-->
1000938341
ಯಾವ ಗಿಡಗಳು ಅಪಶಕುನದ ಸಂಕೇತ

ಯಾವ ಗಿಡಗಳು ಅಪಶಕುನದ ಸಂಕೇತ ಸಾಮನ್ಯವಾಗಿ ಮನೆಯಲ್ಲಿರುವ ಪ್ರತಿಯೊಂದು ವಸ್ತುವು ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದೆ ಎಂಬುದು ನಮ್ಮ ನಂಬಿಕೆ .
 ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೆ ಮನೆಯಲ್ಲಿ ನಕಾರಾತ್ಮಕತೆ ನೆಲೆಸಬಹುದು . ಸಂತೋಷ ಮತ್ತು ಶಾಂತಿ ಹಾಳಾಗುವ ಸಾಧ್ಯತೆ ಇರುತ್ತದೆ. 
ಮನೆಯ ಅಂದವನ್ನು ಹೆಚ್ಚಿಸಲು ಅನೇಕರು ಗಿಡಗಳನ್ನು ಇಡುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಗಿಡಗಳನ್ನು ಇಡಲು ಕೆಲವು ನಿಯಮಗಳು ಉಂಟು 

ಒಣಗಿಡ : 
ಮನೆಯಲ್ಲಿ ಯಾವುದೇ ಸಸ್ಯಗಳನ್ನು ಇರಿಸಿದ್ದರೂ ಅವು ಒಣಗದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಒಣ ಗಿಡಗಳನ್ನು ಇಟ್ಟುಕೊಳ್ಳುವುದು ನಕಾರಾತ್ಮಕತೆಗೆ ಕಾರಣವಾಗುತ್ತದೆ. ಕೆಲಸದಲ್ಲಿ ಯಶಸ್ಸು ದೊರೆಯುವುದಿಲ್ಲ.

ಬೋನ್ಸಾಯ್ : 
ವಾಸ್ತುಶಾಸ್ತ್ರದ ಪ್ರಕಾರ ಬೋನ್ಸಾಯ್ ಗಿಡವನ್ನು ಇಡುವುದು ಅಶುಭವೆಂದು ಹೇಳಲಾಗುತ್ತದೆ. ಈ ಗಿಡವನ್ನು ಮನೆಯೊಳಗೆ ಇಡುವುದು  ಒಳ್ಳೆಯದು. ಇದು ಪ್ರಗತಿಯನ್ನು ತಡೆಯುತ್ತದೆ ಮತ್ತು ನಕಾರಾತ್ಮಕತೆಯನ್ನು ತರುತ್ತದೆ. ಅದನ್ನು ಮನೆಯ ಹೊರಗೆ ಇಡಬಹುದು.

ಕಳ್ಳಿ ಗಿಡ : 
 ಕಳ್ಳಿಗಿಡವನ್ನು ಮನೆಯಲ್ಲಿ ಇಡುತ್ತಾರೆ. ವಾಸ್ತುಶಾಸ್ತ್ರದ ಪ್ರಕಾರ ಕ್ಯಾಕ್ಟಸ್ ಮನೆಗೆ ಅಶುಭವೆಂದು ಹೇಳಲಾಗುತ್ತದೆ. ಮುಳ್ಳಿನ ಗಿಡವನ್ನು ಮನೆಯಲ್ಲಿ ಇಡಬಾರದು ಅದು ದುರಾದೃಷ್ಟವನ್ನು ತರುತ್ತದೆ. ಮನೆಯಲ್ಲಿ ನಕಾರಾತ್ಮಕತೆ ಹರಡುತ್ತದೆ.

ನಿಂಬೆ ಅಥವಾ ನೆಲ್ಲಿಕಾಯಿ  : 
ತೋಟಗಳಲ್ಲಿ ನಿಂಬೆ ಅಥವಾ ನೆಲ್ಲಿಕಾಯಿ ಗಿಡಗಳನ್ನು ನೆಡುತ್ತಾರೆ. ಆದರೆ ಮನೆಯೊಳಗೆ ಇವುಗಳನ್ನು ಇಡಬಾರದು. ನಿಂಬೆ ಹಾಗೂ ನೆಲ್ಲಿಕಾಯಿ ಗಿಡಗಳನ್ನು ಮನೆಯೊಳಗಿಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿ ತೊಂದರೆಗಳನ್ನು ಹೆಚ್ಚಿಸುತ್ತದೆ .

Ads on article

Advertise in articles 1

advertising articles 2

Advertise under the article