ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ: ಮೇ 31ಕ್ಕೆ ಬರುತ್ತೇನೆಂದು ವೀಡಿಯೋ ಮಾಡಿ ಮಾಹಿತಿ
Monday, May 27, 2024
ಬೆಂಗಳೂರು: ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ನಡೆಸಿರುವ ಆರೋಪ ಕೇಳಿಬರುತ್ತಿದ್ದಂತೆ ವಿದೇಶಕ್ಕೆ ಹಾರಿದ್ದರು. ಎಪ್ರಿಲ್ 26ರಂದು ರಾಜ್ಯದಿಂದ ಹೋಗಿದ್ದ ಪ್ರಜ್ವಲ್, ಇಷ್ಟು ದಿನಗಳು ಕಳೆದರೂ ಸಹ ಬೆಂಗಳೂರಿಗೆ ಮರಳಿರಲಿಲ್ಲ.
ವಿದೇಶಕ್ಕೆ ಹಾರಿದ ಬಳಿಕ ಇವರ ಮೇಲೆ ಪ್ರಕರಣ ದಾಖಲಾಗಿತ್ತು. ಆ ಬಳಿಕ ಎಸ್ಐಟಿ ಅವರನ್ನು ಬಂಧಿಸಲು ಸಜ್ಜಾಗಿತ್ತು. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮನವಿಗೂ ಸ್ಪಂದಿಸದ ಪ್ರಜ್ವಲ್, ರಾಜ್ಯಕ್ಕೆ ಹಿಂತಿರುಗಲೇ ಇಲ್ಲ. ಆದ್ರೆ, ಇಂದು ವಿದೇಶದಿಂದಲೇ ವೀಡಿಯೋ ಸಂದೇಶ ಕಳುಹಿಸಿರುವ ಸಂಸದ, ರಾಜ್ಯದ ಜನತೆಯ ಬಳಿ ಕ್ಷಮೆ ಯಾಚನೆ ಮಾಡಿದ್ದಾರೆ.
“ವಿದೇಶದಿಂದ ವೀಡಿಯೋ ರಿಲೀಸ್ ಮಾಡಿ ಮಾತನಾಡಿರುವ ಪ್ರಜ್ವಲ್ ರೇವಣ್ಣ, ರಾಜ್ಯದ ಜನತೆ, ನನ್ನ ತಾತ ಎಚ್.ಡಿ. ದೇವೇಗೌಡರು, ತಂದೆ ಮತ್ತು ತಾಯಿಗೆ ಕ್ಷಮೆಯಾಚಿಸಲು ಬಯಸುತ್ತೇನೆ. ಇದೇ ಮೇ.31ರಂದು ರಾಜ್ಯಕ್ಕೆ ಬರುತ್ತೇನೆ, ಎಸ್‌ಐಟಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗುತ್ತೇನೆ. ನನ್ನ ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು. ಇದು ಪ್ರೀ-ಪ್ಲಾನ್ ಆಗಿತ್ತು” ಎಂದಿದ್ದಾರೆ.