-->

ಫೋನ್ ಬಳಕೆಯಿಂದ ಉಂಟಾಗುವ ಸಮಸ್ಯೆಗಳು ಏನು

ಫೋನ್ ಬಳಕೆಯಿಂದ ಉಂಟಾಗುವ ಸಮಸ್ಯೆಗಳು ಏನು


ಕಣ್ಣುಗಳು ಮಾನವನಿಗೆ ಏಷ್ಟು  ಮುಖ್ಯ ಎಂದು ಗೊತ್ತಿದ್ದರೂ ಸಹ  ಸ್ಮಾರ್ಟ್ ಫೋನ್, ಗ್ಯಾಝಟ್‌ಗಳ ಬಳಕೆ ಹೆಚ್ಚಗಿದ್ದು ಕಣ್ಣಿಗೆ  ಹಾನಿ ಉಂಟುಮಾಡುತ್ತದೆ . ವಿಶ್ವದಲ್ಲಿ ಈಗ ಸುಮಾರು 3.5 ಬಿಲಿಯನ್ ಸ್ಮಾರ್ಟ್ ಫೋನ್ ಬಳಕೆದಾರರಿದ್ದಾರೆ ಮತ್ತು ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಪ್ರತಿದಿನ ಸರಾಸರಿ 3 ಗಂಟೆ 15 ನಿಮಿಷಗಳನ್ನು ಕಳೆಯುತ್ತಾರೆ. ಹೀಗಾಗಿ ಸೆಲ್ ಫೋನ್ ಬಳಕೆಯಿಂದ ಕಣ್ಣಿಗೆ ಉಂಟಾಗುವ ಹಾನಿಯನ್ನು ತಿಳಿಯಿರಿ .
ಸ್ಮಾರ್ಟ್‌ ಫೋನ್‌ ಬಳಕೆಯಿಂದ ಉಂಟಾಗುವ ಸಮಸ್ಯೆ ಏನು :
ಸ್ಮಾರ್ಟ್‌ ಫೋನ್‌ ದೀರ್ಘಕಾಲ ನೋಡುವುದರಿಂದ ಆಯಾಸ, ತುರಿಕೆ, ಕಣ್ಣು ಶುಷ್ಕವಾಗುವುದು ಅಥವಾ ಮಸುಕಾದ ದೃಷ್ಟಿ ಮತ್ತು ತಲೆನೋವುಗಳಂತಹ ವಿವಿಧ ಸಮಸ್ಯೆಗಳಿಗೆ ಕಂಡುಬರಬಹುದು. ಮೊಬೈಲ್ ಫೋನ್ ಬಳಕೆಯಿಂದ ಉಂಟಾಗುವ ಕಣ್ಣಿನ ಹಾನಿಯು ದೀರ್ಘಕಾಲೀನವಾಗಿರುವುದರಿಂದ ನಂತರ ಚಿಕಿತ್ಸೆಯನ್ನು ಹುಡುಕುವ ಬದಲು ಅದನ್ನು ತಡೆಗಟ್ಟುವುದು ಜಾಣತನ. ಸಂಶೋಧನೆಗಳ ಪ್ರಕಾರ ಮೊಬೈಲ್ ಫೋನ್ ಹೊರ ಸೂಸುವ ನೀಲಿ ಬೆಳಕು ಕಣ್ಣು ಮತ್ತು ರೆಟಿನಾಗೆ ಅಪಾಯಕಾರಿ. ಏಕೆಂದರೆ ಈ ಬೆಳಕನ್ನು ಕಾರ್ನಿಯಾ ಮತ್ತು ಲೆನ್ಸ್ ತಡೆಯುವುದಿಲ್ಲ.
ಪದೇ ಪದೆ ಕಣ್ಣು ಮಿಟುಕಿಸುವುದು ಸೂಕ್ತ :
ಸ್ಮಾರ್ಟ್‌ಫೋನ್ ನೋಡುವಾಗ ಎಷ್ಟು ತನ್ಮಯರಾಗಿರುತ್ತಾರೆ ಎಂದರೆ ಕಣ್ಣು ಮಿಟುಕಿಸಲೂ ಮರೆತು ಬಿಡುತ್ತಾರೆ.ಇದು ಬಹಳ ಅಪಾಯಕಾರಿ. ಆದ್ದರಿಂದ ಆಗಾಗ ಕಣ್ಣು ಮಿಟುಕಿಸುತ್ತಿರಿ. ಕಾಲಕಾಲಕ್ಕೆ ಕಣ್ಣು ಮಿಟುಕಿಸುವುದು ಎರಡು ರೀತಿಯಲ್ಲಿ ಸಹಾಯ ಮಾಡುತ್ತದೆ. ಮೊದಲನೆಯದಾಗಿ ನಿಮ್ಮ ಕಣ್ಣುಗಳನ್ನು ತೇವವಾಗಿಡುವ ಮೂಲಕ ಶುಷ್ಕತೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಎರಡನೆಯದಾಗಿ, ನಿಮ್ಮ ಕಣ್ಣುಗಳನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. 15 ನಿಮಿಷಗಳಲ್ಲಿ ಸುಮಾರು 10 ಬಾರಿ ಕಣ್ಣು ಮಿಟುಕಿಸುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ .
20-20-20 ನಿಯಮ ಎಂದರೆ ಪ್ರತಿ 20 ನಿಮಿಷಗಳಿಗೊಮ್ಮೆ, 20 ಸೆಕೆಂಡುಗಳ ಕಾಲ, ನಿಮ್ಮ ಸ್ಮಾರ್ಟ್‌ಫೋನ್ ಪರದೆಯಿಂದ 20 ಅಡಿ ದೂರದಲ್ಲಿರುವ ವಸ್ತುವನ್ನು ನೋಡುವುದು. ಇದು ನಿಮ್ಮ ಕಣ್ಣುಗಳಿಗೆ ಸಾಕಷ್ಟು ವಿಶ್ರಾಂತಿ ನೀಡುತ್ತದೆ.
