ಏಪ್ರಿಲ್ ನಲ್ಲಿ ದ್ವಾದಶಿ ರಾಶಿ ಭವಿಷ್ಯ ಹೇಗಿದೆ
ಹಿಂದೂ ಧರ್ಮದ ಪ್ರಕಾರ ಹೊಸ ವರ್ಷವು ಏಪ್ರಿಲ್ 9 ರಿಂದ ಪ್ರಾರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗುರು ಗ್ರಹವು ಪ್ರಸಕ್ತ ಸಂವತದಲ್ಲಿ ವೃಷಭರಾಶಿಗೆ ಪ್ರವೇಶಿಸುವ ಮೊದಲು ಮುಂದಿನ ಒಂದು ತಿಂಗಳಲ್ಲಿ ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಗಳ ಮೇಲೆ ಯಾವ ಪರಿಣಾಮ ಬೀರುತ್ತದೆ
ಸದ್ಯಕ್ಕೆ ಗುರು ಗೋಚರ ಮೇಷ ರಾಶಿಯಲ್ಲಿ ಇದ್ದು ಇದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಮಹತ್ವದ ಸ್ಥಾನದಲ್ಲಿ ನೋಡಲಾಗುತ್ತದೆ. ಇನ್ನು ಈ ಬಾರಿ ಹಿಂದೂ ಕ್ಯಾಲೆಂಡರ್ ನ ಹೊಸ ವರ್ಷ ಏಪ್ರಿಲ್ 9ನೇ ತಾರೀಖಿನಂದು ನಡೆಯಲಿದೆ. 12 ರಾಶಿಗಳ ಭವಿಷ್ಯ ಯಾವ ರೀತಿಯಲ್ಲಿ ಈ ಸಂದರ್ಭದಲ್ಲಿ ಇರಲಿದೆ ಅನ್ನೋದನ್ನ ತಿಳಿದುಕೊಳ್ಳೋಣ
ಮೇಷ ರಾಶಿ :
ಮೇಷ ರಾಶಿಯವರು ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಸಾಕಷ್ಟು ಗಮನ ವಹಿಸಬೇಕಾಗುತ್ತದೆ ಯಾಕೆಂದರೆ ಈ ಸಮಯದಲ್ಲಿ ಅವರು ಸುಸ್ತಾಗೋದು ಜಾಸ್ತಿ. ಈ ಸಂದರ್ಭದಲ್ಲಿ ಗುರುವಿನ ವಿಪರೀತ ಪ್ರಭಾವದ ಕಾರಣದಿಂದಾಗಿ ನಿಮ್ಮಲ್ಲಿ ಅಶಾಂತಿ ಹೆಚ್ಚಾಗುವಂತಹ ಸಾಧ್ಯತೆ ಇದೆ. ಈ ಸಮಯದಲ್ಲಿ ಮೇಷ ರಾಶಿಯವರ ಆದಾಯ ಕಡಿಮೆ ಆಗಲಿದೆ ಹಾಗೂ ಖರ್ಚು ಹೆಚ್ಚಾಗುವಂತಹ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನೀವು ನಿಮ್ಮನ್ನು ಅಧ್ಯಾತ್ಮಿಕವಾಗಿ ಸಾಕಷ್ಟು ತೊಡಗಿಕೊಳ್ಳುತ್ತೀರಿ ಹಾಗೂ ಈ ಕರ್ಮದ ಫಲವನ್ನು ಕೂಡ ನೀವು ಪಡೆದುಕೊಳ್ಳಲಿದ್ದೀರಿ. ನಿಮ್ಮ ಮನಸ್ಸಿಗೆ ಶಾಂತಿ ಸಿಗಬೇಕು ಎಂದರೆ ನೀವು ಅಧ್ಯಾತ್ಮಿಕ ಕೆಲಸಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕಾಗುತ್ತದೆ.
