ಕೂದಲು ಉದುರುವ ಸಮಸ್ಯೆ ಇರುವವರು ದಿನ ಬೆಳಗ್ಗೆ ಎದ್ದು ಈ ಬೀಜಗಳನ್ನು ತಿನ್ನಿ..!
Sunday, May 26, 2024
ಮೊಳಕೆಯೊಡೆದ ಮೆಂತ್ಯವನ್ನು ತಿನ್ನುವುದು ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಅದರಲ್ಲೂ ಇದು ಕೂದಲು ಉದುರುವ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಕೂದಲು ಉದುರುವುದನ್ನು ತಡೆಯಲು ಜನರು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಅವುಗಳು ಉತ್ತಮ ಫಲಿತಾಂಶ ನೀಡುವುದಿಲ್ಲ, ನೀವು ಕೂದಲು ಉದುರುವಿಕೆಯನ್ನು ತಡೆಯಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಬಯಸಿದರೆ, ಮೊಳಕೆಯೊಡೆದ ಮೆಂತ್ಯ ಬೀಜಗಳನ್ನು ತಿನ್ನಲು ಪ್ರಾರಂಭಿಸಿ.
ಮೊಳಕೆಯೊಡೆದ ಮೆಂತ್ಯ ಬೀಜಗಳನ್ನು ತಿನ್ನುವುದು ಕೂದಲು ಉದುರುವಿಕೆಯ ಸಮಸ್ಯೆಯ ಜೊತೆಗೆ ಮಧುಮೇಹಕ್ಕೆ ಸಹಾಯ ಮಾಡುತ್ತದೆ. ಅದರಲ್ಲೂ ಕೂದಲು ಉದುರುವುದರಿಂದ ಬೋಳು ಶುರುವಾದವರು ಮೊಳಕೆ ಬರಿಸಿದ ಮೆಂತ್ಯವನ್ನು ತಿನ್ನಬೇಕು. ಇದರಿಂದ ಬೋಳು ತಲೆಯಲ್ಲೂ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
ಮೊಳಕೆಯೊಡೆದ ಮೆಂತ್ಯವನ್ನು ತಿಂದರೆ, ದೇಹಕ್ಕೆ ವಿಟಮಿನ್ ಸಿ, ಕಬ್ಬಿಣ, ವಿಟಮಿನ್ ಬಿ, ಮೆಗ್ನೀಸಿಯಮ್, ಡಯೆಟರಿ ಫೈಬರ್, ಪೊಟ್ಯಾಸಿಯಮ್, ಸೋಡಿಯಂನಂತಹ ಪೋಷಕಾಂಶಗಳು ದೊರೆಯುತ್ತದೆ.. ಅಲ್ಲದೆ, ಇದು ದೇಹದಲ್ಲಿ ರಕ್ತ ಸಂಚಾರವನ್ನು ಉತ್ತಮಗೊಳ್ಳುತ್ತದೆ. ಇದು ನೆತ್ತಿಯ ರಂಧ್ರಗಳಿಗೆ ಹೇರಳವಾದ ಪೋಷಣೆಯನ್ನು ಒದಗಿಸುತ್ತದೆ.
ಮೊಳಕೆಯೊಡೆದ ಮೆಂತ್ಯವನ್ನು ಹೇಗೆ ತಿನ್ನಬೇಕು? : ಒಂದು ಚಮಚ ಮೆಂತ್ಯವನ್ನು ರಾತ್ರಿಯಿಡೀ ನೀರಿನಲ್ಲಿ ಇರಿಸಿ ಮತ್ತು ಮರುದಿನ ನೀರನ್ನು ತೆಗೆದು, ಹತ್ತಿ ಬಟ್ಟೆಯಲ್ಲಿ ಬಿಗಿಯಾಗಿ ಕಟ್ಟಿ. ಮೆಂತ್ಯ ಮೊಳಕೆ ಬರುವವರೆಗೆ ಅದನ್ನು ಹಾಗೆಯೇ ಬಿಡಿ. ಮೊಳಕೆಯೊಡೆದ ಮೆಂತ್ಯ ಬೀಜಗಳನ್ನು ನಿಯಮಿತವಾಗಿ ತಿನ್ನಿ.