ಪಣೋಲಿಬೈಲು ಕೋಲ ಸೇವೆ ನೀಡುವಲ್ಲಿ ಬದಲಾವಣೆ- 4ರ ಬದಲು 8 ಮಂದಿಗೆ ಸೇವೆಯ ಅವಕಾಶ

 


ಬಂಟ್ವಾಳ: ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಭಕ್ತರು ಕೋಲ ನಿಡುವ ಸೇವೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ.

ಪಣೋಲಿಬೈಲ್ ಕ್ಷೇತ್ರದಲ್ಲಿ 23 ಸಾವಿರಕ್ಕೂ ಅಧಿಕ ಕೋಲ ಸೇವೆಗಳ ಬುಕ್ಕಿಂಗ್ಇರುವುದರಿಂದ ಭಕ್ತರಿಗೆ ಶೀಘ್ರ ಸೇವೆ ಸಂದಾಯದ ಅವಕಾಶದ ಹಿನ್ನೆಲೆಯಲ್ಲಿ ಪ್ರತೀ ದಿನ ನಡೆಯುತ್ತಿದ್ದ ಕೋಲ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ. ಈವರೆಗೆ ಪ್ರತೀದಿನ 4 ಮಂದಿಗೆ ಕೋಲ ಸೇವೆ ಮಾಡಲಾಗುತ್ತಿತ್ತು. ಈಗ ಅದನ್ನು ಬದಲಿಗೆ 8 ಮಂದಿಗೆ ಸೇವೆ ಸಂದಾಯಕ್ಕೆ ಅವಕಾಶ ನೀಡಲಾಗಿದೆ.  ಮೇ 3ರಿಂದ ಅವಕಾಶ ನೀಡಲಾಗಿದೆ.

 

ಪಣೋಲಿಬೈಲು ಕ್ಷೇತ್ರದಲ್ಲಿ ಅಗೇಲು ಹಾಗೂ ಕೋಲ ಸೇವೆಗಳು ವಿಶೇಷವಾಗಿದ್ದು, ವಾರದ 3 ದಿನ ಅಗೇಲು ಹಾಗೂ ವಾರದ 5 ದಿನ ಕೋಲ ಸೇವೆ ಸಂದಾಯವಾಗುತ್ತದೆ. ಬೆಳಗ್ಗೆ ನಿಗದಿತ ಸಮಯದೊಳಗೆ ಬಂದವರಿಗೆ ಎಷ್ಟು ಬೇಕಾದರೂ ಅಗೇಲು ಸೇವೆ ನೀಡುವುದಕ್ಕೆ ಅವಕಾಶವಿದ್ದು, ಆದರೆ ಹಿಂದೆ ದಿನವೊಂದಕ್ಕೆ ಕೋಲ ಸೇವೆ ನೀಡುವುದಕ್ಕೆ ಬರೀ ನಾಲ್ವರಿಗೆ ಮಾತ್ರ ಅವಕಾಶವಿತ್ತು.

 

ಆದರೆ ಕೋಲ ಸೇವೆಗಳ ಬುಕ್ಕಿಂಗ್ಹೆಚ್ಚಿದ್ದು, ಲೆಕ್ಕಾಚಾರ ಹಾಕಿದರೆ ಅದು ಪೂರ್ಣಗೊಳುವುದಕ್ಕೆ ಕನಿಷ್ಠ 35 ವರ್ಷ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಸೋಮವಾರ ಹಾಗೂ ಶನಿವಾರ ಹೊರತುಪಡಿಸಿ ವಾರದಲ್ಲಿ 5 ದಿನ ಕೋಲ ಸೇವೆಗೆ ಅವಕಾಶವಿದ್ದರೂ ತುಳುವಿನ ಆಟಿ ತಿಂಗಳು, ಅಮಾವಾಸ್ಯೆ, ಷಷ್ಠಿ, ಸಜೀಪ ಮಾಗಣೆಯ ಜಾತ್ರೆ, ಉತ್ಸವ ಮೊದಲಾದ ಸಂದರ್ಭ ಕೋಲ ಸೇವೆ ನಡೆಯುವುದಿಲ್ಲ. ಹೀಗಾಗಿ ವರ್ಷಕ್ಕೆ 600-700 ಮಂದಿಗೆ ಮಾತ್ರ ಕೋಲ ಸೇವೆಗೆ ಅವಕಾಶ ಸಿಗುತ್ತಿತ್ತು.

