ಹೊಟೇಲ್ ಒಳಗಡೆ ನುಗ್ಗಿದ ಮರ್ಸಿಡಿಸ್‌ ಕಾರು: ವಕೀಲನ ಹುಚ್ಚಾಟಕ್ಕೆ ಆರು ಮಂದಿಗೆ ಗಾಯ


ನವದೆಹಲಿ: ಇಲ್ಲಿನ ಕಾಶ್ಮೀರಿ ಗೇಟ್ ಪ್ರದೇಶದ ಫತೇ ಕಚೋರಿಯಲ್ಲಿರುವ ಹೋಟೆಲ್‌ಗೆ ಕಾರು ನುಗ್ಗಿ ಆರು ಮಂದಿ ಗಂಭೀರವಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಕೀಲನೊಬ್ಬ, ವೇಗವಾಗಿ ತನ್ನ ಮರ್ಸಿಡಿಸ್ ಕಾರು ಚಾಲನೆ ಮಾಡಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಹೋಟೆಲ್‌ವೊಳಗೆ ನುಗ್ಗಿದೆ. ಪರಿಣಾಮ ಈ ಘಟನೆ ನಡೆದಿದೆ.

ನೋಯ್ದಾ ನಿವಾಸಿ ಪರಾಗ್ ಮೈನಿ ಅಪಘಾತಗೈದ ಚಾಲಕ.

ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದೆ‌. ಈ ಆಘಾತಕಾರಿ ಘಟನೆ ಹೋಟೆಲ್ ಒಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿದಿದೆ. ವಕೀಲ ಚಲಾಯಿಸುತ್ತಿದ್ದ ಕಾರು ತಮ್ಮತ್ತ ವೇಗವಾಗಿ ಬರುತ್ತಿರುವುದನ್ನು ಕಂಡ ಕೆಲವು ಗ್ರಾಹಕರು ಗಾಬರಿಯಿಂದ ಓಡಿ ಹೋಗುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಕಾರು ಗುದ್ದಿದ ರಭಸಕ್ಕೆ ಹೋಟೆಲ್‌ನ ಟೇಬಲ್ ಎಲ್ಲವೂ ಚೆಲ್ಲಾಪಿಲ್ಲಿ ಆಗಿದೆ.

ಕಾರಿನ ಬಾನೆಟ್ ಮುಂದೆಯೇ ಇದ್ದ ಮತ್ತೊಬ್ಬ ವ್ಯಕ್ತಿಯ ಕಾಲಿಗೆ ಗಂಭೀರ ಗಾಯವಾಗಿದೆ. ಪೊಲೀಸರ ಪ್ರಕಾರ, ಕಾರನ್ನು 36 ವರ್ಷದ ವಕೀಲ ಚಲಾಯಿಸುತ್ತಿದ್ದ.  ಅತಿವೇಗದ ಚಾಲನೆ ಪ್ರಕರಣದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ.