'ಪುಷ್ಪ 2' ಮೊದಲ ಹಾಡಿಗೆ ಭರ್ಜರಿ ರೆಸ್ಪಾನ್ಸ್: ಮುಂದಿನ ತಿಂಗಳು ಎರಡನೇ ಹಾಡು ಅನಾವರಣ - Pushpa 2 Song

 



ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಅಭಿನಯದ ''ಪುಷ್ಪ 2: ದಿ ರೂಲ್'' ಸಾಲಿನ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ವಿಶೇಷವಾಗಿ, ಇತ್ತೀಚೆಗೆ 'ಪುಷ್ಪ ಪುಷ್ಪ' ಬಿಡುಗಡೆಯಾದ ನಂತರವಂತೂ ಸಿನಿಮಾ ನೋಡುವ ಸಿನಿಪ್ರಿಯರ ಕಾತುರ ಹೆಚ್ಚಾಗಿದೆ. ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋವಾಗಿ ಹೊರಹೊಮ್ಮಿದೆ. ಮೊದಲ ಹಾಡು ಸ್ವೀಕರಿಸಿರುವ ಉತ್ತಮ ಸ್ಪಂದನೆ ಬಗ್ಗೆ ಸಂಭ್ರಮದಲ್ಲಿರುವ ಚಿತ್ರ ತಯಾರಕರು ಮುಂದಿನ ತಿಂಗಳು 2ನೇ ಹಾಡನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ.

 

4 ನಿಮಿಷ 19 ಸೆಕೆಂಡ್ಗಳ 'ಪುಷ್ಪ ಪುಷ್ಪ' ಎಂಬ ಮೊದಲ ಟ್ರ್ಯಾಕ್ ಅಲ್ಲು ಪಾತ್ರದ ಪುಷ್ಪರಾಜ್ ಹಾಡಾಗಿದೆ. ಟೈಟಲ್ಟ್ರ್ಯಾಕ್ ಲಿರಿಕಲ್ ವಿಡಿಯೋದಲ್ಲಿ ಅಲ್ಲು ಅರ್ಜುನ್ ಅವರ ಸಿಗ್ನೇಚರ್​​ ಸ್ಟೆಪ್ಸ್ ಕಾಣಬಹುದು. ಪುಷ್ಪ ಫೇಮಸ್​​ ಡೈಲಾಗ್​​ ತಗ್ಗೆದೆ ಲೇ ಮೂಲಕ ಹಾಡು ಮುಕ್ತಾಯಗೊಳ್ಳುತ್ತದೆ.

 


ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಬೆಂಗಾಲಿ ಸೇರಿ ಹಲವು ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾದ ಪುಷ್ಪ 2 ಹಾಡನ್ನು ದೇವಿ ಶ್ರೀ ಪ್ರಸಾದ್ ರಚಿಸಿದ್ದಾರೆ. ಮೊದಲ ಹಾಡಿನ ಯಶಸ್ಸನ್ನು ಗಮನಿಸಿದರೆ, ಎರಡನೇ ಹಾಡಿಗೆ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಮತ್ತಷ್ಟು ಕುತೂಹಲಕಾರಿಯಾಗಿದೆ.

 

 

ಸುಕುಮಾರ್ ನಿರ್ದೇಶನ ಚಿತ್ರದಲ್ಲಿ ಅಲ್ಲು ಅರ್ಜುನ್​​, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಅವರ ಪಾತ್ರಗಳು ಮುಂದುವರಿಯುತ್ತವೆ. ಜಗಪತಿ ಬಾಬು, ಬ್ರಹ್ಮಾಜಿ, ಅನಸೂಯಾ ಭಾರದ್ವಾಜ್ ಸೇರಿದಂತೆ ಹಲವರು ನಟರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪುಷ್ಪ: ದಿ ರೂಲ್ ಚಿತ್ರ 2021 ಪುಷ್ಪ: ದಿ ರೈಸ್ ಚಿತ್ರದ ಮುಂದುವರಿದ ಭಾಗ. ವರ್ಷ ಆಗಸ್ಟ್ 15 ರಂದು ಚಿತ್ರಮಂದಿರ ಪ್ರವೇಶಿಸಲಿದೆ. ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿರುವ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿದೆ. ಮೊದಲ ಭಾಗದಲ್ಲಿನ ಅಭಿನಯಕ್ಕೆ ಅಲ್ಲು ಅರ್ಜುನ್ ಕಳೆದ ಸಾಲಿನಲ್ಲಿ​​ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

 

ಪುಷ್ಪ ಪುಷ್ಪ ಹಾಡು ಅನಾವರಣಗೊಂಡ ಮರುದಿನ ಚಿತ್ರನಿರ್ಮಾಪಕರು ಸಾಮಾಜಿಕ ಜಾಲತಾಣದಲ್ಲಿ  ತಮ್ಮ ದಾಖಲೆಯನ್ನು ಹಂಚಿಕೊಂಡಿದ್ದರು. 6 ಭಾಷೆ ಸೇರಿ 24 ಗಂಟೆಯೊಳಗೆ ಹೆಚ್ಚು ವೀಕ್ಷಿಸಲ್ಪಟ್ಟ ಭಾರತದ ಲಿರಿಕಲ್​​ ವಿಡಿಯೋ ಸಾಂಗ್ ಎಂದು ಬರೆದುಕೊಂಡಿದ್ದರು. ಅಲ್ಲದೇ 24 ಗಂಟೆಯೊಳಗೆ 40 ಮಿಲಿಯನ್ಪ್ಲಸ್​​ ವೀವ್ಸ್​​​, 1.27 ಮಿಲಿಯನ್ಲೈಕ್ಸ್ ಪಡೆದಿದ್ದು, 15 ದೇಶಗಳಲ್ಲಿ ಟ್ರೆಂಡಿಂಗ್​​ನಲ್ಲಿದೆ ಎಂಬ ವಿಚಾರವನ್ನು ಹಂಚಿಕೊಂಡ ಚಿತ್ರ ನಿರ್ಮಾಪಕರು ಆಲ್ಟೈಮ್​​ ರೆಕಾರ್ಡ್ ಎಂದು ಪೋಸ್ಟರ್​​ನಲ್ಲಿ ತಿಳಿಸಿದ್ದರು.