-->
1000938341
ಜೀವನದಲ್ಲಿ ಸಂತೋಷವಾಗಿರುವುದು ಹೇಗೆ

ಜೀವನದಲ್ಲಿ ಸಂತೋಷವಾಗಿರುವುದು ಹೇಗೆ


ಜೀವನದಲ್ಲಿ ಪ್ರತಿಯೊಬ್ಬರೂ ಸಹ ಸಂತೋಷವಾಗಿರಲು ಇಚ್ಛಿಸುತ್ತಾರೆ.
ಪ್ರತಿಯೊಬ್ಬರ ಸಂತೋಷವೂ ಭಿನ್ನವೇ. ಹೀಗಾಗಿ ಸಂತೋಷವು ಒಬ್ಬ ರಿಂದ ಒಬ್ಬರಿಗೆ ಬೇರೆ ಬೇರೆಯಾಗಿಯೇ ಇರುತ್ತದೆ. 
ಕೃತಜ್ಞತೆ ಸಲ್ಲಿಸಿ : 
 ಎದ್ದ ಕೂಡಲೇ, ನಮ್ಮನ್ನು ಚೆನ್ನಾಗಿ ಇಟ್ಟಿರುವ ಎಲ್ಲರಿಗೂ, ನಂಬಿದ ಭಗವಂತನಿಗೂ ಕೈಮುಗಿದು ಕೃತಜ್ಞತೆ ಸಲ್ಲಿಸುವ ಅಭ್ಯಾಸವನ್ನು ಇಟ್ಟುಕೊಂಡಿರುವುದನ್ನು ಕಂಡಿರಬಹುದು . ಮಂದಿಯನ್ನು ನೋಡಿ, ಅವರು ತಾವು ಈವರೆಗೆ ಪಡೆದುದಕ್ಕೆ, ಅದು ಸಂತೋಷವಿರಲಿ ದುಃಖವಿರಲಿ, ಒಂದು ಆನಂದದಾಯಕ ಅನುಭೂತಿಯಲ್ಲಿರುತ್ತಾರೆ.
ಈ ಅಭ್ಯಾಸ ಒಳ್ಳೆಯದು
ನಮ್ಮ ಇಷ್ಟಗಳಿಗೆ, ನಮ್ಮ ಖುಷಿಗಳಿಗೆ ದಿನದ ಒಂದಷ್ಟು ಸಮಯವನ್ನು ಮೀಸಲಿಡುವುದು, ಅದರಿಂದ ಖುಷಿಯನ್ನು ಕಾಣುವುದು ಕೆಲವರಿಗೆ ಅಭ್ಯಾಸವಾಗಿಬಿಟ್ಟಿರುತ್ತದೆ. ಅದೊಂದು ರಾತ್ರಿಯ ಪುಟ್ಟ ವಾಕ್ ಇರಬಹುದು, ಒಂದೆರಡು ಪುಟವಾದರೂ ದಿನವೂ ಓದಿಯೇ ಮಲಗುವುದಿರಬಹುದು, ಅಥವಾ ಪ್ರೀತಿಪಾತ್ರರ ಜೊತೆಗೆ ಒಂದತ್ತು ನಿಮಿಷ ಮಾತನಾಡುವುದು ಇರಬಹುದು. ಇಂಥವರು ಸಂತೋಷವಾಗಿರುತ್ತಾರೆ. ತಮ್ಮ ಜೀವನದ ಬಗ್ಗೆ ಅವರಿಗೆ ದೂರುಗಳಿರುವುದಿಲ್ಲ.
ಹೊಸ ಕಲಿಕೆಯನ್ನು ಪ್ರಾರಂಭಿಸಿ: 
ತನ್ನ ಬೆಳವಣಿಗೆಯಲ್ಲಿ ನಂಬಿಕೆಯಿಟ್ಟಿರುವುದು ಒಳ್ಳೆಯದು.
 ತನ್ನ ಕಷ್ಟಗಳನ್ನು ಹಳಿದುಕೊಂಡು ಅಲ್ಲೇ ನಿಂತಿರುವುದಿಲ್ಲ. ಸಾಧ್ಯತೆಗಳನ್ನು ಹುಡುಕಿಕೊಂಡು ಸದಾ ಹೊಸ ಕಲಿಕೆಯ ತುಡಿತವನ್ನು ಹೊಂದಿರುವ ಮಂದಿ ಸದಾ ಖುಷಿಯಾಗಿರುತ್ತಾರೆ
ತಾಳ್ಮೆ, ಶಾಂತಿ ಇರಲಿ 
ದಯಾಪರರು ಸದಾ ಒಂದು ಬಗೆಯ ತಾಳ್ಮೆ ಶಾಂತಿಯನ್ನು ಬದುಕಿನಲ್ಲ ರೂಢಿಸಿಕೊಂಡಿರುತ್ತಾರೆ. ಇನ್ನೊಬ್ಬರ ಕಷ್ಟಗಳಿಗೆ ಕರಗುವ ಇವರು ತಮ್ಮ ಕೈಲಾಗುವ ಸಹಾಯ ಮಾಡುತ್ತಾರೆ. ಬೇರೆವರ ಕಷ್ಟಗಳಿಗೆ ಇವರ ಹೃದಯ ಮಿಡಿಯುತ್ತದೆ.

ಜವಾಬ್ದಾರಿ ನಿಭಾಯಿಸಿ 
ಜೀವನ ಎಷ್ಟೇ ಬ್ಯುಸಿಯಿರಲಿ, ಇವರು ತಮ್ಮ ಒತ್ತಡದಿಂದ ಹೈರಾಣಾಗುವುದಿಲ್ಲ. ಎಲ್ಲವನ್ನೂ ಶಾಂತಿಯಿಂದ, ಸಮಾಧಾನದಿಂದ ಬ್ಯಾಲೆನ್ಸ್ ಮಾಡುತ್ತಾರೆ. ತಮ್ಮ ಕೆಲಸದ ಒತ್ತಡಕ್ಕಾಗಿ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದಿಲ್ಲ. ಕೆಲಸದ ಜೊತೆಗೆ ಜವಾಬ್ದಾರಿಗಳನ್ನೂ ನಿಭಾಯಿಸಿಕೊಂಡು, ತಮ್ಮ ಖುಷಿಯನ್ನೂ ಕಂಡುಕೊಳ್ಳುತ್ತಾರೆ. ತೃಪ್ತಿ ಇವರ ಸಂತೋಷದ ಕೀಲಿಕೈ.

ಬದಲಾವಣೆಗೆ ಹೊಂದಿಕೊಳ್ಳಿ 
ಬದುಕು ಅಂದುಕೊಂಡ ಹಾಗೆ ಇರುವುದಿಲ್ಲ. ಬದಲಾವಣೆಗಳು ಖಂಡಿತ. ಆದರೆ, ಬದಲಾವಣೆಗಳನ್ನು ಸಹಜವಾಗಿ ಸ್ವೀಕರಿಸಿ ಬದುಕನ್ನು ಸಂಪೂರ್ಣವಾಗಿ ಅನುಭವಿಸುವುದು ಬದುಕಿನ ನಿಜವಾದ ಪಯಣ. ಇಂಥವರು ಬದುಕಿನ ಇಂಥನ ಅನಪೇಕ್ಷಿತ ಮಜಲುಗಳನ್ನೂ ಸಮಾಧಾನದಿಂದ ಸ್ವೀಕರಿಸುತ್ತಾರೆ.
 ವಿವಿಧ  ವಿಚಾರಗಳಲ್ಲಿ ತೊಡಗಿಸಿಕೊಂಡಿರುವ ಮಂದಿ ಯಾವಾಗಲೂ ಸಂತೋಷವಾಗಿರುತ್ತಾರೆ. ಸಂಬಂಧಗಳಿಗೆ ಬೆಲೆ ಕೊಡುವ, ಪ್ರೀತಿ ಪಾತ್ರರನ್ನು ಸಂತೋಷವಾಗಿಟ್ಟಿರುವ, ಅವರಿಗಾಗಿ ಸಮಯ ಮಾಡಿಕೊಳ್ಳುವ ಮನೋಭಾವ ಹೊಂದಿರುವ, ಅವರ ಖುಷಿಯಲ್ಲಿ ಪ್ರೀತಿಯಲ್ಲಿ ಸಂತೋಷ ಹೊಂದುವ ಮಂದಿ ಖುಷಿಯಾಗಿರುತ್ತಾರೆ. ಸಣ್ಣ ಸಣ್ಣ ಖುಷಿಗಳೂ ಇವರನ್ನು ಸುಖವಾಗಿಟ್ಟಿರುತ್ತವೆ.

Ads on article

Advertise in articles 1

advertising articles 2

Advertise under the article