 

ಹೀಗಾಗಿ ಭಕ್ತರಿಗೆ ಶೀಘ್ರ ಸೇವೆಗೆ ಅವಕಾಶ ಸಿಗುವ ದೃಷ್ಟಿಯಿಂದ ದೈವದ ಬಳಿ ಹರಕೆ ಮಾಡಿ ಮಾಗಣೆಯ ದೈವದ ಅಪ್ಪಣೆ ಪಡೆದು ದಿನಕ್ಕೆ 4 ಕೋಲ ಸೇವೆ ನೀಡಿದರೂ ಪ್ರತೀ ಕೋಲದಲ್ಲಿ ಇಬ್ಬರಿಗೆ ಪ್ರಸಾದದಂತೆ 8 ಮಂದಿಗೆ ಪ್ರಸಾದ ನೀಡುವುದಕ್ಕೆ ನಿರ್ಧರಿಸಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೋಲ ಸೇವೆ ನೀಡಲು ಬುಕ್ಕಿಂಗ್ಮಾಡಿದವರಿಗೆ ಶೀಘ್ರ ಅವಕಾಶ ಸಿಗಲಿದೆ ಎಂದು ಪಣೋಲಿಬೈಲು ಕ್ಷೇತ್ರದ ಮೂಲಗಳು ತಿಳಿಸಿವೆ.

 

ಪಣೋಲಿಬೈಲು ಕೋಲದ ವಿಶೇಷ

ಭಕ್ತರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಪಣೋಲಿಬೈಲು ಕ್ಷೇತ್ರಕ್ಕೆ ಹರಕೆಯನ್ನು ಹೇಳುತ್ತಾರೆ. ಈ ಹರಕೆ ಕೋಲವನ್ನು ಕ್ಷೇತ್ರದಲ್ಲಿ ಸಲ್ಲಿಸಲು ಕ್ಷೇತ್ರದಲ್ಲಿ  ಬರೆಸಬೇಕು.  ಬುಕ್ಕಿಂಗ್ ಮಾಡಿದವರಿಗೆ ಕೋಲ ಸೇವೆ ನೀಡಲು ಆಗುತ್ತದೆ. ಈಗ ವಾರದಲ್ಲಿ ಐದು ದಿನ ಗಳಲ್ಲಿ ಪ್ರತಿದಿನ ನಾಲ್ಕು ಕೋಲ ಸೇವೆಗಳು ಕ್ಷೇತ್ರದಲ್ಲಿ ನಡೆಯುತ್ತದೆ. ಆದರೆ ಕಾರ್ಣಿಕ ಕ್ಷೇತ್ರಕ್ಕೆ ಕೋಲ ಹರಕೆ ಸೇವೆ ನೀಡುವ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದಲೇ ಇದೀಗ ಪ್ರತಿದಿನ ನಾಲ್ಕು ಕೋಲ ಸೇವೆ ನಡೆದರೂ ಈವರೆಗೆ ಮಾಡಿದ ಬುಕ್ಕಿಂಗ್ ಪೂರ್ಣಗೊಳ್ಳಲು 35 ವರ್ಷ ಬೇಕಾಗುತ್ತದೆ. ಆ ಕಾರಣದಿಂದ ಇದೀಗ ಕೋಲ ಸೇವೆ ಯಲ್ಲಿ  ಬದಲಾವಣೆ ಮಾಡಲಾಗಿದೆ

BREAKING NEWS
Loading latest news...
Join our WhatsApp Channel Powered By : Online Pudu