-->
1000938341
ಜಾನುವಾರು ಸಾಗಾಟ ಮಾಡುತ್ತಿದ್ದ ಯುವಕನಿಗೆ ಬಾಸುಂಡೆ ಬರುವಂತೆ ಹಲ್ಲೆ

ಜಾನುವಾರು ಸಾಗಾಟ ಮಾಡುತ್ತಿದ್ದ ಯುವಕನಿಗೆ ಬಾಸುಂಡೆ ಬರುವಂತೆ ಹಲ್ಲೆವಿಜಯಪುರ: ಜಾನುವಾರು ಸಾಗಾಟ ಮಾಡುತ್ತಿದ್ದ ಯುವಕನಿಗೆ ಬೆನ್ನಿನಲ್ಲಿ ಬಾಸುಂಡೆ ಬರುವಂತೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿರುವುದು ವರದಿಯಾಗಿದೆ.

ಬಂದೇ ನವಾಝ್ ಜಾತಗಾರ ಹಲ್ಲೆಗೊಳಗಾದ ದುರ್ದೈವಿ. ಬಜರಂಗದಳದ ಮುಖಂಡರಾದ ವೀರೇಶ ಹಿರೇಮಠ, ರಾಜು ಬಿರಾದಾರ ಸೇರಿದಂತೆ 15-20 ಮಂದಿಯ ತಂಡ ಹಲ್ಲೆ ನಡೆಸಿರುವುದಾಗಿ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.

ಬಂದೇ ನವಾಝ್ ಗೂಡ್ಸ್‌ ವಾಹನದಲ್ಲಿ ಎರಡು ಹೋರಿ, ಒಂದು ಆಕಳು, ಒಂದು ಎಮ್ಮೆಯ ಕರುಗಳನ್ನು ಬಬಲೇಶ್ವರದಿಂದ ವಿಜಯಪುರಕ್ಕೆ ರವಾನಿಸುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ತಡೆದು ಹಿಗ್ಗಾಮುಗ್ಗಾ ಥಳಿಸಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ನವಾಝ್ ಮೈಮೇಲೆ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Ads on article

Advertise in articles 1

advertising articles 2

Advertise under the article