ಕಾರ್ಪೊರೇಟ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಜೂ.ಎನ್ ಟಿಆರ್ ಮಕ್ಕಳ ಸ್ಕೂಲ್ ಫೀಸ್ ಎಷ್ಟೆಂದು ಕೇಳಿದ್ರೆ ನೀವು ದಂಗಾಗೋದು ಖಚಿತ


ಹೈದರಾಬಾದ್‌: ತೆಲುಗು ಸಿನಿಮಾ ಸ್ಟಾರ್  ಸದ್ಯ ಕೊರಟಾಲ ಶಿವ ನಿರ್ದೇಶನದ "ದೇವರ” ಚಿತ್ರದ ಶೂಟಿಂಗ್‌ನಲ್ಲಿ ಎನ್‌ಟಿಆ‌ರ್ ಬಿಜಿಯಾಗಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಎಪ್ರಿಲ್ 5 ರಂದು ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಬಳಿಕ ಎನ್‌ಟಿಆ‌ರ್ ತಮ್ಮ ಮುಂದಿನ ಚಿತ್ರವನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮಾಡಲಿದ್ದಾರೆ.

ಇನ್ನು ಜೂ. ಎನ್‌ಟಿಆರ್ ಸಮಯ ಸಿಕ್ಕಾಗಲೆಲ್ಲ ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಪತ್ನಿ ಲಕ್ಷ್ಮಿ ಪ್ರಣತಿ ಜತೆ ಪ್ರವಾಸತಾಣಗಳಿಗೆ ಭೇಟಿ ನೀಡುತ್ತಾರೆ. ಜೂ.ಎನ್‌ ಟಿಆರ್-ಲಕ್ಷ್ಮೀ ಪ್ರಣತಿ ದಂಪತಿಗೆ ಅಭಯ್ ರಾಮ್ ಹಾಗೂ ಭಾರ್ಗವ್ ರಾಮ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಪುತ್ರರ ವಿಚಾರದಲ್ಲೂ ಸಾಕಷ್ಟು ಕಾಳಜಿ ವಹಿಸುತ್ತಾರೆ.

ಇದೀಗ ಎನ್‌ಟಿಆ‌ರ್ ಪುತ್ರರಿಗೆ ಸಂಬಂಧಿಸಿದ ವಿಷಯವೊಂದು ವೈರಲ್ ಆಗಿದೆ. ಎನ್‌ಟಿಆರ್ ಅವರ ಹಿರಿಯ ಮಗ ಅಭಯ್ ರಾಮ್ ಐದನೇ ತರಗತಿಯಲ್ಲಿ ಓದುತ್ತಿದ್ದು, ಕಿರಿಯ ಮಗ ಒಂದನೇ ತರಗತಿಯಲ್ಲಿ ಓದುತ್ತಿದ್ದಾನೆ. ಇಬ್ಬರೂ ಹೈದರಾಬಾದ್‌ನ ಕಾರ್ಪೊರೇಟ್ ಶಾಲೆಯಲ್ಲಿ ಓದುತ್ತಿದ್ದಾರೆ.

ಮಕ್ಕಳಿಬ್ಬರ ವಿದ್ಯಾಭ್ಯಾಸಕ್ಕೆ ಎನ್‌ಟಿಆರ್ ಪ್ರತಿ ವರ್ಷ ವ್ಯಯಿಸುವ ಶುಲ್ಕದ ಬಗೆಗಿನ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎನ್‌ಟಿಆ‌ರ್ ತಮ್ಮ ಪುತ್ರರ ಶಿಕ್ಷಣಕ್ಕಾಗಿ ವರ್ಷಕ್ಕೆ ಸುಮಾರು 20 ಲಕ್ಷ ರೂಪಾಯಿ ಶಾಲಾ ಶುಲ್ಕವನ್ನು ಪಾವತಿಸುತ್ತಾರೆಂದು ತಿಳಿದುಬಂದಿದೆ. ಇಷ್ಟು ಚಿಕ್ಕ ವಯಸ್ಸಿನ ಮಕ್ಕಳಿಗೆ 20 ಲಕ್ಷ ರೂ.

ಸಂದಾಯ ಮಾಡುವುದು ಸಾಮಾನ್ಯ ವಿಷಯವಲ್ಲ. ಒಂದನೇ ತರಗತಿಗೆ ಈ ಮಟ್ಟದ ಶುಲ್ಕವನ್ನು ಪಾವತಿಸುತ್ತಿರುವುದರಿಂದ ಇನ್ನು ಮಕ್ಕಳ ಇನ್ನಿತರ ಅಗತ್ಯಗಳಿಗೆ ಎನ್‌ಟಿಆರ್ ಎಷ್ಟು ಖರ್ಚು ಮಾಡಬಹುದು ಊಹಿಸಿ.