-->
1000938341
ಬೇಸಿಗೆಯಲ್ಲಿ ಆಹಾರ ಹೇಗಿದ್ದರೆ ಒಳ್ಳೆಯದು ?

ಬೇಸಿಗೆಯಲ್ಲಿ ಆಹಾರ ಹೇಗಿದ್ದರೆ ಒಳ್ಳೆಯದು ?ಫೆಬ್ರವರಿ ತಿಂಗಳ ಕೊನೆಯಲ್ಲಿ ಬಿಸಿಲಿನ  ದಗೆ ಹೆಚ್ಚಿರುತ್ತದೆ ಹೀಗೆ ಮುಂದುವರೆದರೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಈ ಸುಡು ಬಿಸಿಲು ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ . ಬೇಸಿಗೆಯ ಸಮಯದಲ್ಲಿ  ಆಹಾರ ಕ್ರಮಗಳ ಮೇಲೆ  ಗಮನ ಇರಿಸುವುದು ಒಳ್ಳೆಯದು ದೇಹವನ್ನು ತಂಪಾಗಿ ಇಡುವಂತೆ ನೋಡಬೇಕು

ಈ ಸಮಯದಲ್ಲಿ ಆರೋಗ್ಯವು ಕೈ ಕೊಡುವುದು ಸಹಜ. ಸಿಕ್ಕ ಸಿಕ್ಕ ಆಹಾರಗಳನ್ನು ಸೇವಿಸಿದರೆ ಅನಾರೋಗ್ಯಕ್ಕೂ ದಾರಿ ಮಾಡಿಕೊಟ್ಟಂತೆ ಆಗುತ್ತದೆ, ಹೀಗಾಗಿ ದೇಹವನ್ನು ತಂಪಾಗಿಸಿರುವುದು ಮುಖ್ಯ. ಈ ಸಮಯದಲ್ಲಿ ದೇಹಕ್ಕೆ ನೀರಿನ ಅಂಶ ಹೆಚ್ಚಿರುವ ಆಹಾರಗಳು ಅಗತ್ಯವಾಗಿ ಬೇಕಾಗುತ್ತದೆ.

ನೀರು ಕುಡಿಯಿರಿ :
ಬೇಸಿಗೆಯಲ್ಲಿ ಬಿಸಿಲಿನ ತಾಪವನ್ನು ಸಹಿಸಿಕೊಳ್ಳುವುದು ಕಷ್ಟ ಹೊರಗಡೆ ಸುತ್ತಾಡಿಕೊಂಡು ಬಂದರೆ ಸುಸ್ತು ಬಾಯಾರಿಕೆಯಾಗುತ್ತದೆ . ಈ ಸಮಯದಲ್ಲಿ ತಣ್ಣನೆಯ ನೀರು ಅಥವಾ ತಂಪು ಪಾನೀಯಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಟೊಮೆಟೊ :
ವಿಟಮಿನ್ ಸಿ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿರುವ ಈ ಟೊಮೊಟೊ ಬೇಸಿಗೆಗಾಲಕ್ಕೆ ಉತ್ತಮ ಆಹಾರವಾಗಿದೆ. ನಿಯಮಿತವಾಗಿ ಸೇವಿಸುವುದರಿಂದ ಅನಾರೋಗ್ಯ ಸಮಸ್ಯೆಯಿಂದ ದೂರವಿಡುತ್ತದೆ.

ಕಲ್ಲಂಗಡಿ :
ಇದು ಬೇಸಿಗೆ ಕಾಲದಲ್ಲಿ ಹೆಚ್ಚು ಜನರು ಸೇವಿಸುವ ಹಣ್ಣುಗಳಲ್ಲಿ ಒಂದು. ನೀರಿನ ಅಂಶ ಹೆಚ್ಚಾಗಿರುವ ಕಾರಣ ನಿರ್ಜಲೀಕರಣವನ್ನು ಕಡಿಮೆ ಮಾಡುತ್ತದೆ. ಚರ್ಮ ಸಂಬಂಧಿ ರೋಗಗಳನ್ನೂ ದೂರ ಮಾಡಿ ನಿಮ್ಮನ್ನು ಸದಾ ಲವಲವಿಕೆಯಿಂದ ಇರುವಂತೆ ಮಾಡುತ್ತದೆ.

