-->
1000938341
ವಿಎ ಆಕಾಂಕ್ಷಿಗಳಿಗೆ ಪ್ರಮುಖ ಸೂಚನೆ ನೀಡಿದ ಪ್ರಾಧಿಕಾರ

ವಿಎ ಆಕಾಂಕ್ಷಿಗಳಿಗೆ ಪ್ರಮುಖ ಸೂಚನೆ ನೀಡಿದ ಪ್ರಾಧಿಕಾರ


ಆಡಳಿತಾಧಿಕಾರಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಗ್ರಾ ಸಲ್ಲಿಸಿ ಶುಲ್ಕ ಪಾವತಿಸಿದ ನಂತರ ಶುಲ್ಕ ಮಾಹಿತಿಯು ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಆಗದಿದ್ದಲ್ಲಿ ಅಂಥ ಅಭ್ಯರ್ಥಿಗಳು ಅರ್ಜಿ : ಸಂಖ್ಯೆ ಮತ್ತು ಶುಲ್ಕ ಪಾವತಿಸಿದ ವಿವರಗಳನ್ನು ಇಮೇಲ್ ಮೂಲಕ ಸಲ್ಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಶುಲ್ಕ ಪಾವತಿಸಿದ ವಿವರಗಳನ್ನು ಇಮೇಲ್ ಕಳುಹಿಸಿದ ಎರಡು ದಿನಗಳ ನಂತರ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ ಎಂದು ಪ್ರಾಧಿಕಾರ ಪ್ರಕಟಣೆ ಮೂಲಕ ಅಭ್ಯರ್ಥಿಗಳಿಗೆ ಸೂಚಿಸಿದೆ.

ಪ್ರಾಧಿಕಾರವು 1000 ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿಗೆ ಚಾಲನೆ ನೀಡಿದ್ದು, ಮೇ 4ರಂದು ಆನ್‌ಲೈನ್ ಅರ್ಜಿ ಸಲ್ಲಿಕೆ ಕೊನೆಗೊಳ್ಳಲಿದೆ. ಶುಲ್ಕ ಪಾವತಿಗೆ ಮೇ 7ರ ತನಕ ಸಮಯ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆ ಹಂತದಲ್ಲಿರುವುದರಿಂದ ಅಭ್ಯರ್ಥಿಗಳಿಗೆ ಕೆಇಎ ಸೂಚನೆ ನೀಡಿದೆ. ಅಭ್ಯರ್ಥಿಗಳು ವಿವರಗಳನ್ನು ಕಳುಹಿಸಬೇಕಾದ ಇಮೇಲ್ ವಿಳಾಸ ಇಂತಿದೆ:vaopayment@ gmail.com

Ads on article

Advertise in articles 1

advertising articles 2

Advertise under the article