ವೃಷಭ ರಾಶಿ :
ಏಪ್ರಿಲ್ ತಿಂಗಳು ವೃಷಭ ರಾಶಿಯವರಿಗೆ ಸಾಕಷ್ಟು ನಷ್ಟವನ್ನು ತರುವಂತಹ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ನೀವು ಹುಷಾರಾಗಿರಬೇಕು. ಆದಾಯ ಏನು ಒಂದು ಮಟ್ಟಿಗೆ ನಿಮ್ಮ ಕೈ ಸೇರಬಹುದು. ಆದರೆ ಅದಕ್ಕಿಂತ ದ್ವಿಗುಣ ಮಟ್ಟದಲ್ಲಿ ನೀವು ಹಣವನ್ನು ಖರ್ಚು ಮಾಡಬೇಕಾಗಿ ಬರುತ್ತದೆ. ಹಣವನ್ನು ಸರಿಯಾದ ರೀತಿಯಲ್ಲಿ ಖರ್ಚು ಮಾಡಿ ಹಾಗೂ ಆದಷ್ಟು ಉಳಿತಾಯ ಮಾಡುವುದಕ್ಕೆ ಪ್ರಯತ್ನಪಡಿ ಮತ್ತು ಅನಗತ್ಯ ಖರ್ಚುಗಳನ್ನು ಕಂಟ್ರೋಲ್ ಮಾಡಿ. ಇದು ಮುಂದಿನ ದಿನಗಳಲ್ಲಿ ನಿಮಗೆ ಸಾಕಷ್ಟು ಸಮಸ್ಯೆಯನ್ನು
ತಂದೊಡ್ಡಬಹುದು. ನಿಮ್ಮ ವ್ಯಾಪಾರಕ್ಕೆ ಸಂಬಂಧಪಟ್ಟಂತಹ ಸಾಕಷ್ಟು ಸಮಸ್ಯೆಗಳನ್ನು ಈ ಸಮಯದಲ್ಲಿ
ಎದುರಿಸಬೇಕಾಗಿ ಬರುತ್ತದೆ. ಮಾತಿನ ಮೇಲೆ ಈ ಸಂದರ್ಭದಲ್ಲಿ ಹಿಡಿತ ಇರಲಿ.
ಮಿಥುನ ರಾಶಿ :
ವಿಶೇಷ ಎನ್ನುವಂತೆ ಮಿಥುನ ರಾಶಿಯವರಿಗೆ ಈ ಸಮಯ ಎನ್ನುವುದು ಸಾಕಷ್ಟು ಅದೃಷ್ಟದ ಫಲಗಳನ್ನು ನೀಡಲಿದೆ. ಸಾಕಷ್ಟು ಸಮಯಗಳಿಂದ ನೀವು ಕಷ್ಟಪಟ್ಟು ಪರಿಶ್ರಮದಿಂದ ಮಾಡುತ್ತಿರುವಂತಹ ಕೆಲಸ ನಿಮಗೆ ಶುಭ ಫಲಿತಾಂಶವನ್ನು ತರಲಿದೆ. ಹಣದ ವಿಚಾರದಲ್ಲಿ ಲಾಭ ಪಡೆದುಕೊಳ್ಳುವುದಕ್ಕೆ ಹಾಗೂ ನಿಮ್ಮ ಕೆಲಸದಲ್ಲಿ ಪ್ರಗತಿಯನ್ನು ಪಡೆದುಕೊಳ್ಳುವುದಕ್ಕೆ ಈ ಸಮಯದಲ್ಲಿ ಸಾಕಷ್ಟು ಅವಕಾಶಗಳು ನಿಮಗೆ ಸಿಗಲಿವೆ. ಈ ಸಮಯದಲ್ಲಿ ಸಿಗುವಂತಹ ಅವಕಾಶಗಳನ್ನು ನೀವು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ನೀವು ಜೀವನದಲ್ಲಿ ದೊಡ್ಡ ಮಟ್ಟದ ಸಾಧನೆಯನ್ನು ಈ ಅವಕಾಶಗಳನ್ನು ಬಳಸಿಕೊಂಡು ಮಾಡಬಹುದಾಗಿದೆ. ಭೌತಿಕ ಸುಖ ಸಮೃದ್ಧಿಯನ್ನು ನೀವು ಈ ಸಂದರ್ಭದಲ್ಲಿ ಸಂಪಾದನೆ ಮಾಡಿಕೊಳ್ಳಬಹುದಾಗಿದೆ
