ಕೆನಡಾದಲ್ಲಿ ಭೀಕರ ಅಪಘಾತ : ಮೂರು ತಿಂಗಳ ಹಸಗೂಸು ಸೇರಿ ಭಾರತೀಯ ಮೂಲದ ಮೂವರು ಮೃತ್ಯು - ಇಬ್ಬರಿಗೆ ಗಂಭೀರ ಗಾಯ
Saturday, May 4, 2024
ಟೊರಂಟೊ: ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂರುತಿಂಗಳ ಹಸುಗೂಸು ಸೇರಿದಂತೆ ಮೂವರು ಭಾರತೀಯರ ಸಹಿತ ನಾಲ್ವರು ಮೃತಪಟ್ಟಿರುವುದು ವರದಿಯಾಗಿದೆ.
ಕೆನಡಾಕ್ಕೆ ಪ್ರವಾಸ ತೆರಳಿರುವ ಭಾರತೀಯ ಮೂಲದ 60ವರ್ಷದ ವ್ಯಕ್ತಿ, 55ರ ಮಹಿಳೆ, ಅವರ 3 ತಿಂಗಳ ಮೊಮ್ಮಗು ಹಾಗೂ ಅಪಘಾತಕ್ಕೆ ಒಳಗಾದ ಕಾರಿನ ಚಾಲಕ ಮೃತಪಟ್ಟಿದ್ದಾರೆ. ಮಗುವಿನ ತಂದೆ ಮತ್ತು ತಾಯಿ ಗಾಯಗೊಂಡಿದ್ದು ತಾಯಿಯ ಸ್ಥಿತಿ ಗಂಭೀರವಾಗಿದೆ ಎಂದು ಒಂಟಾರಿಯೊ ವಿಶೇಷ ತನಿಖಾ ತಂಡ(ಎಸ್‌ಐಯು) ಹೇಳಿದೆ.
ವ್ಯಾನ್ ಒಂದನ್ನು ಕೆನಡಾ ಪೊಲೀಸರ ಜೀಪು ಬೆನ್ನಟ್ಟಿದ್ದು ತಪ್ಪಿಸಿಕೊಳ್ಳುವ ಭರದಲ್ಲಿ ವಿಲ್ಟಿ ನಗರದ ಬಳಿಯ ಹೆದ್ದಾರಿಯಲ್ಲಿ ವ್ಯಾನ್ ವಿರುದ್ಧ ದಿಕ್ಕಿನಲ್ಲಿ ಚಲಿಸಿ ಮುಂಭಾಗದಿಂದ ಬರುತ್ತಿದ್ದ 6 ವಾಹನಗಳಿಗೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಭಾರತೀಯರು ಪ್ರಯಾಣಿಸುತ್ತಿದ್ದ ಕಾರು ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ.
ಪ್ರಕರಣದಲ್ಲಿ ಪೊಲೀಸರ ವಾಹನವೂ ಒಳಗೊಂಡಿರುವುದರಿಂದ ಅಪಘಾತದ ಬಗ್ಗೆ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.