ಕೆನರಾ ಪಿ ಯು ಕಾಲೇಜಿನ ಈ ಬೆಸ್ಟ್ ಫ್ರೆಂಡ್ಸ್ ( ತುಳಸಿ- ಸಮೃದ್ದಿ) PUC ಯಲ್ಲಿ ಟಾಪರ್

 



ಕೆನರಾ ಪಿ ಯು ಕಾಲೇಜಿನ ಈ ಬೆಸ್ಟ್ ಫ್ರೆಂಡ್ಸ್ ( ತುಳಸಿ- ಸಮೃದ್ದಿ) ಪಿಯುಸಿಯಲ್ಲಿ ಟಾಪರ್


ಮಂಗಳೂರುದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟವಾಗಿದ್ದು..ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ.‌ ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ತುಳಸಿ ಪೈ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾಳೆಈಕೆಯ ಗೆಳತಿ ಸಮೃದ್ದಿ ರಾಜ್ಯಕ್ಕೆ ನಾಳ್ಕನೇ ಸ್ಥಾನ ಪಡೆದಿದ್ದಾಳೆ.

 

ತುಳಸಿ ಪೈ ಮತ್ತು ಸಮೃದ್ದಿ ಎಸ್ಎಸ್ಎಲ್ ಸಿಯಲ್ಲೂ 624 ಅಂಕ ಗಳಿಸಿ ಟಾಪರ್ ಆಗಿದ್ದಳುಇದೀಗ ಪಿಯುಸಿಯಲ್ಲೂ ಯಾವುದೇ ಟ್ಯೂಷನ್ ಪಡೆಯದೆ ಇವರಿಬ್ಬರು ಟಾಪರ್ ಆಗಿದ್ದಾರೆ.

 ತುಳಸಿ ಪೈ  595 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಟಾಪರ್ ಆಗಿ ಹೊರಹೊಮ್ಮಿದ್ದಾಳೆವಿವೇಕ್ ಪೈ ಹಾಗೂ ಉಷಾ ಪೈಯವರ ಪುತ್ರಿಯಾಗಿರುವ ತುಳಸಿ ಪೈ ಭರತನಾಟ್ಯ ಕಲಾವಿದೆಯೂ ಆಗಿದ್ದಾಳೆಮುಂದಕ್ಕೆ ಈಕೆಗೆ ಸಿಎ ಆಗಬೇಕೆಂಬ ಕನಸು ಇದೆಯಂತೆ.

 

ಸಮೃದ್ಧಿ 594 ಅಂಕ ಗಳಿಸಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾಳೆಬಂಟ್ವಾಳ ಮೂಲದ ಶರತ್ ನಾಯಕ್ ಹಾಗೂ ಲಲಿತಾ ದಂಪತಿಯ ಪುತ್ರಿಯಾದ ಸಮೃದ್ಧಿಯೂ ಟ್ಯೂಷನ್ ಇಲ್ಲದೆ ಟಾಪರ್ ಆಗಿದ್ದಾಳೆಈಕೆಗೂ ಸಿಎ ಆಗುವ ಗುರಿಯಿದೆ.

ಸಮೃದ್ಧಿ ಹಾಗೂ ತುಳಸಿ ಪೈ ಇಬ್ಬರೂ ಹೈಸ್ಕೂಲಿನಿಂದಲೂ ಜೊತೆಯಾಗಿ ಕಲಿತವರು‌. ಇದೀಗ ಇಬ್ಬರೂ ಟಾಪರ್ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆಇಬ್ಬರೂ ಶಾಲೆಗೆ ಆಗಮಿಸಿದ್ದುಪ್ರಾಧ್ಯಾಪಕರುಗಳು ಸಿಹಿತಿಂಡಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದ್ದಾರೆ.