ಕರ್ಕ ರಾಶಿ :
ಈ ಪರಿಸ್ಥಿತಿಯ ಸಮಯ ಎನ್ನುವುದು ಕರ್ಕ ರಾಶಿಯವರ ಕೈಯಲ್ಲಿ ಹೆಚ್ಚಿನ ಖರ್ಚು ಮಾಡಿಸುತ್ತದೆ. ನೀವು ದೈನಂದಿನ ವಹಿವಾಟಿನಲ್ಲಿ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ ಅದನ್ನು ಮಾಡಿದರೆ ಮಾತ್ರ ನಿಮಗೆ ದಿನಕ್ಕೆ ಖರ್ಚಿಗೆ ಹಣ ಸಿಗುತ್ತದೆ. ನಿಮ್ಮ ಜೀವನದಲ್ಲಿ ಈ ಸಂದರ್ಭದಲ್ಲಿ ಬರುವಂತಹ ಕೆಲವೊಂದು ವಿಪರೀತ ಖರ್ಚುಗಳು ನಿಮ್ಮಲ್ಲಿ ಅಶಾಂತಿಯನ್ನು ಹುಟ್ಟು ಹಾಕುತ್ತದೆ. ನೀವು ಆದಷ್ಟು ಖರ್ಚನ್ನು ಕಡಿಮೆ ಮಾಡಿ ನಿಮ್ಮ ದೈನಂದಿನ ಆದಾಯವನ್ನು ಹೆಚ್ಚಿಸುವ ಕಡೆಗೆ ಪ್ರಯತ್ನ ಪಡಬೇಕಾಗಿರುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ಕಡೆಗೆ ಗಮನ ನೀಡಿ.
ಸಿಂಹ
ಗುರು ಸಿಂಹ ರಾಶಿಯವರಿಗೆ ಸಾಕಷ್ಟು ಶುಭ ಫಲಿತಾಂಶವನ್ನು ಕರುಣಿಸಲಿದ್ದಾನೆ. ಭಾಗ್ಯದ ಬಾಗಿಲು ಸಿಂಹ ರಾಶಿಯವರಿಗೆ ತೆರೆಯಲಿದೆ ಅದರಲ್ಲೂ ವಿಶೇಷವಾಗಿ ವಿದೇಶದಲ್ಲಿ ಉನ್ನತ ವ್ಯಾಸಂಗವನ್ನು ಮಾಡಬೇಕು ಎಂದುಕೊಂಡಿರುವಂತಹ ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಕೇಳಿ ಬರಲಿದೆ. ಕೆಲಸದ ವಿಚಾರದಲ್ಲಿ ಕೂಡ ಸಿಂಹ ರಾಶಿಯವರು ಅದ್ವಿತೀಯ ಯಶಸ್ಸನ್ನು ಸಂಪಾದನೆ ಮಾಡಲಿದ್ದಾರೆ. ಧಾರ್ಮಿಕ ವಿಚಾರಗಳಲ್ಲಿ ಕೂಡ ನಿಮ್ಮ ಆಸಕ್ತಿ ಹೆಚ್ಚಾಗಲಿದ್ದು ಇದೂ ಕೂಡ ನಿಮ್ಮ ಪುಣ್ಯ ಪ್ರಾಪ್ತಿಯಲ್ಲಿ ಹೆಚ್ಚಳವನ್ನು ತರಲಿದೆ. ದೇವರ ಭಕ್ತಿ ನಿಮ್ಮಲ್ಲಿ ಸಕಾರಾತ್ಮಕತೆಯನ್ನು ಇನ್ನಷ್ಟು ಹೆಚ್ಚಿಸಲಿದೆ.
