-->
ರಾಹುಕಾಲದಲ್ಲಿ ಶುಭ ಕೆಲಸಗಳನ್ನು ಮಾಡುವುದರಿಂದ ಏನೆಲ್ಲ ಪರಿಣಾಮಗಳಾಗುತ್ತವೆ ಎಂದು ನಿಮಗೆ ತಿಳಿದಿದೆಯೇ..?

ರಾಹುಕಾಲದಲ್ಲಿ ಶುಭ ಕೆಲಸಗಳನ್ನು ಮಾಡುವುದರಿಂದ ಏನೆಲ್ಲ ಪರಿಣಾಮಗಳಾಗುತ್ತವೆ ಎಂದು ನಿಮಗೆ ತಿಳಿದಿದೆಯೇ..?

ರಾಹುಕಾಲವನ್ನು ಪ್ರತಿಕೂಲದ ಸಮಯವೆಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಈ ಕಾಲದಲ್ಲಿ ಯಾವುದೇ ಮಂಗಳಕರ ಕೆಲಸ ಮಾಡುವುದು ನಿಷಿದ್ಧವಾಗಿದೆ.

ರಾಹುಕಾಲ ಒಂದು ದಿನದಲ್ಲಿ ಎಷ್ಟು ಹೊತ್ತು ಇರುತ್ತದೆ? ಆ ಹೊತ್ತಿನಲ್ಲಿ ಶುಭ ಕೆಲಸವನ್ನು ಏಕೆ ಮಾಡಬಾರದು? ಅನ್ನೋದರ ಮಾಹಿತಿ ಇಲ್ಲಿದೆ ನೋಡಿ. ರಾಹು ಎಂಬುದು ಅಶುಭದ ಸಂಕೇತವಾಗಿದ್ದು, ಇದು ದೇವಾನುದೇವತೆಗಳನ್ನೂ ಬಿಟ್ಟಿಲ್ಲವೆಂದು ಹೇಳಲಾಗಿದೆ.

ಈ ಸಮಯದಲ್ಲಿ ಹೊಸ ಉದ್ಯೋಗಕ್ಕೆ ಹೋಗುವುದು, ಹೊಸ ಕೆಲಸಗಳಿಗೆ ಕೈ ಹಾಕುವುದು, ಮಂಗಳಕಾರ್ಯ ನೆರವೇರಿಸುವುದು, ಪ್ರಯಾಣ ಮಾಡಿದರೆ ಯಶಸ್ಸು ಸಿಗುವುದಿಲ್ಲ. ರಾಹುಕಾಲದಲ್ಲಿ ಪ್ರಯಾಣ ಮಾಡುವುದರಿಂದ ಅಪಘಾತ ಭಯವಿರುತ್ತದೆ ಮತ್ತು ಕೆಲಸಕ್ಕೆ ಕೈ ಹಾಕಿದರೆ ಅದು ಪೂರ್ತಿಯಾಗದೇ ಇರಬಹುದು ಎಂದು ಹೇಳಲಾಗಿದೆ. 

ಒಂದು ವೇಳೆ ಅನಿವಾರ್ಯವಾಗಿ ರಾಹುಕಾಲದ ಸಮಯಕ್ಕೆ ಪ್ರಯಾಣ ಮಾಡಬೇಕಾದರೆ ಹನುಮಂತನನ್ನು ಪೂಜಿಸಿ ಅಥವಾ ಆಂಜನೇಯನ ಮಂತ್ರ ಜಪಿಸಿ ಕೆಲಸ ಮುಂದುವರಿಸಬೇಕು. 

Ads on article

Advertise in articles 1

advertising articles 2

Advertise under the article