ಮೇಷ ರಾಶಿ ಈ ಬುಧಾದಿತ್ಯ ಯೋಗ ಮೊದಲು ಮೇಷ ರಾಶಿಯ ಲಗ್ನ ಮನೆಯಲ್ಲಿ ನಡೆಯುತ್ತಿದೆ, ನಂತರ ನಿಮ್ಮ 12ನೇ ಮನೆಯಲ್ಲಿ ನಡೆಯಲಿದೆ. ಇದರಿಂದಾಗಿ ತುಂಬಾನೇ ಪ್ರಯೋಜನ ಪಡೆಯಬಹುದು. ಈ ಅವಧಿಯಲ್ಲಿ ನೀವು ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಪಡೆಯುತ್ತೀರಿ, ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಕುಟುಂಬ ಜೀವನ ಕೂಡ ಉತ್ತಮವಾಗಿರಲಿದೆ.
ವೃಷಭ ರಾಶಿ ಮೇ 31ರಿಂದ ಬುಧಾದಿತ್ಯ ಯೋಗ ವೃಷಭ ರಾಶಿಯ ಲಗ್ನ ಮನೆಯಲ್ಲಿ ನಡೆಯುವುದು. ಈ ಯೋಗವು ನಿಮಗೆ ತುಂಬಾ ಫಲಪ್ರದವಾಗಿದೆ. ಈ ಯೋಗದಿಂದಾಗಿ ನಿಮಗೆ ವೃತ್ತಿ ಜೀವನದಲ್ಲಿ ಬಡ್ತಿ ಸಿಗಲಿದೆ, ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ. ಇನ್ನು ನಿಮ್ಮ ಕೆಲಸದಲ್ಲಿ ನೀವು ಉತ್ತಮ ಫಲಿತಾಂಶ ಸಿಗಲಿದೆ.
ಕರ್ಕ ರಾಶಿ
ಬುಧಾದಿತ್ಯ ಯೋಗದಿಂದಾಗಿ ಕರ್ಕ ರಾಶಿಯವರೂ ಹೆಚ್ಚಿನ ಪ್ರಯೋಜನ ಪಡೆಯಬಹುದು. ಅದರಲ್ಲೂ ವೃಷಭ ರಾಶಿಯಲ್ಲಿ ಬುಧಾದಿತ್ಯ ಯೋಗ ಉಂಟಾದಾಗ ನೀವು ನಿಮ್ಮ ಆದಾಯದಲ್ಲಿ ಹೆಚ್ಚಳ ಕಾಣಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ. ಇನ್ನು ಕೆಲಸದಲ್ಲಿಯೂ ಹೊಸ ಜವಾಬ್ದಾರಿ ಸಿಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೂ ಬುಧಾದಿತ್ಯ ಯೋಗದಿಂದಾಗಿ ನಿವು ಉತ್ತಮ ಪ್ರಯೋಜನ ಪಡೆಯುತ್ತೀರಿ. ಉದ್ಯೋಗಿಗಳು ಈ ಅವಧಿಯಲ್ಲಿ ಶುಭ ಸುದ್ದಿ ಪಡೆಯುತ್ತೀರಿ, ನಿಮ್ಮ ಸಂಬಳ ಹೆಚ್ಚಾಗಲಿದೆ. ಇನ್ನು ಈ ಅವಧಿಯಲ್ಲಿ ನೀವು ವಿದೇಶದಲ್ಲಿ ಕೆಲಸಕ್ಕಾಗಿ ಪ್ರಯತ್ನಿಸಿದರ ಈ ಅವಧಿ ಉತ್ತಮವಾಗಿರಲಿದೆ.