-->
1000938341
ಮಂಗಳೂರು: ಯುವಕನಿಗೆ ಚೂರಿ ಇರಿದು ಪರಾರಿ

ಮಂಗಳೂರು: ಯುವಕನಿಗೆ ಚೂರಿ ಇರಿದು ಪರಾರಿ


ಮಂಗಳೂರು: ನಗರದ ಹೊರವಲಯದ ಫರಂಗಿಪೇಟೆಯ ಕುಮ್ಡೇಲು ಎಂಬಲ್ಲಿ ವೈಯುಕ್ತಿಕ ದ್ವೇಷದಿಂದ ಯುವಕನೊಬ್ಬನಿಗೆ ಆತನ ಪರಿಚಿತನೇ ಚೂರಿ ಇರಿದು ಪರಾರಿಯಾಗಿದ್ದಾನೆ. 

ಪವನ್ ಚೂರಿ ಇರಿತಕ್ಕೊಳಗಾದ ಯುವಕ. ಚರಣ್ ಎಂಬಾತ ಚೂರಿಯಿಂದ ಇರಿದವನು.

ಪವನ್ ಗೆ ಚರಣ್ ಪರಿಚಿತನಾಗಿದ್ದ. ಈತ ವೈಯುಕ್ತಿಕ ದ್ವೇಷದಿಂದ ಪವನ್ ನ ಎದೆಯ ಭಾಗಕ್ಕೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಗಾಯಾಳು ಪವನ್‌ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಪವನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಎಸ್ ಡಿ ಪಿ ಐ ಮುಖಂಡ ಕಲಾಯಿ ಅಶ್ರಫ್ ಕೊಲೆ ಪ್ರಕರಣದಲ್ಲಿ ಪವನ್ ಆರೋಪಿ. ಈತ ರೌಡಿಶೀಟರ್.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article