MANGALORE: 1 ಕೋ.ರೂ.ಕಳೆದುಕೊಂಡ ಕಡಬದ ವ್ಯಕ್ತಿ



ಮಂಗಳೂರು: ಅಪರಿಚಿತ ವ್ಯಕ್ತಿಯ ಮಾತು ನಂಬಿ ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಮಾಡಲು APP ಡೌನ್‌ಲೋಡ್‌ ಮಾಡಿಕೊಂಡು ಹಣ ಹಾಕಿ , ಅದರಿಂದ  1 ಕೋಟಿ ರೂಪಾಯಿಗೂ ಅಧಿಕ  ಹಣ ಕಳೆದುಕೊಂಡಿರುವುದಾಗಿ ಕಡಬ ತಾಲೂಕಿನ ಇಚ್ಲಂಪಾಡಿ ಕೆಡಂಬೈಲಿನ 43 ವರ್ಷದ ವ್ಯಕ್ತಿಯೋರ್ವರು ಮಂಗಳೂರು ಸೆನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

 

ವಂಚನೆಗೊಳಗಾದ ವ್ಯಕ್ತಿ ಬೆಂಗಳೂರಿನಲ್ಲಿ ವ್ಯವಹಾರ ಉದ್ಯಮ ನಡೆಸುತ್ತಿದ್ದಾರೆ. 2023ರ ಜೂನ್‌ 25ರಂದು ಟೆಲಿಗ್ರಾಂನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಯುಎಸ್‌ಡಿಟಿ ಕ್ರಿಪ್ಟೋ ಕರೆನ್ಸಿಗೆ ಹಣ ವರ್ಗಾಯಿಸಲು ಬಿನೇನ್ಸ್‌ ಆ್ಯಪ್‌ ಮತ್ತು ಡೆಫಿ ಆ್ಯಪ್‌ ಡೌನ್‌ಲೋಡ್‌ ಮಾಡುವಂತೆ ತಿಳಿಸಿದ್ದ. ಅದರಂತೆ ಆ 2 ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದು, ಬಳಿಕ ಅಪರಿಚಿತ ನೀಡಿದ ಸೂಚನೆಗಳನ್ನು ಪಾಲಿಸಿ ತಮ್ಮ ಬ್ಯಾಂಕ್‌ ಖಾತೆಗಳಿಂದ ಹಂತ ಹಂತವಾಗಿ ಒಟ್ಟು 1,05,79,711 ರೂಪಾಯಿ ಹಣ ಹಾಕಿದ್ದರು. ತಾನು ಮೋಸ ಹೋಗಿರುವ ವಿಚಾರ ಸ್ವಲ್ಪ ತಡವಾಗಿ ಅರಿವಿಗೆ ಬಂದಿದ್ದು, ದೂರು ನೀಡಿದ್ದಾರೆ.