ಸೂರ್ಯೋದಯ ವೇಳೆ ಶುದ್ಧವಾದ ಪರಿಸರದಲ್ಲಿ ಒಂದು ವಾಕ್ ಮಾಡಿದರೆ ಮನಸ್ಸು ದಿನವಿಡೀ ಉಲ್ಲಾಸವಾಗಿರುತ್ತದೆ
ವಾಕಿಂಗ್ ಎಲ್ಲರೂ ಸುಲಭವಾಗಿ ಮಾಡಬಹುದಾದ ವ್ಯಾಯಾಮ. ನಡಿಗೆಯಿಂದ ಬೊಜ್ಜು ಕಡಿಮೆಯಾಗುವುದರ ಜೊತೆ ದೇಹವನ್ನು ಅನೇಕ ರೋಗಗಳಿಂದ ತಡೆಯುತ್ತದೆ
ಒಬ್ಬ ವ್ಯಕ್ತಿ ಫಿಟ್ ಆಗಿರಲು ಪ್ರತಿದಿನ ಕನಿಷ್ಠ ಒಂದು ಗಂಟೆ ವಾಕಿಂಗ್ ಮಾಡುವುದು ಬೆಸ್ಟ್. ಬೆಳಗ್ಗೆಯ ಸಮಯದಲ್ಲಿ ವಾಕ್ ಮಾಡಲು ಕಷ್ಟವಾದಲ್ಲಿ ಇಳಿ ಸಂಜೆಯ ಸಮಯದಲ್ಲಿ ಕಾಲಿಗೆ ಕೆಲಸ ನೀಡಬಹುದು ಎಂದು ಫಿಟ್ ನೆಸ್ ತಜ್ಞರು ಹೇಳುತ್ತಾರೆ. ಇದು ದೇಹಕ್ಕೆ ಉತ್ತಮವಾದ ತಾಲೀಮು. ಇದಕ್ಕೆ ಯಾವುದೇ ಉಪಕರಣ ಅಥವಾ ಯಾವುದೇ ತರಬೇತುದಾರ ಅಗತ್ಯವಿಲ್ಲ.
ಆಪ್ ಸ್ಟೋರ್‌ಗಳಿಗೆ ಹೋಗಿ ಫಿಟ್ಟೆಸ್ ಎಂದು ಟೈಪ್ ಮಾಡಿದರೆ ಸಾಕು ಸಾಕಷ್ಟು ಆಪ್‌ಗಳು ಸಿಗುತ್ತವೆ. ಅಲ್ಲದೆ ಇನ್ನು ಹಲವು ಆಪ್‌ಗಳನ್ನು ನೀವು ನಿಮ್ಮ ಮೊಬೈಲ್‌ಗಳಲ್ಲಿ ಹೊಂದಿರಬಹುದು. ಕೆಲವೊಮ್ಮೆ ತಾಂತ್ರಿಕ ತೊಂದರೆಯಿಂದ ಈ ಆಪ್‌ಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಸಾಮಾನ್ಯ ವೇಗದಲ್ಲಿ ನೀವು ಒಂದು ಗಂಟೆ ನಡೆದರೆ ವಾಕಿಂಗ್ ಮಾಡುವವ ಸುಮಾರು 4 ರಿಂದ ಐದು ಕಿಲೋ ಮೀಟರ್ ನಡೆಯುತ್ತಾನೆ. ನೀವು ಕೊಂಚ ವೇಗವಾಗಿ ನಡೆದರೆ ಒಂದು ಗಂಟೆಯಲ್ಲಿ ನೀವು 5 ರಿಂದ ಆರು ಕಿಲೋಮೀಟರ್ ದೂರವನ್ನು ಕ್ರಮಿಸಬಹುದು. ವಯಸ್ಸಿಗೆ ಅನುಗುಣವಾಗಿ ಎಷ್ಟು ಹೆಜ್ಜೆ ನಡೆಯಬೇಕು ಎಂಬ ಮಾಹಿತಿ ಇಲ್ಲಿದೆ.
ಒಬ್ಬ ವ್ಯಕ್ತಿ ತಾನು ಫಿಟ್ ಆಗಿರಲು ಸುಮಾರು 10 ಸಾವಿರ ಹೆಜ್ಜೆಗಳನ್ನು ನಡೆದರೆ ಉತ್ತಮ. ವಯಸ್ಸಿನ ಅನುಗುಣವಾಘಿ ವಾಕಿಂಗ್ ಮಾಡುವ ದೂರ ಸಹ ಬೇರೆ ಬೇರೆ ಆಗಿರುತ್ತವೆ.
ಯಾವ ವಯಸ್ಸಿನಲ್ಲಿ ಎಷ್ಟು ಸ್ಟೆಪ್ ವಾಕಿಂಗ್
6 ರಿಂದ 12 ವರ್ಷ: ಮಕ್ಕಳನ್ನೂ ವಾಕಿಂಗ್‌ಗೆ ಕರೆದುಕೊಂಡು ಹೋದಾಗ, ಈ ವಯಸ್ಸಿನ ಮಕ್ಕಳು ದಿನಕ್ಕೆ ಕನಿಷ್ಠ 12000 ರಿಂದ 15000 ಹೆಜ್ಜೆ ನಡೆಯಬೇಕು.
18 ರಿಂದ 40 ವರ್ಷಗಳು- ಈ ವಯಸ್ಸಿನಲ್ಲಿ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಪ್ರತಿದಿನ 12000 ಹೆಜ್ಜೆಗಳನ್ನು ನಡೆಯಬೇಕು. 40 ವರ್ಷ ವಯಸ್ಸಿನ ಜನರು ಪ್ರತಿದಿನ 11000 ಹೆಜ್ಜೆಗಳನ್ನು ನಡೆದರೆ ಆರೋಗ್ಯಕ್ಕೆ ಉತ್ತಮ. 50 ವರ್ಷ ದಾಟಿದ ವ್ಯಕ್ತಿಗಳು ಪ್ರತಿದಿನ 10000 ಹೆಜ್ಜೆಗಳನ್ನು ನಡೆಯುವ ಅಭ್ಯಾಸವನ್ನು ಮಾಡಿಕೊಂಡರೆ ಸೂಕ್ತ. 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ನೀವು ದಿನಕ್ಕೆ 8000 ಹೆಜ್ಜೆಗಳನ್ನು ನಡೆದರೆ ಆರೋಗ್ಯ ಸಮಸ್ಯೆಗಳಿಂದ ಕೊಂಚ ದೂರವಾಗಬಹುದು
ನೀವು ವಾಕಿಂಗ್ ಮಾಡಲು ಆರಂಭಿಸಿದ್ದರೆ ಆರಂಭದಲ್ಲೇ ಕಿಲೋ ಮೀಟರ್ ಗಟ್ಟಲೆ ನಡಿಗೆಯನ್ನು ಆರಂಭಿಸ ಬೇಡಿ. ನಿಧಾನವಾಗಿ ಒಂದೊಂದು ಹಂತವನ್ನು ಏರುತ್ತಾ ಸಾಗಿರಿ. ಅಂದರೆ ನಿಧಾನವಾಗಿ ನಡೆಯುವ ದೂರವನ್ನು ಹೆಚ್ಚಿಸುತ್ತಾ ಸಾಗಿರಿ. ಹೀಗೆ ಮಾಡುವುದರಿಂದ ನಿಮಗೆ ಹೆಚ್ಚು ಆಯಾಸ ಉಂಟು ಮಾಡುವುದಿಲ್ಲ. ಅಲ್ಲದೆ ನಿಮ್ಮ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.