-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಅಕ್ಷಯ ತೃತೀಯಕ್ಕೆ ಸಿಗುತ್ತೆ ರಾಮನ ಕಾಯಿನ್‌ , ಎಲ್ಲಡೆ ರಾಮನ ಕಾಯಿನ್ ಗೆ ಹೆಚ್ಚಿದ ಬೇಡಿಕೆ

ಅಕ್ಷಯ ತೃತೀಯಕ್ಕೆ ಸಿಗುತ್ತೆ ರಾಮನ ಕಾಯಿನ್‌ , ಎಲ್ಲಡೆ ರಾಮನ ಕಾಯಿನ್ ಗೆ ಹೆಚ್ಚಿದ ಬೇಡಿಕೆ


ಅಕ್ಷಯ ತೃತೀಯದಂದು ಅಯೋಧ್ಯೆಯ ಬಾಲರಾಮ ಬೆಳ್ಳಿ, ಬಂಗಾರದ ರೂಪದಲ್ಲಿ ಮನೆಗೆ ಅಡಿ ಇರಿಸಲಿದ್ದಾನೆ. ಇದಕ್ಕಾಗಿ ಆಭರಣ ತಯಾರಕರು ಭರದ ಸಿದ್ಧತೆ ನಡೆಸುತ್ತಿದ್ದಾರೆ. ಅಕ್ಷಯ ತೃತೀಯ (ಮೇ 10) ದಂದು ಗ್ರಾಹಕರಿಗೆ ಅಯೋಧ್ಯೆಯ ಬಾಲರಾಮನ ಮಾದರಿಯ ಕಾಯಿನ್‌ಗಳನ್ನು ಕೊಡಲು ಆಭರಣ ಮಾಲೀಕರು ನಿರ್ಧರಿಸಿದ್ದಾರೆ.
ಸಾಕಷ್ಟು ಮಂದಿ ಅಕ್ಷಯ ತೃತೀಯದಂದು ಖರೀದಿಸಲೆಂದೇ ಒಂದು ವರ್ಷದಿಂದ ಚೀಟಿ ಹಾಕಿದ್ದರು. ಈ ಬಾರಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನರ ಬಳಿ ಹಣದ ಚಲಾವಣೆ ಹೆಚ್ಚಾಗಿದೆ. ಹೀಗಾಗಿ, ಅಕ್ಷಯ ತೃತೀಯದಂದು ಒಡವೆ ಖರೀದಿಯೂ ನಿರೀಕ್ಷಿತ ಮಟ್ಟದಲ್ಲಿಯೇ ನಡೆಯಲಿದೆ. ಅಂದು ಒಂದೇ ದಿನ ಸಹಸ್ರಾರು ಕೆಜಿ ಚಿನ್ನ-ಬೆಳ್ಳಿ ಮಾರಾಟದೊಂದಿಗೆ ನೂರಾರು ಕೋಟಿ ರೂ. ವಹಿವಾಟು ನಡೆಯುತ್ತದೆ.
ಬಾಲರಾಮನ ಬೆಳ್ಳಿ ಕಾಯಿನ್‌ಗಳ ಉಡುಗೊರೆ :
50 ಸಾವಿರ ರೂ. ಮೇಲ್ಪಟ್ಟು ಆಭರಣ ಖರೀದಿಸಿದವರಿಗೆ ಹಾಗೂ 2 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಖರೀದಿಸಿದ ಗ್ರಾಹಕರಿಗೆ ಪ್ರತ್ಯೇಕವಾಗಿ ಬಾಲರಾಮನ ನಾಣ್ಯಗಳನ್ನು ನೀಡಲಾಗುವುದು. ಅಯೋಧ್ಯೆಯಲ್ಲಿ ರಾಮನ ದೇಗುಲದಲ್ಲಿ ಕಾಯಿನ್‌ಗಳನ್ನು ಇಟ್ಟು, ಪೂಜೆ ಮಾಡಿಸಿ ತಂದು ನಮ್ಮ ಎಲ್ಲಾ ಮಳಿಗೆಗಳಲ್ಲಿ ಅಕ್ಷತೆಯೊಂದಿಗೆ ಗ್ರಾಹಕರಿಗೆ ಬಾಲರಾಮನ ಕಾಯಿನ್‌ಗಳನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್‌ನ ಮಾಲೀಕರೂ ಆದ ವಿಧಾನ ಪರಿಷತ್‌ ಸದಸ್ಯ ಡಾ ಟಿ ಎ ಶರವಣ ತಿಳಿಸಿದರು. ಚಿನ್ನದ ದರ ಹೆಚ್ಚಾದರೂ ಖರೀದಿ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಬಹುದು. ಆದರೆ, ಖರೀದಿದಾರರ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗುವುದಿಲ್ಲ. ಇದೀಗ ಮದುವೆ ಸೀಸನ್‌ಗಳಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ 10ರಷ್ಟು ಹೆಚ್ಚು ಆಭರಣ ಖರೀದಿ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಬಿ ರಾಮಚಾರಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