-->

ಹಿಮ್ಮಡಿ ಯಾಕೆ ಒಡೆಯುತ್ತದೆ , ಹಿಮ್ಮಡಿ ಒಡೆತ ತಡೆಯಲು ಮನೆಮದ್ದು ಯಾವುದೂ

ಹಿಮ್ಮಡಿ ಯಾಕೆ ಒಡೆಯುತ್ತದೆ , ಹಿಮ್ಮಡಿ ಒಡೆತ ತಡೆಯಲು ಮನೆಮದ್ದು ಯಾವುದೂ



ಸಾಮನ್ಯವಾಗಿ ಎಲ್ಲಾರೂ ಚಳಿಗಾಲ ಮತ್ತು ಬೇಸಿಗೆಯಲ್ಲಿ ಅನುಭಿಸುವ ಸಮಸ್ಯೆ ಅಂದ್ರೆ ಅದೂ ಹಿಮ್ಮಡಿ ಒಡೆಯುವುದು ಈರೀತಿ ಒಡೆದ ಹಿಮ್ಮಡಿ ಪಾದದ ಅಂದವನ್ನು ಹಾಳು ಮಾಡುತ್ತದೆ.
ಜನರ ತ್ವಚೆ ತುಂಬಾ ಒಣಗಿದಾಗ ಹಿಮ್ಮಡಿಯು ಒಣಗಿ, ಸಿಪ್ಪೆ ಏಳುತ್ತದೆ. ಹಿಮ್ಮಡಿ ಬಿರಿಯುತ್ತದೆ. ಇದು ಕೆಲವೊಮ್ಮೆ ತುಂಬಾ ನೋವು ಉಂಟು ಮಾಡುತ್ತದೆ. ಚರ್ಮದಲ್ಲಿ ತೇವಾಂಶ ಕಡಿಮೆಯಾದಾಗ ಹಿಮ್ಮಡಿ ಸಮಸ್ಯೆ ಹೆಚ್ಚಾಗುತ್ತದೆ. 
ಹಿಮ್ಮಡಿ ಒಡೆತಕ್ಕೆ ಕಾರಣವೇನು : 
ದೇಹದಲ್ಲಿ ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಬಿ-3 ಕೊರತೆ ಉಂಟಾದಾಗ ಹಿಮ್ಮಡಿ ಬಿರುಕು ಬಿಡುತ್ತದೆ.
 ಅದೇ ವೇಳೆ ಶುಷ್ಕತೆ ಮತ್ತು ಬೇಸಿಗೆಯಲ್ಲಿ ಕಡಿಮೆ ನೀರು ಕುಡಿಯುವುದರಿಂದ, ಹಿಮ್ಮಡಿಗಳು ಬಿರಿಯುತ್ತವೆ. 
ದೇಹದಲ್ಲಿ ತೇವಾಂಶ ಕಡಿಮೆಯಾದಾಗ 
ಮತ್ತೊಂದೆಡೆ ವಿಟಮಿನ್ ಇ ಕೊರತೆಯು ಚರ್ಮದಲ್ಲಿ ಬಿರುಕು ಉಂಟು ಮಾಡಬಹುದು. ಈ ಜೀವಸತ್ವಗಳು ಉತ್ತಮ ಚರ್ಮಕ್ಕಾಗಿ ಬಹಳ ಮುಖ್ಯ. ಅವು ಕಾಲಜನ್ ಉತ್ಪಾದನೆ ಹೆಚ್ಚು ಮಾಡುತ್ತವೆ. ಮತ್ತು ಚರ್ಮಕ್ಕೆ ರಕ್ಷಣೆ ನೀಡುತ್ತವೆ. ಕೆಲವೊಮ್ಮೆ ಚರ್ಮದಲ್ಲಿ ಶುಷ್ಕತೆ ಖನಿಜಗಳು, ಸತು ಮತ್ತು ಒಮೆಗಾ 3, ಕೊಬ್ಬಿನಾಮ್ಲಗಳ ಕೊರತೆಯಿಂದಲೂ ಹಿಮ್ಮಡಿ ಒಡೆಯುತ್ತದೆ
ಹಿಮ್ಮಡಿಗಳು ಬಿರುಕು ಬಿಟ್ಟರೆ ಏನು ಮಾಡಬೇಕು?