ವೃಶ್ಚಿಕ ರಾಶಿ
ಆದಾಯ ಹೆಚ್ಚಿಗೆ ಬರೆದಿದ್ದರು ಕೂಡ ಅದಕ್ಕಿಂತ ಹೆಚ್ಚಿನ ಖರ್ಚು ಈ ಸಂದರ್ಭದಲ್ಲಿ ಉಂಟಾಗುವ ಕಾರಣದಿಂದಾಗಿ ಇದು ನಿಮಗೆ ಅತ್ಯಂತ ಉತ್ತಮವಾದ ಸಮಯ ಅಲ್ಲ ಎಂದು ಹೇಳಬಹುದು. ಈ ಸಮಯದಲ್ಲಿ ನಿಮ್ಮ ಸಾಲ ಕೂಡ ಹೆಚ್ಚಾಗಲಿದ್ದು ಮಾಡುವಂತಹ ಕೆಲಸದಲ್ಲಿ ಶತ್ರು ಕಾಟ ಕೂಡ ದಿನೇ ದಿನೇ ಹೆಚ್ಚಾಗಲಿದೆ. ಶತ್ರು ಕಾಟ ಹೆಚ್ಚಾಗುವ ಕಾರಣದಿಂದಾಗಿ ನಿಮ್ಮ ಅಕ್ಕ ಪಕ್ಕದಲ್ಲಿ ನೋಡಿಕೊಂಡು ವ್ಯವಹರಿಸಿ. ಸಾಕಷ್ಟು ಸಮಸ್ಯೆಗಳ ಕಾರಣದಿಂದಾಗಿ ದಿನನಿತ್ಯದ ಓಡಾಟ ಹೆಚ್ಚಾಗಲಿದ್ದು ನಿಮ್ಮ ಮಾನಸಿಕ ಅಶಾಂತಿ ಇನ್ನಷ್ಟು ಏರಿಕೆಯಾಗಲಿದೆ. ಕೆಲವೊಂದು ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ಅದನ್ನು ಮಾಡುವುದಕ್ಕೆ ನಿಮಗೆ ಕಷ್ಟ ಆಗಲಿದ್ದು ಇದರಿಂದಾಗಿ ಕೂಡ ಸ್ವಲ್ಪಮಟ್ಟಿಗೆ ಹಿನ್ನಡೆ ಅನುಭವಿಸಲಿದ್ದೀರಿ.
ಸಿಂಹ
ಗುರು ಸಿಂಹ ರಾಶಿಯವರಿಗೆ ಸಾಕಷ್ಟು ಶುಭ ಫಲಿತಾಂಶವನ್ನು ಕರುಣಿಸಲಿದ್ದಾನೆ. ಭಾಗ್ಯದ ಬಾಗಿಲು ಸಿಂಹ ರಾಶಿಯವರಿಗೆ ತೆರೆಯಲಿದೆ ಅದರಲ್ಲೂ ವಿಶೇಷವಾಗಿ ವಿದೇಶದಲ್ಲಿ ಉನ್ನತ ವ್ಯಾಸಂಗವನ್ನು ಮಾಡಬೇಕು ಎಂದುಕೊಂಡಿರುವಂತಹ ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಕೇಳಿ ಬರಲಿದೆ. ಕೆಲಸದ ವಿಚಾರದಲ್ಲಿ ಕೂಡ ಸಿಂಹ ರಾಶಿಯವರು ಅದ್ವಿತೀಯ ಯಶಸ್ಸನ್ನು ಸಂಪಾದನೆ ಮಾಡಲಿದ್ದಾರೆ. ಧಾರ್ಮಿಕ ವಿಚಾರಗಳಲ್ಲಿ ಕೂಡ ನಿಮ್ಮ ಆಸಕ್ತಿ ಹೆಚ್ಚಾಗಲಿದ್ದು ಇದೂ ಕೂಡ ನಿಮ್ಮ ಪುಣ್ಯ ಪ್ರಾಪ್ತಿಯಲ್ಲಿ ಹೆಚ್ಚಳವನ್ನು ತರಲಿದೆ. ದೇವರ ಭಕ್ತಿ ನಿಮ್ಮಲ್ಲಿ ಸಕಾರಾತ್ಮಕತೆಯನ್ನು ಇನ್ನಷ್ಟು ಹೆಚ್ಚಿಸಲಿದೆ.
