-->
1000938341
777 ಚಾರ್ಲಿ’ ಸಿನಿಮಾ ಜಪಾನ್ ನಲ್ಲಿ ಬಿಡುಗಡೆ

777 ಚಾರ್ಲಿ’ ಸಿನಿಮಾ ಜಪಾನ್ ನಲ್ಲಿ ಬಿಡುಗಡೆ

 

 ‘777 ಚಾರ್ಲಿ’ ಸಿನಿಮಾ ಭಾರತದಾದ್ಯಂತ ಪ್ರಾಣಿಪ್ರಿಯರು ಖುಷಿಪಟ್ಟುವಂತೆ ಮಾಡಿತ್ತು . ರಕ್ಷಿತ್​ ಶೆಟ್ಟಿ  ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರು ಇದೀಗ ಪರಂವಃ ಸ್ಟುಡಿಯೋಸ್’ ಮೂಲಕ ನಿರ್ಮಾಣವಾದ ‘777 ಚಾರ್ಲಿ’ ಸಿನಿಮಾ ತಂಡದಿಂದ ಒಂದು ವಿಶೇಷ ಸುದ್ದಿ ನೀಡಿದೆ
ಜಪಾನ್ ನಲ್ಲಿ ಬಿಡುಗಡೆ ಆಗಲಿದೆ 777 ಚಾರ್ಲಿ’
ಈಗ ಜಪಾನ್​ನಲ್ಲಿ ಈ ಚಿತ್ರ ಬಿಡುಗಡೆ ಆಗಲು ಸಿದ್ಧವಾಗಿದೆ. ಕನ್ನಡದ ಈ ಸಿನಿಮಾ ಜಪಾನೀಸ್​ ಭಾಷೆಗೆ ಡಬ್​ ಆಗಿ ಬಿಡುಗಡೆ ಆಗುತ್ತಿದೆ. ಜೂನ್ 28ರಂದು ಜಪಾನ್  ದೇಶದ ಹಲವು ನಗರಗಳಲ್ಲಿ ‘777 ಚಾರ್ಲಿ’ ರಿಲೀಸ್​ ಆಗಲಿದೆ
ಬಾಲಿವುಡ್​ ಹಾಗೂ ಟಾಲಿವುಡ್​ನ ಸಿನಿಮಾಗಳು ಜಪಾನ್​ನಲ್ಲಿ ಬಿಡುಗಡೆ ಆಗಿ ಯಶಸ್ಸು ಕಂಡಿದ್ದುಂಟು. ಈಗ ಕನ್ನಡದ ಒಂದು ಸಿನಿಮಾ ಜಪಾನ್​ನಲ್ಲಿ ತೆರೆ ಕಾಣಲು ಸಜ್ಜಾಗಿರುವುದು ಹೆಮ್ಮೆಯ ವಿಷಯ.
ಜಪಾನ್ ಚಿತ್ರರಂಗದ ದೊಡ್ಡ ಸಂಸ್ಥೆ ‘ಶೋಚಿಕೋ ಮೂವೀ’ ಕಿರಣ್​ ರಾಜ್​ ನಿರ್ದೇಶನದ ‘777 ಚಾರ್ಲಿ’ ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಲು ಮುಂದಾಗಿದೆ. ಈ ಹಿಂದೆ ಇದೇ ಸಂಸ್ಥೆ ಸಿನಿಮಾವನ್ನು ಜಪಾನಿನಲ್ಲಿ ವಿತರಣೆ ಮಾಡಿ ಗಮನ ಸೆಳೆದಿತ್ತು.

2023ರಲ್ಲಿ ‘777 ಚಾರ್ಲಿ’ ಸಿನಿಮಾ ಥೈಲ್ಯಾಂಡ್​ನಲ್ಲಿ ಡಬ್ ಆಗಿ ತೆರೆಕಂಡಿತ್ತು. ಈ ಸಿನಿಮಾ ಮುಂದಿನ ದಿನಗಳಲ್ಲಿ ರಷ್ಯಾ, ಲ್ಯಾಟಿನ್ ಅಮೆರಿಕ, ಜರ್ಮನಿ, ತೈವಾನ್ ಮುಂತಾದ ದೇಶಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. 

Ads on article

Advertise in articles 1

advertising articles 2

Advertise under the article