ಉಡುಪಿ: ಹೂಡಿಕೆ ಹೆಸರಲ್ಲಿ ಹಿರಿಯ ನಾಗರಿಕರಿಗೆ 23.73 ಲಕ್ಷರೂ. ವಂಚನೆ
Saturday, June 22, 2024
ಉಡುಪಿ: ವಾಟ್ಸಾಪ್ ಗೆ ಹೂಡಿಕೆ ಸಂದೇಶ ಕಳುಹಿಸಿ ಹಿರಿಯ ನಾಗರಿಕರೊಬ್ಬರ ಖಾತೆಯಿಂದ ಲಕ್ಷಾಂತರ ರೂ.ಎಗರಿಸಿದ ಬಗ್ಗೆ ದೂರು ದಾಖಲಾಗಿದೆ.
ಉಡುಪಿಯ ವೇದವ್ಯಾಸ ಅವರಿಗೆ ಅಪರಿಚಿತ ವ್ಯಕ್ತಿಗಳು ವಾಟ್ಸಾಪ್‌ನಲ್ಲಿ ಹೂಡಿಕೆಯ ಬಗ್ಗೆ ಸಂದೇಶ ಕಳುಹಿಸಿದ್ದರು. ಅನಂತರ ಟ್ರೇಡಿಂಗ್ ಹಾಗೂ ಹೆಚ್ಚಿನ ಲಾಭಾಂಶ ಪಡೆಯುವ ಆಸೆ ತೋರಿಸಿ Eltas Fud ಎಂಬ ಲಿಂಕ್ ಕಳುಹಿಸಿ ಆ ಆ್ಯಪ್ ಅನ್ನು ಡೌನ್ ಲೋಡ್ ಮಾಡುವಂತೆ ತಿಳಿಸಿದರು.
ಇದನ್ನು ನಂಬಿದ ವೇದವ್ಯಾಸ ಅವರು ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ `ಖಾತೆಗಳಿಗೆ ತನ್ನ ಹಾಗೂ ಅವರ ಪತ್ನಿಯ ಉಳಿತಾಯ ಖಾತೆಯಿಂದ ಹಂತ ಹಂತವಾಗಿ 23,73,891ರೂ.ಗಳನ್ನು ಆನ್ ಲೈನ್ ಮೂಲಕ ವರ್ಗಾಯಿಸಿದ್ದಾರೆ. 'ಆದರೆ ಆರೋಪಿಗಳು ಹಣ ಹಾಗೂ ಲಾಭಾಂಶ ನೀಡದೆ ವಂಚಿಸಿದ್ದಾರೆ ಎಂದು ಸೆನ್ ಠಾಣೆಗೆ ನೀಡಿರುವ ದೂರಿನಲ್ಲಿ ವೇದವ್ಯಾಸ ತಿಳಿಸಿದ್ದಾರೆ.