ಬ್ರಿಟ್‌ನೆಸ್ ಕಡಿಮೆ ಮಾಡಿ ಕೊಳ್ಳುವುದು
ನಿಮ್ಮ ಮೊಬೈಲ್ ಫೋನ್‌ನ ಡಿಸ್‌ಪ್ಲೇ ಪ್ರಕಾಶವು ಪರಿಸರದಲ್ಲಿನ ಬೆಳಕಿಗೆ ಸಮಾನವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಡಿಸ್‌ಪ್ಲೇ ತುಂಬಾ ಪ್ರಕಾಶಮಾನವಾಗಿ ಅಥವಾ ತುಂಬಾ ಗಾಢವಾಗಿರುವುದು ಕಣ್ಣುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಡಿಸ್‌ಪ್ಲೇ ಬ್ರಿಟ್‌ನೆಸ್ ಕಡಿಮೆ ಮಾಡುವುದು ಕಣ್ಣಿನ ಆರೋಗ್ಯದ ಮೇಲೆ ಅಗಾಧ ಪರಿಣಾಮ ಬೀರಬಲ್ಲದು.
ಅಕ್ಷರ, ಕಾಂಟ್ರಾಸ್ಟ್ ಸರಿಹೊಂದಿಸಿ:
ನಿಮ್ಮ ಸ್ಕಿನ್ನನ ಅಕ್ಷರ ಮತ್ತು ಕಾಂಟ್ರಾಸ್ಟ್ ಅನ್ನು ಸೂಕ್ತವಾಗಿ ಹೊಂದಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇದು ಹೆಚ್ಚು ಒತ್ತಡವನ್ನು ಉಂಟು ಮಾಡದೆ ನಿಮ್ಮ ಕಣ್ಣುಗಳಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ .
ಡಿಸ್‌ಪ್ಲೇಯನ್ನು ನಿಯಮಿತವಾಗಿ ಶುಚಿಗೊಳಿಸುತ್ತ ಇರಿ :
ನಿಮ್ಮ ಸ್ಮಾರ್ಟ್‌ಫೋನ್ ಡಿಸ್ ಪ್ಲೇಯನ್ನು ಆಗಾಗ ಸ್ವಚ್ಛವಾದ ಒಣ ಬಟ್ಟೆಯಿಂದ ಒರೆಸಿ. ಇದು ಸಂಗ್ರಹವಾಗಿರುವ ಕೊಳೆ, ಧೂಳನ್ನು ಹೋಗಲಾಡಿಸಿ ಸ್ಪಷ್ಟವಾಗಿ ಕಾಣಿಸಲು ನೆರವಾಗುತ್ತದೆ. ಇದರಿಂದ ಕಣ್ಣುಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ಸರಿಯಾದ ಅಂತರ ಕಾಪಾಡಿಕೊಳ್ಳಿ:
ಹೆಚ್ಚಿನ ಜನರು ತಮ್ಮ ಫೋನ್ ಅನ್ನು ಮುಖದಿಂದ ಸುಮಾರು 8 ಇಂಚು ದೂರದಲ್ಲಿ ಹಿಡಿದಿರುತ್ತಾರೆ. ಇನ್ನು ಕೆಲವರು ತುಂಬಾ ಹತ್ತಿರ ಹಿಡಿಯುತ್ತಾರೆ. ಇದು ಎರಡು ಕೂಡ ಅಪಾಯಕಾರಿ. ಆದ್ದರಿಂದ ದೀರ್ಘಕಾಲದ ಸ್ಮಾರ್ಟ್‌ಫೋನ್ ಬಳಕೆಯಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಸುಮಾರು 16ರಿಂದ 18 ಇಂಚುಗಳ ಅಂತರವನ್ನು ಕಾಪಾಡಿಕೊಳ್ಳಿ.
ಸರಿಯಾದ ಅಂತರ ಕಾಪಾಡಿಕೊಳ್ಳಿ :
ಹೆಚ್ಚಿನ ಜನರು ತಮ್ಮ ಫೋನ್ ಅನ್ನು ಮುಖದಿಂದ ಸುಮಾರು 8 ಇಂಚು ದೂರದಲ್ಲಿ ಹಿಡಿದಿರುತ್ತಾರೆ. ಇನ್ನು ಕೆಲವರು ತುಂಬಾ ಹತ್ತಿರ ಹಿಡಿಯುತ್ತಾರೆ. ಇದು ಎರಡು ಕೂಡ ಅಪಾಯಕಾರಿ. ಆದ್ದರಿಂದ ದೀರ್ಘಕಾಲದ ಸ್ಮಾರ್ಟ್‌ಫೋನ್ ಬಳಕೆಯಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಸುಮಾರು 16ರಿಂದ 18 ಇಂಚುಗಳ ಅಂತರವನ್ನು ಕಾಪಾಡಿಕೊಳ್ಳಿ.
ನಿಮ್ಮ ಆರೋಗ್ಯದ ಮೇಲೆ ಗಮನ ಹರಿಸಿ.

Ads on article

Advertise in articles 1

advertising articles 2

Advertise under the article