-->
1000938341
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಸೋದರರಿಗೆ ಮಲ‌ ಸಹೋದರನಿಂದಲೇ 4.3 ಕೋಟಿ ರೂ. ವಂಚನೆ: ವೈಭವ್ ಪಾಂಡೆ ಅರೆಸ್ಟ್

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಸೋದರರಿಗೆ ಮಲ‌ ಸಹೋದರನಿಂದಲೇ 4.3 ಕೋಟಿ ರೂ. ವಂಚನೆ: ವೈಭವ್ ಪಾಂಡೆ ಅರೆಸ್ಟ್

ಮುಂಬೈ: ಭಾರತದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರನಿಗೆ ಪಾಲುದಾರಿಕೆ ವ್ಯವಹಾರದಲ್ಲಿ 4.3 ಕೋಟಿ ರೂ. ವಂಚನೆಗೈದಿರುವ ಆರೋಪದಲ್ಲಿ ಮಲ ಸೋದರ ವೈಭವ್ ಪಾಂಡ್ಯನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

 ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ ಮತ್ತು ಅವರ ಮಲ ಸಹೋದರ ವೈಭವ್‌ ಪಾಂಡ್ಯ ಸೇರಿಕೊಂಡು 2021ರಲ್ಲಿ ಪಾಲಿಮರ್ ಕಂಪೆನಿ ಪ್ರಾರಂಭಿಸಿದ್ದರು. ಪಾಂಡ್ಯ ಸಹೋದರರು ಸಂಸ್ಥೆಯಲ್ಲಿ ತಲಾ 40 ಪರ್ಸೆಂಟ್ ಷೇರ್ ಹೊಂದಿದ್ದರು. ವೈಭವ್ ಪಾಂಡೆ 20 ಪರ್ಸೆಂಟ್ ಹೂಡಿಕೆ ಮಾಡಿದ್ದನು. ಕಂಪೆನಿಯ ಲಾಭದಲ್ಲಿಯೂ ಇದೇ ಕ್ರಮದಲ್ಲಿ ಹಂಚಿಕೆ ಆಗಬೇಕಿತ್ತು. ಆದರೆ ವೈಭವ್ ಪಾಂಡ್ಯ ಪಾಲುದಾರಿಕೆ ನಿಯಮದಲ್ಲಿ ವಂಚನೆಗೈದು ಕಂಪೆನಿಯ ಲಾಭಾಂಶವನ್ನು ಬೇರೊಂದು ಪ್ರತ್ಯೇಕ ಖಾತೆಗೆ ವರ್ಗಾವಣೆ ಮಾಡಿದ್ದನು. ಪರಿಣಾಮ ಹಾರ್ದಿಕ್ ಪಾಂಡ್ಯ ಸೋದರರಿಗೆ 4.3 ಕೋಟಿ ನಷ್ಟವಾಗಿತ್ತು.

ಈ ಬಗ್ಗೆ ಮುಂಬೈನ ಇಕನಾಮಿಕ್ ಒಫೆನ್ಸ್ ವಿಂಗ್ ನಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿ ವೈಭವ್ ಪಾಂಡ್ಯನನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೋರ್ಟ್ ಆರೋಪಿಗೆ ಐದು ದಿನಗಳ ಪೊಲೀಸ್‌ ಕಸ್ಟಡಿ ನೀಡಿದೆ. ವೈಭವ್ ಬಂಧನದಿಂದಾಗಿ ಒಂದೇ ಕುಟುಂಬದಲ್ಲಿ ಬಿರುಕು ಮೂಡಿದ್ದು, ಪಾಲುದಾರಿಕೆಯ ಕಂಪನಿಯಲ್ಲಿ ಒಡಕು ಮೂಡಿದೆ.

Ads on article

Advertise in articles 1

advertising articles 2

Advertise under the article