-->
1000938341
ಕಿವಿ ಹೇಳುತ್ತದೆ ನಿಮ್ಮ ವ್ಯಕ್ತಿತ್ವದ ಬಗ್ಗೆ

ಕಿವಿ ಹೇಳುತ್ತದೆ ನಿಮ್ಮ ವ್ಯಕ್ತಿತ್ವದ ಬಗ್ಗೆ


ದೇಹದ ಆಕರಗಳು ವ್ಯಕ್ತಿಯ ವ್ಯಕ್ತಿತ್ವ ಎಂತದೂ ಎಂಬುದನ್ನು ತಿಳಿಸುತ್ತದೆ ಒಬ್ಬ  ಮನುಷ್ಯನ ಗುಣಗಳನ್ನು ಸಹ ದೇಹದ ಅದರ ಮೇಲೆ ತಿಳಿಯ ಬಹುದು   ಕಿವಿಯ ಆಕಾರ ಮೇಲೆ ನಿಮ್ಮಲ್ಲಿ ಅಡಗಿರುವ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯ ಬಹುದು 

ದೊಡ್ಡ ಕಿವಿ : 
ನೀವು ದೊಡ್ಡ ಕಿವಿಗಳನ್ನು ಹೊಂದಿದ್ದರೆ ನೀವು ಜೀವನದಲ್ಲಿ ಎಲ್ಲ ಪರಿಸ್ಥಿತಿಗಳನ್ನು   ಎದುರಾದರೂ ಶಾಂತಿಯಿಂದ ವರ್ತಿಸುತ್ತೀರಿ. ಸದಾ ಸ್ಥಿರತೆಯ ಮನೋಭಾವ ನಿಮ್ಮದಾಗಿರುತ್ತದೆ. ಆತ್ಮವಿಶ್ವಾಸದ ಮನೋಭಾವದವರು. ನೀವು ಸುಲಭವಾಗಿ ಯಾವುದನ್ನೂ ಬಿಟ್ಟುಕೊಡುವುದಿಲ್ಲ.  ನೀವು ಸ್ವಾವಲಂಬಿಗಳು. ಭವಿಷ್ಯದ ಬಗ್ಗೆ ನೀವು ಹೆಚ್ಚಿಗೆ ಚಿಂತಿಸುವವರಲ್ಲ.

ಚಿಕ್ಕ ಕಿವಿ ಹೊಂದಿರುವುದು : 

ಚಿಕ್ಕ ಕಿವಿಗಳನ್ನು ಹೊಂದಿರುವವರು ಸಾಮಾನ್ಯವಾಗಿ ಅಂತರ್ಮುಖಿ ವ್ಯಕ್ತಿತ್ವವದವರು. ಇವರು ಸಂಕೋಚದ ಮನೋಭಾವ ಹೊಂದಿರುತ್ತಾರೆ. ಇವರಿಗೆ ಏಕಾಂಗಿಯಾಗಿರಯುವುದು ಇಷ್ಟ. ಕುಟುಂಬದವರು ಅಥವಾ ನಿಕಟ ಸ್ನೇಹಿತರೊಂದಿಗೆ ಆನಂದದಿಂದ ಇರುತ್ತಾರೆ. ಎಲ್ಲ ಸಂದರ್ಭದಲ್ಲೂ ಮಾತನಾಡದ ಇವರು ಅಗತ್ಯವಿದ್ದಾಗ ನೀವು ಏನು ಎಂಬುದನ್ನು ಪ್ರಸ್ತುತ ಪಡಿಸುತ್ತೀರಿ. ಏಕಾಂತ ಭಾವ, ಸಾಮಾಜಿಕ ಮನೋಭಾವದ ನಡುವೆ ಸಮತೋಲನ ಸಾಧಿಸುತ್ತೀರಿ. ನೀವು ಏಕಾಂತ ಬಯಸಿದರೂ ಸಾಮಾಜಿಕ ವಿರೋಧಿಗಳಲ್ಲ.

ಕಿವಿಯೋಲೆಗಳು ಕೂಡಿಕೊಂಡತಿರುವುದು :

ಕಿವಿಯೋಲೆ ಧರಿಸುವ ಹಾಲೆಯು ಕೆಳಗಿನ ಚರ್ಮಕ್ಕೆ ಅಂಟಿಕೊಂಡಂತಿದ್ದರೆ ಅಂತಹವರು ಭಾವನಾತ್ಮಕವಾಗಿ ಸ್ಟ್ರಾಂಗ್ ಇರುತ್ತಾನೆ. ಇವರು ಸಹಾನುಭೂತಿ ಹಾಗೂ ತಿಳುವಳಿಕೆಯ ವ್ಯಕ್ತಿತ್ವ ಹೊಂದಿದವರು. ಭಾವನೆಗಳ ಜೊತೆ ಬದುಕುವುದಕ್ಕಿಂತ ತರ್ಕ ಹಾಗೂ ಕಾರಣಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವವರು.

ಮೊನಚಾದ ಕಿವಿಗಳು

ಮೊನಚಾದ ಕಿವಿಗಳನ್ನು ಹೊಂದಿರುವ ವ್ಯಕ್ತಿಗಳು ಅರ್ಥಗರ್ಭಿತ ಮತ್ತು ಕಾಲ್ಪನಿಕವಾಗಿರುತ್ತಾರೆ. ನೀವು ಜಗತ್ತನ್ನು ನೋಡುವ ವಿಶಿಷ್ಟ ವಿಧಾನವನ್ನು ಹೊಂದಿರುತ್ತೀರಿ. ಉತ್ತಮ ಭಾವನಾತ್ಮಕ ಬುದ್ದಿವಂತಿಕೆ ಇರುತ್ತದೆ. ಬೌದ್ಧಿಕ, ಮಹತ್ವಾಕಾಂಕ್ಷೆಯ ಭಾವನೆ ನಿಮ್ಮಲ್ಲಿರುತ್ತದೆ.

 

Ads on article

Advertise in articles 1

advertising articles 2

Advertise under the article