ಕನ್ಯಾ ರಾಶಿ
ಈ ಸಂದರ್ಭದಲ್ಲಿ ಆದಾಯ ಕಡಿಮೆಯಾಗುವುದು ಹಾಗೂ ಖರ್ಚು ಹೆಚ್ಚಾಗುವುದರಿಂದಾಗಿ ಕನ್ಯಾರಾಶಿಯವರ ಮಾನಸಿಕ ಪರಿಸ್ಥಿತಿ ಸ್ಥಿಮಿತವನ್ನು ತಪ್ಪುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನಿಮ್ಮ ಮಾನಸಿಕ ಆರೋಗ್ಯ ಹೆಚ್ಚುಕಡಿಮೆ ಆಗುವ ಕಾರಣದಿಂದಾಗಿ ಯಾವುದೇ ರೀತಿಯ ದೊಡ್ಡ ನಿರ್ಧಾರವನ್ನು ಈ ಸಮಯದಲ್ಲಿ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಅದರಿಂದಾಗಿ ಭವಿಷ್ಯದಲ್ಲಿ ನೀವು ಸಾಕಷ್ಟು ಕಷ್ಟಪಡುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನಲ್ಲಿ ಅವ್ಯಕ್ತ ಕಳವಳ ನಿಮ್ಮ ಸುತ್ತಮುತ್ತಲು ಭಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದಷ್ಟು ನಿಮ್ಮ ಆತ್ಮೀಯರ ಜೊತೆಗೆ ಈ ಸಮಯದಲ್ಲಿ ಒಟ್ಟಾಗಿ ಇರೋದನ್ನ
ತುಲಾ ರಾಶಿ
ತುಲಾ ರಾಶಿಯವರಿಗೆ ಏಪ್ರಿಲ್ ತಿಂಗಳಿನಲ್ಲಿ ಸಾಕಷ್ಟು ಆದಾಯದ ಮೂಲಗಳ ಅವಕಾಶ ಸಿಗಲಿದ್ದು ಇದರಿಂದಾಗಿ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಹಣವನ್ನು ಸಂಪಾದನೆ ಮಾಡಲಿದ್ದಾರೆ. ಹಣವೇನೋ ನಿಮ್ಮ ಕಿಸೆ ತುಂಬಾ ತುಂಬಿಕೊಳ್ಳಲಿದೆ ಆದರೆ ಈ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು. ನಿಮ್ಮ ಜೀವನದಲ್ಲಿ ಸುಖ ಸಂತೋಷದ ಏರಿಕೆ ಈ ಸಮಯದಲ್ಲಿ ವಿಶೇಷವಾಗಿ ಕಂಡು ಬರಲಿದೆ. ಆದರೆ ಮಾನಸಿಕ ಆರೋಗ್ಯದ ಬಗ್ಗೆ ನೀವು ಸ್ವಲ್ಪಮಟ್ಟಿಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಆದರೆ ಈ ಸಂದರ್ಭದಲ್ಲಿ ನೀವು ನಿಮ್ಮ ಮನಸ್ಸನ್ನು ಖುಷಿಪಡಿಸುವಂತಹ ಕೆಲಸವನ್ನು ಮಾಡಲಿದ್ದೀರಿ. ಹೌದು ನೀವು ಬಹುದಿನಗಳಿಂದ ಕಾಯುತ್ತಿದ್ದ ವಾಹನವನ್ನು ಈ ಸಮಯದಲ್ಲಿ ಖರೀದಿ ಮಾಡುವಂತಹ ಅದೃಷ್ಟ ನಿಮಗೆ ಸಿಗಲಿದೆ.
