ಮಂಗಳೂರು: ಉಡುಪಿಯಲ್ಲಿ ಭಾರಿ ರೈಲು ದುರಂತವೊಂದು ಟ್ರ್ಯಾಕ್ ಮೆಂಟೈನರ್ ಸಮಯ ಪ್ರಜ್ಞೆಯಿಂದ ತಪ್ಪಿದೆ.
ನಿನ್ನೆ ರಾತ್ರಿ ಪಡುಬಿದ್ರೆ ಇನ್ನಂಜೆ ಮಧ್ಯೆ ಹಳಿಯಲ್ಲಿ ವೆಲ್ಡ್ ಫೈಲ್ಯೂರ್ ನಡೆದಿತ್ತು. ಇದನ್ನು ರೈಲ್ವೆ ಟ್ರ್ಯಾಕ್ ಮೆಂಟೈನರ್ ಪ್ರದೀಪ್ ಶೆಟ್ಟಿ ಎಂಬವರು ಪತ್ತೆ ಹಚ್ಚಿದ್ದರು. ಇದು ಪತ್ತೆಯಾದ ಕೂಡಲೇ ಅವರು ಇಲಾಖೆಗೆ ಮಾಹಿತಿ ನೀಡಿದ್ದರು. ಕೂಡಲೇ ಅದನ್ನು ದುರಸ್ತಿ ಮಾಡಲಾಗಿತ್ತು.
ಕೊಂಕಣ ರೈಲ್ವೆಯ ಈ ಟ್ರ್ಯಾಕ್ ನಲ್ಲಿ ಕೇರಳ ಮತ್ತು ಮುಂಬಯಿ ನಡುವೆ ಹಲವು ರೈಲುಗಳ ಸಂಚಾರ ನಡೆಯುತ್ತದೆ. ದೋಷ ಪತ್ತೆ ಹಚ್ಚಿದ ಪರಿಣಾಮ ಭಾರಿ ಅವಘಡಗಳು ತಪ್ಪಿದಂತಾಗಿದೆ.
ಭಾರಿ ಅವರಘಡ ತಪ್ಪಿಸಿದ ಪ್ರದೀಪ್ ಶೆಟ್ಟಿ ಅವರಿಗೆ ಇಲಾಖೆಯಿಂದ 25 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗಿದೆ.