-->
1000938341
ಬಿಸಿಲನ ತಾಪದಿಂದ ನಮ್ಮ ದೇಹದ  ರಕ್ಷಣೆ ಹೇಗೆ

ಬಿಸಿಲನ ತಾಪದಿಂದ ನಮ್ಮ ದೇಹದ ರಕ್ಷಣೆ ಹೇಗೆ


ಸೂರ್ಯನ ತಾಪದಿಂದ  ದೇಹದ ರಕ್ಷಣೆ ಆದಷ್ಟು ಮಾಡಿಕೊಳ್ಳಿ
ಮೈಗ್ರೇನ್‌ ನ  ಸಮಸ್ಯೆ ಬಿಸಿಲಿನ ಸಮಯದಲ್ಲಿ ಹೆಚ್ಚಾಗುತ್ತದೆ ,  ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ, ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿಕೊಳ್ಳಿ
ಹೊರಗೆ ಹೋದಾಗ, ಛತ್ರಿ, ಕನ್ನಡಕ, ಕ್ಯಾಪ್ ಮತ್ತು ಸ್ಕಾರ್ಫ್ ಬಳಸಿ. ಇದು ಚರ್ಮವನ್ನು ಸೂರ್ಯನಿಂದ ಸುರಕ್ಷಿತವಾಗಿರಿಸುತ್ತದೆ. ಬೇಸಿಗೆಯಲ್ಲಿ ಸನ್‌ಸ್ಟೀನ್ ಬಳಸುವುದನ್ನು ಮರೆಯಬೇಡಿ.

ಹೈಡೇಟೆಡ್ ಆಗಿರಿ :
ಬಿಸಿಲಿನ  ತಾಪದ ಹೆಚ್ಚಾದಂತೆ  ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಹಾಗಾಗೀ ಸರಿಯಾಗಿರುವಂತೆ ನೋಡಿಕೊಳ್ಳಿ. ಹೆಚ್ಚು ನೀರು ಕುಡಿಯಿರಿ. ಇದರೊಂದಿಗೆ ಎಳನೀರು, ನಿಂಬೆ ಶರಬತ್ತು, ಮಜ್ಜಿಗೆಯಂತಹ ಆರೋಗ್ಯಕರ ಪಾನೀಯಗಳನ್ನು ಸೇವಿಸಿ. ಇದು ದೇಹದಲ್ಲಿನ ಎಲೆಕ್ಟೋಲೈಟ್‌ಗಳ ಸಮತೋಲನವನ್ನು ಕಾಪಾಡುತ್ತದೆ.

ಆರೋಗ್ಯಕರ ಊಟ ಮಾಡಿ
ಬೇಸಿಗೆಯಲ್ಲಿ ಜೀರ್ಣಕ್ರಿಯೆಯು ಕಡಿಮೆಯಾಗಿರುತ್ತದೆ. ಅಜೀರ್ಣ, ಅಲ್ಲೀಯತೆ ಮತ್ತು ಮಲಬದ್ಧತೆಯಂತಹ ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗತ್ತದೆ . ಅದಕ್ಕಾಗಿಯೇ ಬೇಸಿಗೆಯಲ್ಲಿ  ಜೀರ್ಣವಾಗುವ ಮತ್ತು ಹಗುರವಾದ ಆಹಾರವನ್ನು ಸೇವಿಸಿ. ಮಸಾಲೆಯುಕ್ತ, ಹೆಚ್ಚಿನ ಪ್ರೋಟೀನ್ ಅಥವಾ ಎಣ್ಣೆಯುಕ್ತ ಆಹಾರವನ್ನು ತಪ್ಪಿಸುವುದು ಉತ್ತಮ . ಬದಲಾಗಿ, ನಿಮ್ಮ ದೈನಂದಿನ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಪಾಲಕ್, ಸೋರೆಕಾಯಿ, ಟೊಮೆಟೊ, ಸೌತೆಕಾಯಿಯಂತಹ ತರಕಾರಿಗಳನ್ನು ಮತ್ತು ಬೇಸಿಗೆಯಲ್ಲಿ ಸಿಗುವ ಕಲ್ಲಂಗಡಿ, ಕಿತ್ತಳೆ ಮತ್ತು ಪೇರಳೆ ಹಣ್ಣುಗಳನ್ನು ಸೇವಿಸಿ.

ವಿಶ್ರಾಂತಿ ಪಡೆಯಿರಿ :
ಬೇಸಿಗೆಯಲ್ಲಿ ಆಲಸ್ಯದಿಂದಾಗಿ ಸಾಕಷ್ಟು ಸುಸ್ತು ಕೂಡ ಇರುತ್ತದೆ. ದಿನಗಳು ಕಳೆದಂತೆ ಜನರು ಹೆಚ್ಚು ಆಲಸ್ಯವನ್ನು ಅನುಭವಿಸಬಹುದು. ಅದಕ್ಕಾಗಿಯೇ ಬೇಸಿಗೆಯಲ್ಲಿ ಜನರು ಮಧ್ಯಾಹ್ನ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕು. ಊಟದ ನಂತರ 20 ನಿಮಿಷಗಳವರೆಗೆ ನಿದ್ದೆ ಮಾಡಿ. ಇದರಿಂದ ನಿಮ್ಮ ಆಯಾಸ ಕಡಿಮೆಯಾಗಿ ದಿನವಿಡೀ ಕೆಲಸ ಮಾಡಲು ಶಕ್ತಿ ಸಿಗುತ್ತದೆ

ಚಟುವಟಿಕೆಯಿಂದ ಇರುವುದು ಉತ್ತಮ
ಬೇಸಿಗೆಯಲ್ಲಿ, ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಹೋಗಿ. ಇದು ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ   ತಂಪಾದ ಗಾಳಿಯಲ್ಲಿ ನಡೆಯುವ ಮೂಲಕ ಮೂಡ್ ಕೂಡ ಚೆನ್ನಾಗಿರುತ್ತದೆ. ಬಿಪಿ, ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಒತ್ತಡವನ್ನು ನಿಯಂತ್ರಿಸುತ್ತದೆ.

Ads on article

Advertise in articles 1

advertising articles 2

Advertise under the article