ಅಡುಗೆಯಲ್ಲಿ ಉಪಯೋಗಿಸುವ ಚೆಕ್ಕೆ ಸುವಾಸನೆಗೆ ಮಾತ್ರವಲ್ಲ ಇದರಲ್ಲಿ ಅನೇಕ ರೀತಿಯ ಔಷಧೀಯ ಗುಣಗಳೂ ಇವೆ. ಚೆಕ್ಕೆಯ ಉಪಯೋಗಗಳು ಈ ಕೆಳಗಿನಂತೆ ಉಂಟು
1. ಚಕ್ಕೆಯಲ್ಲಿ ಮ್ಯಾಂಗನೀಸ್, ಫೈಬರ್, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಹೆಚ್ಚಿರುವುದರಿಂದ ರಕ್ತ ಸರಾಗವಾಗಿರುವಂತೆ ನೋಡಿಕೊಳ್ಳುತ್ತದೆ.
2. ಚಕ್ಕೆ ಪುಡಿ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
3. ಕೆಲವು ಅಧ್ಯಯನದ ಪ್ರಕಾರ ಕ್ಯಾನ್ಸರ್ ಹರಡಲು ಕಾರಣವಾಗುವ ಲ್ಯುಕೆಮಿಯ ಮತ್ತು ಲಿಂಫೋಮ ಎಂಬ ಜೀವಕಣಗಳನ್ನು ಚಕ್ಕೆಯಲ್ಲಿನ ಅಂಶ ಕಡಿಮೆ ಆಗುತ್ತದೆ
4. ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಜೇನಿನೊಂದಿಗೆ 1 ಚಮಚ ಚೆಕ್ಕೆ ಪುಡಿ ಬೆರೆಸಿ ಕುಡಿದರೆ ಸಂಧಿವಾತ ಕಡಿಮೆ ಮಾಡುವುದಲ್ಲದೆ ಜ್ಞಾಪಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
5. ಒಂದು ಲೋಟ ನೀರಿಗೆ ಚಿಕ್ಕ ಪೀಸ್ ಚಕ್ಕೆಯನ್ನು ಹಾಕಿ ಚೆನ್ನಾಗಿ ಕುದಿಸಿ, ಶೋಧಿಸಿ, ಅದಕ್ಕೆ ಚಿಟಿಕೆ ಕಲ್ಲುಪ್ಪು ಮತ್ತು ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಕುಡಿದರೆ ಹೊಟ್ಟೆಯುಬ್ಬರ, ಅಜೀರ್ಣ ಸಮಸ್ಯೆಗಳಿಂದ ಉಪಶಮನ ಸಿಗುತ್ತದೆ.
ಚಕ್ಕೆಯ ನಿಯಮಿತವಾದ ಸೇವನೆಯಿಂದ ನಿಮ್ಮಆರೋಗ್ಯವನ್ನು ಕಾಪಡಿಕೊಳ್ಳ ಬಹುದು