ಬರ್ತ್ ಡೇ ಪಾರ್ಟಿಯಲ್ಲಿ ಐವರಿಗೆ ಇರಿದ ಅನ್ಯಕೋಮಿನ ಯುವಕರು: ಇಬ್ಬರು ಗಂಭೀರ


ತಿರುವನಂತಪುರಂ: ಬಿಯ‌ರ್ ಪಾರ್ಲರ್ ನಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿ ಹಿಂಸಾಚಾರಕ್ಕೆ ತಿರುಗಿ, ಐವರು ಇರಿತಗೊಂಡು ಗಂಭೀರವಾಗಿ ಗಾಯಗೊಂಡ ಘಟನೆ ಕೇರಳದ  ಕಜಕೂಟಂನಲ್ಲಿ ಶನಿವಾರ ರಾತ್ರಿ ನಡೆದಿದೆ.

ಶ್ರೀಕಾರ್ಯಂ ನಿವಾಸಿಗಳಾದ ಶಾಲು, ಸೂರಜ್, ವಿಶಾಖ್, ಸ್ವರೂಪ್ ಹಾಗೂ ಅತುಲ್ ಗಾಯಗೊಂಡವರು. ಘಟನೆಗೆ ಸಂಬಂಧಿಸಿದಂತೆ ಶಮೀಮ್ (34), ಜಿನೋ (36) ಮತ್ತು ಅನಸ್ (22) ಎಂಬ ಮೂವರು ಶಂಕಿತರನ್ನು ತಿರುವನಂತಪುರಂನ ಕಜಕೂಟಂ ಪೊಲೀಸರು ಬಂಧಿಸಿದ್ದಾರೆ.

ಶಾಲು ಮತ್ತು ಸೂರಜ್‌ ಅವರ ಶ್ವಾಸಕೋಶ ಮತ್ತು ಯಕೃತ್‌ಗೆ ಇರಿತವಾದ ಪರಿಣಾಮ ಇಬ್ಬರೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಇಬ್ಬರೂ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ತೀವ್ರ ನಿಗಾದಲ್ಲಿದ್ದಾರೆ ಎಂದು ವರದಿಯಾಗಿದೆ. ಇದು ಮದ್ಯದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಘಟನೆಯೋ ಅಥವಾ ಜಗಳದ ಹಿಂದಿನ ಉದ್ದೇಶವೇನಿರಬಹುದು ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.