀಡಿ ಒಡವೆ ಖರೀದಿಸಿದ್ದರು. ಎಪ್ರಿಲ್‌ನಲ್ಲಿ ಅಮೆರಿಕದಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಚೆರಿಶ್ ಆ ಒಡವೆಯನ್ನಿಟ್ಟಾಗ ಅದು ನಕಲಿ ಎಂಬುದು ತಿಳಿದುಬಂದಿದೆ.

 

ಅನಂತರ ಆಕೆ ಜೈಪುರಕ್ಕೆ ಮರಳಿ ಅಮೆರಿಕ ರಾಯಭಾರ ಕಚೇರಿಯ ಸಹಾಯದೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

BREAKING NEWS
Loading latest news...
Join our WhatsApp Channel Powered By : Online Pudu