ಮುಖದ ಸೌಂದರ್ಯ ಹೆಚ್ಚಿಸಲು ಅಕ್ಕಿ ತೊಳೆದ ನೀರು ಉತ್ತಮ ಮನೆ ಮದ್ದು
ಸುಂದರ ಮುಖಕ್ಕಾಗಿ ಹುಡುಗಿಯರು ಇಷ್ಟ ಪಡುತ್ತಾರೆ ಸುಂದರವಾಗಿ ಕಾಣಲು ಏನು ಬೇಕಾದ್ರೂ ಮಾಡುತ್ತಾರೆ.
ಫೇಶಿಯಲ್, ಬೀಚ್, ಕ್ರೀಂ ಹೀಗೆ ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಹೊಳೆಯುವ, ಸುಂದರ ಮುಖವನ್ನು ನಿಮ್ಮದಾಗಿಸಿಕೊಳ್ಳಬಹುದು.
ಅಕ್ಕಿ ತೊಳೆದ ನೀರನ್ನು ನಾವು ಹಾಳು ಮಾಡ್ತವೆ. ಆದ್ರೆ ಜಪಾನಿನ ಹುಡುಗಿಯರು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಈ ನೀರನ್ನು ಬಳಸ್ತಾರೆ. ನೀವೂ ಸುಂದರ ಚರ್ಮ ಪಡೆಯಬೇಕೆಂದಾದ್ರೆ ಈ ಸುಲಭ ಉಪಾಯವನ್ನು ಅನುಸರಿಸಿ.
ಅಕ್ಕಿ ತೊಳೆದ ನೀರು:
ಮೊದಲು ಅಕ್ಕಿಯನ್ನು ನೀರಿನಲ್ಲಿ 10 ನಿಮಿಷ ನೆನೆಸಿಡಿ. ನೀರು ಬಿಳಿ ಬಣ್ಣಕ್ಕೆ ಬರ್ತಾ ಇದ್ದಂತೆ ಆ ನೀರನ್ನು ಏರ್ ಟೈಟ್ ಜಾರಿನಲ್ಲಿ ಹಾಕಿ. ನಂತ್ರ ಹತ್ತಿಯ ಸಹಾಯದಿಂದ ಈ ನೀರನ್ನು ಮುಖಕ್ಕೆ ಹಚ್ಚಿಕೊಳ್ಳಿ.
ಈ ನೀರಿನಲ್ಲಿ ಮುಖ ತೊಳೆಯುವುದರಿಂದ ಚರ್ಮ ಹೊಳಪು ಪಡೆಯುವ ಜೊತೆಗೆ ಮುಕ್ತ ರಂಧ್ರಗಳು ಮುಚ್ಚಿ ಹೋಗುತ್ತವೆ.
ಸುಕ್ಕುಗಟ್ಟಿದ ಚರ್ಮ ಹೋಗಿ ಸುಂದರ ಚರ್ಮ ನಿಮ್ಮದಾಗುತ್ತದೆ.
ಚರ್ಮ ಇದರಿಂದ ಮೃದುವಾಗುತ್ತದೆ. ಮುಖದ ಮೇಲಿರುವ ಕಲೆಗಳು ಮಾಯವಾಗುತ್ತವೆ.
ಅಕ್ಕಿ ನೀರು-ಅಲೋವೆರಾ :
ಅರ್ಧ ಕಪ್ ಅಕ್ಕಿ ನೀರನ್ನು ತೆಗೆದುಕೊಂಡು ಅದರಲ್ಲಿ ಎರಡು ಚಮಚ ಅಲೋವೆರಾ ಜೆಲ್ ಅನ್ನು ಮಿಶ್ರಣ ಮಾಡಿ. ನಂತರ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಫೇಸ್ ಪ್ಯಾಕ್ ನಂತೆ ಚರ್ಮಕ್ಕೆ ಅನ್ವಯಿಸಿ.
ಸುಮಾರು 15 ನಿಮಿಷಗಳ ಕಾಲ ಬಿಡಿ. ನಂತರ ಸರಳ ನೀರಿನಿಂದ ತೊಳೆಯಿರಿ. ಇದು ಮೊಡವೆಗಳನ್ನೂ ಹೋಗಲಾಡಿಸಿ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಈ ರೀತಿ ಅಕ್ಕಿ ನೀರನ್ನು ಬಳಸುವುದರಿಂದ ನಿಮ್ಮ ಸೌಂದರ್ಯ ಹೆಚ್ಚುತ್ತದೆ
ಅಕ್ಕಿ ನೀರು, ಅರಿಶಿನ - ಅರ್ಧ ಕಪ್ ಅಕ್ಕಿ ನೀರಿನಲ್ಲಿ ಒಂದು ಚಮಚ ಅರಿಶಿನ ಪುಡಿಯನ್ನು ಸೇರಿಸಿ ಮುಖದ ಚರ್ಮವು ಹೊಳಪು ಮತ್ತು ಕಲೆಗಳನ್ನು ನಿವಾರಿಸುತ್ತದೆ. ನಂತರ ಮಿಶ್ರಣವನ್ನು ಫೇಸ್ ಮಾಸ್ಕ್ ಆಗಿ ಅನ್ವಯಿಸಿ.
20 ನಿಮಿಷಗಳ ನಂತರ ಸರಳ ನೀರಿನಿಂದ ತೊಳೆಯಿರಿ. ಅಕ್ಕಿ ನೀರಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ಸಮೃದ್ಧವಾಗಿವೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಹೆಚ್ಚು ಶಕ್ತಿಯುತವಾಗಿದೆ. ಇದು ಮೊಡವೆಗಳನ್ನು ಹೋಗಲಾಡಿಸಿ ಚರ್ಮವನ್ನು ಕಾಂತಿಯುತವಾಗಿಸಲು ಕೆಲಸ ಮಾಡುತ್ತದೆ.