ವೃಶ್ಚಿಕ ರಾಶಿ
ಆದಾಯ ಹೆಚ್ಚಿಗೆ ಬರೆದಿದ್ದರು ಕೂಡ ಅದಕ್ಕಿಂತ ಹೆಚ್ಚಿನ ಖರ್ಚು ಈ ಸಂದರ್ಭದಲ್ಲಿ ಉಂಟಾಗುವ ಕಾರಣದಿಂದಾಗಿ ಇದು ನಿಮಗೆ ಅತ್ಯಂತ ಉತ್ತಮವಾದ ಸಮಯ ಅಲ್ಲ ಎಂದು ಹೇಳಬಹುದು. ಈ ಸಮಯದಲ್ಲಿ ನಿಮ್ಮ ಸಾಲ ಕೂಡ ಹೆಚ್ಚಾಗಲಿದ್ದು ಮಾಡುವಂತಹ ಕೆಲಸದಲ್ಲಿ ಶತ್ರು ಕಾಟ ಕೂಡ ದಿನೇ ದಿನೇ ಹೆಚ್ಚಾಗಲಿದೆ. ಶತ್ರು ಕಾಟ ಹೆಚ್ಚಾಗುವ ಕಾರಣದಿಂದಾಗಿ ನಿಮ್ಮ ಅಕ್ಕ ಪಕ್ಕದಲ್ಲಿ ನೋಡಿಕೊಂಡು ವ್ಯವಹರಿಸಿ. ಸಾಕಷ್ಟು ಸಮಸ್ಯೆಗಳ ಕಾರಣದಿಂದಾಗಿ ದಿನನಿತ್ಯದ ಓಡಾಟ ಹೆಚ್ಚಾಗಲಿದ್ದು ನಿಮ್ಮ ಮಾನಸಿಕ ಅಶಾಂತಿ ಇನ್ನಷ್ಟು ಏರಿಕೆಯಾಗಲಿದೆ. ಕೆಲವೊಂದು ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ಅದನ್ನು ಮಾಡುವುದಕ್ಕೆ ನಿಮಗೆ ಕಷ್ಟ ಆಗಲಿದ್ದು ಇದರಿಂದಾಗಿ ಕೂಡ ಸ್ವಲ್ಪಮಟ್ಟಿಗೆ ಹಿನ್ನಡೆ ಅನುಭವಿಸಲಿದ್ದೀರಿ.
ಧನು ರಾಶಿ :
ಈ ಸಂದರ್ಭದಲ್ಲಿ ಧನು ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ. ಮನೆಯಲ್ಲಿ ನಡೆಯುವಂತಹ ಕೆಲವೊಂದು ಶುಭಕಾರ್ಯಗಳಿಗಾಗಿ ಹಣವನ್ನು ನೀರಿನಲ್ಲಿ ಖರ್ಚು ಮಾಡಬೇಕಾಗುತ್ತದೆ ಆದರೆ ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗಲಿದೆ. ಯಾವುದೇ ರೀತಿಯ ಚಿಂತೆ ನಿಮ್ಮನ್ನು ಕಾಡುವುದಿಲ್ಲ. ವಾಹನ ಹಾಗೂ ಜಮೀನು ಮತ್ತು ಆಸ್ತಿಯನ್ನು ಖರೀದಿ ಮಾಡುವುದರ ಮೂಲಕ ನೀವು ಭೌತಿಕ ಸುಖವನ್ನು ಪ್ರಾಪ್ತಿಗೊಳಿಸಬಹುದಾಗಿದೆ. ಅದೃಷ್ಟದ ಜೊತೆಯಿಂದಾಗಿ ನೀವು ಅರ್ಧಕ್ಕೆ ನಿಲ್ಲಿಸಿರುವ ಕೆಲಸವನ್ನು ಮತ್ತೆ ಪ್ರಾರಂಭ ಮಾಡಬಹುದಾಗಿದೆ. ಯಾವುದೇ ಕೆಲಸ ಹೊಸದಾಗಿ ಪ್ರಾರಂಭ ಮಾಡಿದ್ರು ಕೂಡ ಆರಂಭಿಕ ಸಮಯಗಳಿಂದಲೇ ನಿಮಗೆ ಲಾಭದ ಪುಣ್ಯಾಂಶ ಸಿಗಲಿದೆ.
