-->
1000938341
ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪತ್ತೆ - ಕೂದಳೆಲೆ ಅಂತರದಲ್ಲಿ ಬೈಕ್ ಸವಾರ ಪಾರು

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪತ್ತೆ - ಕೂದಳೆಲೆ ಅಂತರದಲ್ಲಿ ಬೈಕ್ ಸವಾರ ಪಾರು

ಬೆಳ್ತಂಗಡಿ: ಇಲ್ಲಿನ ಚಾರ್ಮಾಡಿ ಘಾಟಿಯ 9ನೇ ತಿರುವಿನಲ್ಲಿ ಒಂಟಿ ಸಲಗವೊಂದು ಪತ್ತೆಯಾಗಿದೆ. ಆನೆ ರಸ್ತೆ ದಾಟಿ ಹೋಗುತ್ತಿರುವುದು  ಬೈಕಗ ಸವಾರರೊಬ್ಬರ ವೀಡಿಯೋದಲ್ಲಿ ಸೆರೆಯಾಗಿದೆ.

ಕಳೆದೆರಡು ತಿಂಗಳುಗಳಿಂದ ‌ಈ ಭಾಗದಲ್ಲಿ ಕಾಡಾನೆಗಳ ಕಾಣ ಸಿಕ್ಕುತ್ತಿದೆ. ಇದು ಈ ಭಾಗದಲ್ಲಿ ಸಂಚರಿಸುತ್ತಿರುವ ವಾಹನ ಸವಾರರಿಗೆ ಭೀತಿ ಹುಟ್ಟಿಸಿದೆ. ಬೆಳ್ತಂಗಡಿಯ ಬಾಂಜಾರುಮಲೆ ಕಡೆಯಿಂದ ಬಂದಂತಹ ಕಾಡಾನೆಯೊಂದು ಕೆಲವು ಹೊತ್ತು ರಸ್ತೆ ಬದಿಯಲ್ಲಿ ನಿಂತುಕೊಂಡಿರುವುದು ಕಂಡು ಬಂದಿದೆ. ಬಳಿಕ ನೆರಿಯ ಕಾಡಿನತ್ತ ತೆರಳಿದೆ. ಈ ವೇಳೆ ಆನೆಯನ್ನು ಗಮನಿಸದ ಬೈಕ್ ಸವಾರರೊಬ್ಬರು ಆನೆ ದಾಟುತ್ತಿರುವ ಸಂದರ್ಭದಲ್ಲಿಯೇ ಸಂಚರಿಸಿ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.  

ಸದ್ಯ, ಕಾಡಿನ ಕೆರೆಗಳು, ನೇತ್ರಾವತಿ ನದಿ ಸಂಪೂರ್ಣ ಬತ್ತಿ ಹೋಗಿದೆ. ಕೇವಲ ಮೃತ್ಯುಂಜಯ ನದಿಯಲ್ಲಿ ಮಾತ್ರ ನೀರು ಹರಿಯುತ್ತಿದೆ. ಈ ನದಿ ಹರಿಯುವ ನೆರಿಯ, ಚಾರ್ಮಾಡಿ ಭಾಗದಲ್ಲಿ ಕಾಡಾನೆಗಳು ಆಶ್ರಯ ಪಡೆದಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದ್ದರಿಂದ ಈ ಭಾಗದಲ್ಲಿ ಸಂಚಾರ ನಡೆಸುವ ವಾಹನ ಸವಾರರು ಜಾಗೃತೆ ವಹಿಸಬೇಕಾದ ಅಗತ್ಯವಿದೆ.

Ads on article

Advertise in articles 1

advertising articles 2

Advertise under the article