-->

ಕಾಲಭೈರವನ ಆಶೀರ್ವಾದೊಂದಿಗೆ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ

ಕಾಲಭೈರವನ ಆಶೀರ್ವಾದೊಂದಿಗೆ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ


ವಾರಾಣಾಸಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದರು. ಕಾಶಿಯ ಕೊತ್ವಾಲ್ ಕಾಲಭೈರವನ ಆಶೀರ್ವಾದ ಪಡೆದು ನಂತರ 11.40ರ ಅಭಿಜಿನ್ ಮುಹೂರ್ತದಲ್ಲಿ ಪ್ರಧಾನಿ ನಾಮಪತ್ರ ಸಲ್ಲಿಸಿದ್ದಾರೆ. ಈ ದಿನ ಅಭಿಜಿತ್ ಮುಹೂರ್ತ, ಆನಂದ ಯೋಗ, ಸರ್ವಾರ್ಥಸಿದ್ಧಿ ಯೋಗದ ಜೊತೆಗೆ ಭೌಮ ಪುಷ್ಯ ನಕ್ಷತ್ರದ ಕಾಕತಾಳೀಯ ಸಂಗಮವಾಗಿದೆ. ಇದು ಉತ್ತಮ ಮುಹೂರ್ತದ ದಿನ ಎಂದು ಅಯೋಧ್ಯೆ ರಾಮಮಂದಿರ ಶಂಕುಸ್ಥಾಪನೆಗೆ ಶುಭ ಮುಹೂರ್ತ ನೀಡಿದ್ದ ಪಂಡಿತ್ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ಮುಹೂರ್ತದಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಪ್ರಧಾನಿ ನಾಮಪತ್ರಕ್ಕೆ ರಾಮಮಂದಿರ ಶಂಕುಸ್ಥಾಪನೆಗೆ ಶುಭ ಮುಹೂರ್ತ ನೀಡಿದ್ದ ಪಂಡಿತ್ ಗಣೇಶ್ವರ ಶಾಸ್ತ್ರಿ, ಕಾಶಿ ಸಂಗೀತ ಘರಾಣೆಯ ಸೋಮಾ ಘೋಷ್, ಚಹಾ ಅಂಗಡಿ ಮಾಲೀಕ ವಿಶ್ವನಾಥ್ ಸಿಂಗ್ ಪಪ್ಪು ಅವರು ಸೂಚಕರಾಗಿ ಸಹಿ ಹಾಕಿದ್ದಾರೆ. ಇನ್ನು ಮೋದಿ ಕಾಲಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಹಾಜರಿದ್ದರು. ವಾರಾಣಸಿಯಲ್ಲಿ ಜೂ.1ರಂದು ಕಡೆಯ ಹಂತದಲ್ಲಿ ಮತದಾನ ನಡೆಯಲಿದ್ದು, ಜೂ.4ರಂದು ಫಲಿತಾಂಶ ಹೊರಬರಲಿದೆನಾಮಪತ್ರಸನ್. ಮೋದಿ ಅವರು 2014 ಮತ್ತು 2019ರಲ್ಲಿ 2 ಬಾರಿ ಇಲ್ಲಿಂದ ಗೆದ್ದು 3ನೇ ಅವಧಿಯ ಮೇಲೆ ಕಣ್ಣಿಟ್ಟಿದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಅಜಯ್ ರಾಯ್ ಸತತ 3ನೇ ಬಾರಿ ಮೋದಿ ವಿರುದ್ಧ ಕಣಕ್ಕಿಳಿದಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article