ಮಕರ ರಾಶಿ :
ಕೆಲವೊಂದು ಕ್ಷೇತ್ರಗಳಲ್ಲಿ ಮಕರ ರಾಶಿಯವರು ಸಾಕಷ್ಟು ಕಷ್ಟ ಪಡಬೇಕಾದ ಅಗತ್ಯ ಇರುತ್ತದೆ ಆದ್ರೂ ಕೂಡ ಗುರುವಿನ ಕೃಪೆಯಿಂದಾಗಿ ಭಾಗ್ಯದ ಬಾಗಿಲು ನಿಮಗಾಗಿ ತೆರೆದಿರುತ್ತದೆ. ಇದೇ ಕಾರಣಕ್ಕಾಗಿ ನೀವು ಹೋಗುವಂತ ದಾರಿಯಲ್ಲಿ ನೀವು ಕಷ್ಟಕ್ಕಿಂತ ಹೆಚ್ಚಾಗಿ ಗೆಲುವಿನ ಸಿಹಿಯನ್ನು ಸವಿಯಲಿದ್ದೀರಿ. ಖರ್ಚು ಒಂದು ಕಡೆಯಲ್ಲಿ ಹೆಚ್ಚಾದರೆ ಇನ್ನೊಂದು ಕಡೆಯಲ್ಲಿ ನಿಮಗೆ ಬರುವಂತಹ ಆದಾಯ ಕೂಡ ಹೆಚ್ಚಾಗಲಿದೆ. ಕೆಲವೊಂದು ಕಷ್ಟಗಳು ನಿಮ್ಮ ಎದುರಿಗೆ ಗೆಲುವಿನ ಮಧ್ಯ ಭಾಗದಲ್ಲಿ ಬಂದು ನಿಲ್ಲಲಿದೆ ಆದರೆ ಅವುಗಳನ್ನು ಹಿಮ್ಮೆಟ್ಟಿಸುವ ಶಕ್ತಿ ನಿಮ್ಮಲ್ಲಿ ಇರುವುದರಿಂದಾಗಿ ಹೆಚ್ಚಿನ ಚಿಂತೆಯ ಅಗತ್ಯವಿರುವುದಿಲ್ಲ
ಕುಂಭ ರಾಶಿ :
ಈ ಸಮಯ ಎನ್ನುವುದು ಕುಂಭ ರಾಶಿಯವರಿಗೆ ಅಷ್ಟೊಂದು ಲಾಭದಾಯಕ ಆಗಿರುವುದಿಲ್ಲ ಯಾಕೆಂದರೆ ಈ ಸಮಯದಲ್ಲಿ ಅವರ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಅಚಾನಕ್ ಆಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಿ ಬರುತ್ತದೆ. ಕೆಲಸದಲ್ಲಿ ಕೂಡ ಉದಾಸೀನತೆಯಿಂದ ಕೆಲಸ ಮಾಡುವುದಕ್ಕೆ ಮನಸ್ಸು ಬರುವುದಿಲ್ಲ. ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳು ಕೂಡ ನಿಮ್ಮ ಮನಸ್ಸನ್ನು ವಿಚಾಲಿತರನ್ನಾಗಿ ಮಾಡಿಸಲಿದೆ. ನಿಮ್ಮ ಮನಸ್ಸನ್ನು ಸರಿಯಾದ ರೀತಿಯಲ್ಲಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಹಾಗೂ ಆದಷ್ಟು ಕಡಿಮೆ ಖರ್ಚು ಮಾಡಿ.
ಮೀನ ರಾಶಿ :
ಈ ವಿಶೇಷವಾದ ಸಮಯದಲ್ಲಿ ಗುರುವಿನ ಕೃಪೆಯಿಂದಾಗಿ ಮೀನ ರಾಶಿಯವರು ದೊಡ್ಡ ಪ್ರಭಾವಿ ವ್ಯಕ್ತಿಯನ್ನು ಭೇಟಿಯಾಗಲಿದ್ದಾರೆ ಹಾಗೂ ಇದು ಭವಿಷ್ಯದಲ್ಲಿ ಅವರಿಗೆ ಸಾಕಷ್ಟು ಲಾಭಗಳನ್ನು ತಂದುಕೊಡಲಿದೆ. ಕೆಲವೊಂದು ಪ್ರಯಾಣಗಳನ್ನು ನೀವು ಮಾಡಬೇಕಾಗಿದ್ದು ಭವಿಷ್ಯದಲ್ಲಿ ಇದು ನಿಮಗೆ ಪ್ರತಿಫಲವನ್ನು ಲಾಭ ರೂಪದಲ್ಲಿ ನೀಡಲಿದೆ. ಶುಭಕಾರಿಗಳಿಗಾಗಿ ಹಣವನ್ನು ಖರ್ಚು ಮಾಡುವಂತಹ ಸಮಯ ಒದಗಿ ಬರಲಿದೆ. ಉದ್ಯೋಗದಲ್ಲಿ ಕೂಡ ಸಾಕಷ್ಟು ಪ್ರಗತಿ ಹೊಂದುವಂತಹ ಅವಕಾಶ ಸಿಗಲಿದೆ