ಕಿತ್ತಳೆ :
ಕಿತ್ತಳೆ ಹಣ್ಣಿನಲ್ಲಿ ಸಿಹಿ ಸಿಟ್ರಸ್ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು ನೀರಿನ ಪ್ರಮಾಣವು ಹೇರಳವಾಗಿದೆ. ಇದು ದೇಹದಲ್ಲಿನ ನಿರ್ಜಲೀಕರಣ ನಿವಾರಣೆ ಮಾಡಿ ಅನಾರೋಗ್ಯ ಸಮಸ್ಯೆಯಿಂದ ಕಾಪಾಡುತ್ತದೆ.
ಮೊಸರು : ದೇಹವನ್ನು ತಂಪಾಗಿರಿಸಲು ಬೇಸಿಗೆಯ ಉತ್ತಮ ಆಹಾರ ಪದಾರ್ಥಗಳಲ್ಲಿ ಮೊಸರು ಕೂಡ ಒಂದು. ಹೆಚ್ಚಿನವರು ಮಧ್ಯಾಹ್ನದ ಊಟಕ್ಕೆ ಮೊಸರನ್ನು ಸೇವಿಸುತ್ತಾರೆ. ಇದು ದೇಹದ ಉಷ್ಣಾಂಶ ಸಮತೋಲನದಲ್ಲಿರಿಸಲು ಸಹಾಯಕವಾಗಿದೆ.

ಎಳ ನೀರು :
ಬಿಸಿಲಿನ ಝಳ ತಾಳಲಾರದೆ ತಂಪು ಪಾನೀಯವನ್ನು ಹೆಚ್ಚು ಸೇವಿಸಲು ಇಷ್ಟ ಪಡುತ್ತಾರೆ. ಆದರೆ ರಾಸಾಯನಿಕಗಳಿಂದ ಕೂಡಿದ ತಂಪು ಪಾನೀಯಗಳಿಗಿಂತ ಈ ಎಳನೀರನ್ನು ಕುಡಿಯುವುದರಿಂದ ಆರೋಗ್ಯವನ್ನು ಕಾಪಾಡಬಹುದು.

ಪುದೀನಾ :
ದೇಹವನ್ನು ತಂಪಾಗಿಸುವ ಮತ್ತು ರಿಫ್ರೆಶ್ ಮಾಡುವ ಗುಣಗಳನ್ನು ಹೊಂದಿರುವ ಪುದೀನಾ ಬೇಸಿಗೆಯ ಹೇಳಿ ಮಾಡಿಸಿದ ಆಹಾರವಾಗಿದೆ. ಪುದೀನಾ ನಿಂಬು ಜ್ಯೂಸ್ ಅಥವಾ ಪುದೀನಾ ಚಹಾವನ್ನು ಮಾಡಿ ತಣ್ಣಗಾದ ಬಳಿಕ ಕುಡಿಯುವುದರಿಂದ ಆರೋಗ್ಯ ಲಾಭವನ್ನು ಪಡೆಯಬಹುದು.

ಹಸಿರು ತರಕಾರಿ :
ಹಸಿರು ತರಕಾರಿಗಳು ದೇಹಕ್ಕೆ ಅಗತ್ಯವಾಗಿ ಬೇಕು. ಬೇಸಿಗೆಯಲ್ಲಿ ಇದರ ನಿಯಮಿತ ಸೇವನೆಯಿಂದ ಆರೋಗ್ಯಯುತರಾಗಿರಬಹುದು. ಮೂಲಂಗಿ, ಕ್ಯಾರೆಟ್, ಸೌತೆಕಾಯಿ ಇನ್ನಿತ್ತರ ತರಕಾರಿಗಳನ್ನು ಸೇರಿಸಿ ಸಲಾಡ್ ತಯಾರಿಸಿ ಸೇವಿಸಿದರೆ ದೇಹವನ್ನು ತಂಪಾಗಿರಿಸಬಹುದು. ಅದಲ್ಲದೇ ದೇಹದ ನಿರ್ಜಲೀಕರಣವನ್ನು ಕಡಿಮೆ ಮಾಡುವ ಶಕ್ತಿ ಈ ಆಹಾರಕ್ಕಿದೆ.ಆದಷ್ಟು ಬಿಸಿಲಿನಲ್ಲಿ ಓಡಾಡುವುದನ್ನು ಕಡಿಮೆ ಮಾಡಿ 

Ads on article

Advertise in articles 1

advertising articles 2

Advertise under the article