-->
1000938341
ಮಂಗಳೂರು: ಅಪರಿಚಿತನನ್ನು ನಂಬಿಕೆಟ್ಟ ಇಚ್ಲಂಪಾಡಿಯ ವ್ಯಕ್ತಿ - ಕಳೆದುಕೊಂಡದ್ದು 1.05 ಕೋಟಿ

ಮಂಗಳೂರು: ಅಪರಿಚಿತನನ್ನು ನಂಬಿಕೆಟ್ಟ ಇಚ್ಲಂಪಾಡಿಯ ವ್ಯಕ್ತಿ - ಕಳೆದುಕೊಂಡದ್ದು 1.05 ಕೋಟಿಮಂಗಳೂರು: ಅಪರಿಚಿತನೊಬ್ಬನನ್ನು ನಂಬಿ ಕ್ರಿಪ್ಟೋ ಕರೆನ್ಸಿ ವ್ಯವಹಾರಕ್ಕೆ ಹೂಡಿಕೆ ಮಾಡಿದ ಉಪ್ಪಿನಂಗಡಿ ಬಳಿಯ ಇಚ್ಲಂಪಾಡಿ ನಿವಾಸಿ ವ್ಯಕ್ತಿಯೊಬ್ಬ ಒಂದು ಕೋಟಿ ರೂ.ಗೂ ಅಧಿಕ ದುಡ್ಡು ಕಳಕೊಂಡ ಘಟನೆ ನಡೆದಿದೆ.

ಇಚ್ಲಂಪಾಡಿ ಗ್ರಾಮದ ಕೆಡೆಂಬೈಲು ಪುಲಿಕ್ಕಲ್ ನಿವಾಸಿ 43ವರ್ಷದ ವ್ಯಕ್ತಿ ಹಣ ಕಳಕೊಂಡವರು. ಮೇ 25ರಂದು ಟೆಲಿಗ್ರಾಮ್ ನಲ್ಲಿ ಅಪರಿಚಿತನೊಬ್ಬ ಪರಿಚಯವಾಗಿದ್ದಾನೆ. ಆತ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಬರುವುದಾಗಿ ನಂಬಿಸಿದ್ದಾನೆ. ಅದರಂತೆ, ಅಮೆರಿಕದ ಕ್ರಿಪ್ಟೋ ಕರೆನ್ಸಿಗೆ ಹಣ ಹೂಡಿಕೆ ಮಾಡಲು ಬಿನೇನ್ಸ್ ಆ್ಯಪ್ ಮತ್ತು ಡಿಫೈ ಆ್ಯಪ್ ಡೌನ್ಲೋಡ್ ಮಾಡುವಂತೆ ತಿಳಿಸಿದ್ದಾನೆ.

ಆತ ಹೇಳಿದಂತೆ ಸಂತ್ರಸ್ತ ವ್ಯಕ್ತಿ ತಮ್ಮ ಮೊಬೈಲ್ ನಲ್ಲಿ ಎರಡೂ ಆ್ಯಪ್ ಗಳನ್ನು ಡೌನ್ಲೋಡ್ ಮಾಡಿ, ಅಪರಿಚಿತನ ಸೂಚನೆಯಂತೆ ತನ್ನ ಬ್ಯಾಂಕ್ ಖಾತೆಗಳಿಂದ 1,05,79,711 ರೂ. ಹಣ ವರ್ಗಾಯಿಸಿದ್ದಾರೆ. ಕ್ರಿಪ್ಟೋ ಕರೆನ್ಸಿಯಲ್ಲಿ ಟ್ರೇಡಿಂಗ್ ಮಾಡುವುದಕ್ಕಾಗಿ ಆ್ಯಪ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದರು. ಆದರೆ, ಆ ಬಳಿಕ ಹಣ ಹಿಂತಿರುಗಿ ತೆಗೆಯಲಾಗದೇ ಇದ್ದಾಗ ಅವರಿಗೆ ತಾವು ಮೋಸ ಹೋಗಿರುವುದು ತಿಳಿದುಬಂದಿದೆ. ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Ads on article

Advertise in articles 1

advertising articles 2

Advertise under the article