-->
1000938341
ಹಿಂದೂ ಯುವಕನನ್ನು ವರಿಸಿದ ಮುಸ್ಲಿಂ ಯುವತಿ: ಪ್ರೀತಿಸಿ ಓಡಿ ಹೋದ ಈ ಜೋಡಿ ಎರಡು ಮಕ್ಕಳ ಹೆತ್ತವರಾದ ಬಳಿಕ ಮದುವೆಯಾಗಿದೆ

ಹಿಂದೂ ಯುವಕನನ್ನು ವರಿಸಿದ ಮುಸ್ಲಿಂ ಯುವತಿ: ಪ್ರೀತಿಸಿ ಓಡಿ ಹೋದ ಈ ಜೋಡಿ ಎರಡು ಮಕ್ಕಳ ಹೆತ್ತವರಾದ ಬಳಿಕ ಮದುವೆಯಾಗಿದೆ


ಲಖನೌ: ಮುಸ್ಲಿಂ ಯುವತಿಯೊಬ್ಬಳು ಹಿಂದು ಯುವಕನನ್ನು ವಿವಾಹವಾಗಿದ್ದು ಮಾತ್ರವಲ್ಲ, ಸನಾತನ ಧರ್ಮವನ್ನು  ಅಬುಸರಿಸುತ್ತೇನೆ ಎಂದು ಹೇಳಿದ್ದಾಳೆ. ಸದ್ಯ ಆಕೆಯ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಉತ್ತರ ಪ್ರದೇಶದ ಮಹೋಬಾ ನಗರದ ಪಾನ್‌ವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹಿಂದೂ - ಮುಸ್ಲಿಂ ಜೋಡಿಯ ಪ್ರೇಮ ವಿವಾಹ ನಡೆದಿದೆ. ಕಸಬಾ ಪನ್ವಾಡಿ ಮೂಲದ ದಿನೇಶ್ ಜೈಸ್ವಾಲ್ ಅದೇ ಗ್ರಾಮದ ಅರ್ಜು ರೈನ್ ಎಂಬ ಮುಸ್ಲಿಂ ಯುವತಿಯನ್ನು ದೇವಸ್ಥಾನದಲ್ಲಿ ಹಿಂದೂ ಧರ್ಮದ ಪ್ರಕಾರ ಮದುವೆಯಾಗಿದ್ದಾರೆ. ಅಲ್ಲದೆ, ಯುವತಿಯು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಮದುವೆಯ ಬಳಿಕ ತನ್ನ ಹೆಸರನ್ನು ಆರತಿ ಜೈಸ್ವಾಲ್ ಎಂದು ಬದಲಾಯಿಸಿಕೊಂಡಿದ್ದಾಳೆ. ಮದುವೆಯ ಬಳಿಕ ಆಕೆ ಜೈ ಶ್ರೀರಾಮ್‌ ಘೋಷಣೆ ಸಹ ಮಾಡಿದ್ದಾಳೆ.

ತನಗೆ ಸನಾತನ ಧರ್ಮವೆಂದರೆ ಬಹಳ ಪ್ರೀತಿ. ಎಲ್ಲರೂ ಸನಾತನ ಧರ್ಮದಿಂದ ಬಂದವರು. ಸನಾತನ ಧರ್ಮವನ್ನು ಸ್ವ ಇಚ್ಛೆಯಿಂದ ಸ್ವೀಕರಿಸಿದ್ದೇನೆ ಎಂದು ಅರ್ಜು ರೈನ್ ಸ್ಪಷ್ಟಪಡಿಸಿದ್ದಾರೆ.

ಅಂದಹಾಗೆ ಅರ್ಜು ರೈನ್ ಬಹಳ ವರ್ಷಗಳಿಂದ ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದಾರಂತೆ. ನವರಾತ್ರಿಗೆ ದುರ್ಗಾ ಪೂಜೆ, ಶ್ರೀರಾಮ ನವಮಿಗೆ ರಾಮನ ಪೂಜೆ ಹಾಗೂ ದೀಪಾವಳಿಗೆ ವ್ರತವನ್ನು ಕೈಗೊಳ್ಳುವುದಾಗಿ ತಿಳಿಸಿದರು. ಮುಸ್ಲಿಂ ಧರ್ಮದ ಪ್ರಕಾರ ನಿಖಾ ಎಂದರೆ ಮದುವೆ. ಆದರೆ, ಹಿಂದು ಧರ್ಮದಲ್ಲಿ ಮದುವೆಯ ಸಮಯದಲ್ಲಿ ಒಟ್ಟಿಗೆ ಇಡುವ ಏಳು ಹೆಜ್ಜೆಗಳನ್ನು ಏಳು ಜನ್ಮಗಳ ಸಂಬಂಧವೆಂದು ಪರಿಗಣಿಸಲಾಗುತ್ತದೆ.

ಅಂದಹಾಗೆ ಅರ್ಜು ರೈನ್-ದಿನೇಶ್ ಜೈಸ್ವಾಲ್‌ 2018ರಲ್ಲಿ ಮನೆಯಿಂದ ಓಡಿಹೋಗಿದ್ದಾರೆ. ಇಬ್ಬರೂ ನೋಯ್ದಾದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಮಾರು ಆರು ವರ್ಷಗಳ ಇಕ ಇಬ್ಬರೂ ಮನೆಗೆ ಹಿಂತಿರುಗಿ ಹಿಂದು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಆದರೆ ಈ ಮದುವೆಯನ್ನು ಆರತಿ ಜೈಸ್ವಾಲ್‌ ಕುಟುಂಬದವರು ಒಪ್ಪಿಕೊಳ್ಳುತ್ತಿಲ್ಲ. ತಮಗೆ ಹೆಣ್ಣು ಮಗು ಹುಟ್ಟೇ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

Ads on article

Advertise in articles 1

advertising articles 2

Advertise under the article