-->

ರೀಲ್ಸ್ ನೋಡಿ 80ರ ವೃದ್ಧನ ಪೀತಿಯ ಬಲೆಗೆ ಬಿದ್ದ 34ರ ಚೆಲುವೆ : ಈಗ ಇವರಿಬ್ಬರೂ ಸತಿಪತಿಗಳು

ರೀಲ್ಸ್ ನೋಡಿ 80ರ ವೃದ್ಧನ ಪೀತಿಯ ಬಲೆಗೆ ಬಿದ್ದ 34ರ ಚೆಲುವೆ : ಈಗ ಇವರಿಬ್ಬರೂ ಸತಿಪತಿಗಳು


ಮಧ್ಯಪ್ರದೇಶ: ಪ್ರೀತಿ ಅನ್ನೋದು ವಯಸ್ಸು, ಬಣ್ಣ ಅಥವಾ ಜಾತಿ-ಧರ್ಮದ ಆಧಾರದ ಮೇಲೆ ಹುಟ್ಟುವುದಿಲ್ಲ ಎಂಬ ನಿದರ್ಶನವೊಂದು ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯ ಮಗರಿಯಾ ಎಂಬ ಪುಟ್ಟ ಗ್ರಾಮದಿಂದ ಬೆಳಕಿಗೆ ಬಂದಿದೆ.

34ರ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ವೃದ್ಧನ ರೀಲ್‌ಗಳನ್ನು ನೋಡುತ್ತಿದ್ದಳು. ಇದರಿಂದ ಆಕೆಗೆ ಈ ವೃದ್ಧನ ಮೇಲೆ ಪ್ರೀತಿ ಮೂಡಿದೆ. ಅವಳು ಆ ವೃದ್ಧನೊಂದಿಗೆ ಜೀವನ ಕಳೆಯಲು ನಿರ್ಧರಿಸಿದ್ದಾಳೆ. ಆ ವೃದ್ಧನ ವಯಸ್ಸು 80 ಆದರೂ ಆಕೆ ಈಗ ಅವರನ್ನೇ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ.

80ರ ವೃದ್ಧ ಬಲುರಾಮ್ ಸುಮಾರು 2 ವರ್ಷಗಳ ಹಿಂದೆ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಬಲುರಾಮ್‌ ಗೆ ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರಿದ್ದಾರೆ. ಮಕ್ಕಳು ಮದುವೆಯಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಬಲರಾಮ್ ಪತ್ನಿಯ ಅನಾರೋಗ್ಯದಿಂದ ನಿಧನರಾಗಿದ್ದರು. ಬಲುರಾಮನಿಗೂ ಗ್ರಾಮದ ವಿಷ್ಣು ಗುರ್ಜರ್ ಎಂಬ ಯುವಕನಿಗೂ ಸ್ನೇಹ ಬೆಳೆದಿದೆ. ವಿಷ್ಣು ವೃದ್ಧ ಬಲುರಾಮ್ ರನ್ನು ತನ್ನ ಹೊಟೇಲಿಗೆ ಕರೆತಂದು ತಮಾಷೆಗೆ ರೀಲ್ಸ್ ಮಾಡಿದ. ಈ ರೀಲ್ಸ್ ಹಳ್ಳಿಯಲ್ಲಿ ಪ್ರಸಿದ್ಧವಾಯಿತು.

ಹೀಗೆ ಸಾಕಷ್ಟು ರೀಲ್ಸ್ ಗಳನ್ನು ಮಾಡತೊಡಗಿದರು. ಈ ರೀಲ್‌ಗಳು ಕ್ರಮೇಣ ವೈರಲ್ ಆಗತೊಡಗಿದವು, ಸಾವಿರಾರು ಫಾಲೋವರ್ಸ್ ಗಳು ಆದರು. ಬಳಿಕ ಬಲುರಾಮ್ ತಮ್ಮ ಹೆಚ್ಚಿನ ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಕಳೆಯಲು ಪ್ರಾರಂಭಿಸಿದರು. ಈ ಸಂದರ್ಭ ಮಹಾರಾಷ್ಟ್ರದ ಅಮರಾವತಿ ನಿವಾಸಿ ತಮ್ಮ ಅರ್ಧದಷ್ಟು ವಯಸ್ಸಿನ ಶೀಲಾ ಇಂಗ್ಲೆಯ ಪರಿಚಯವಾಗಿದೆ. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು.

ಎಪ್ರಿಲ್ 1, ಸೋಮವಾರ, ಇಬ್ಬರೂ ಸುಸ್ನರ್ ತಲುಪಿ ನ್ಯಾಯಾಲಯದಲ್ಲಿ ವಿವಾಹವಾಗಿದ್ದಾರೆ. ಬಳಿಕ ಅವರು ನ್ಯಾಯಾಲಯದ ಆವರಣದಲ್ಲಿರುವ ದೇವಾಲಯದಲ್ಲಿ ಪರಸ್ಪರ ಹಾರ ಹಾಕುವ ಮೂಲಕ ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಒಟ್ಟಿಗೆ ವಾಸಿಸುವುದಾಗಿ ಪ್ರಮಾಣ ಮಾಡಿದರು. ಇವರಿಬ್ಬರ ದಾಂಪತ್ಯದಲ್ಲಿ ತುಂಬಾ ಖುಷಿಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article