ಬೇಸಿಗೆಯಲ್ಲಿ ಶುಷ್ಕತೆಯಿಂದ ಹಿಮ್ಮಡಿಗಳು ಬಿರುಕು ಬಿಡುತ್ತವೆ. ಇದಕ್ಕಾಗಿ, ದಿನದಲ್ಲಿ ಸಾಕಷ್ಟು ನೀರು ಕುಡಿಯಿರಿ.
ಬೇಸಿಗೆಯಲ್ಲಿ, ನೀರಿನಂಶವಿರುವ ಹಣ್ಣುಗಳು ಮತ್ತು ಜ್ಯೂಸ್, ತೆಂಗಿನ ನೀರು, ನಿಂಬೆ ಪಾನಕದಂತಹ ದ್ರವಗಳ ಸೇವನೆ ಹೆಚ್ಚು ಮಾಡಿ. ಇದರಿಂದ ಚರ್ಮ ಮೃದುವಾಗುತ್ತದೆ.
ಅನೇಕ ಬಾರಿ ತೆರೆದ ಪಾದರಕ್ಷೆ ಧರಿಸುವುದು ಕಣಕಾಲುಗಳಲ್ಲಿ ಕೊಳಕು ಉಂಟು ಮಾಡುತ್ತದೆ. ಇದು ನಿಮ್ಮ ಹಿಮ್ಮಡಿಗಳು ಬಿರಿಯಲು ಕಾರಣವಾಗುತ್ತದೆ. ನೀವು ಚೆನ್ನಾಗಿ ಉಜ್ಜುವ ಮೂಲಕ ಕಣಕಾಲುಗಳನ್ನು ಸ್ವಚ್ಛ ಮಾಡಿಕೊಳ್ಳಿ.
ರಾತ್ರಿಯಲ್ಲಿ ಮಲಗುವಾಗ ನೀವು ಹಿಮ್ಮಡಿಗೆ ಮುಲಾಮು ಹಚ್ಚಿರಿ. ಮತ್ತು ಎಫೋಲಿಯೇಟ್ ಮಾಡಲು ಇದು ನಿಮ್ಮ ಹಿಮ್ಮಡಿಯನ್ನು ಸಾಫ್ಟ್ ಮಾಡುತ್ತದೆ.
ಸ್ವಲ್ಪ ಸಮಯದವರೆಗೆ ಉಗುರು ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ನೆನೆಸಿಟ್ಟು ನಂತರ ಪ್ಯೂಮಿಸ್ ಕಲ್ಲಿನಿಂದ ಹಿಮ್ಮಡಿಗಳನ್ನು ಸ್ವಚ್ಛ ಮಾಡುವುದು ಪ್ರಯೋಜನಕಾರಿ ಆಗಿದೆ.
ಹಿಮ್ಮಡಿಯ ಜೀವಕೋಶಗಳಿಗೆ ಹಾನಿ ಮಾಡುವ ಪ್ರಕ್ರಿಯೆ ನಿಧಾನಗೊಳಿಸಲು ವಿಟಮಿನ್ ಇ ಸಹಕಾರಿ ಆಗಿದ್ದು, ಕೆಲವು ಬೀಜಗಳನ್ನು ಆಹಾರದಲ್ಲಿ ಬಳಸಿ.ಶುಷ್ಕತೆ ಕಡಿಮೆ ಮಾಡಲು ವಿಟಮಿನ್ ಸಿ ಸೇವನೆ ಮಾಡಿ. ಇದರ ಆಸ್ಕೋರ್ಬಿಕ್ ಆಮ್ಲವು ಟ್ರಾನ್ಸ್- ಎಪಿಡರ್ಮಲ್‌ ನೀರಿನ ನಷ್ಟದ ಮೇಲೆ ಕಾರ್ಯ ನಿರ್ವಹಿಸುತ್ತದೆ. ಆಹಾರದಲ್ಲಿ ಸಿಟ್ರಸ್ ಹಣ್ಣುಗಳನ್ನು ಸೇರಿಸಿ ಸೇವನೆ ಮಾಡುವುದು ಪ್ರಯೋಜನ ನೀಡುತ್ತದೆ

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article