-->
1000938341
ಆರನೇ ತರಗತಿಯಲ್ಲಿ ಫೇಲ್ ಆಗಿ ಖಿನ್ನತೆಗೆ ಜಾರಿದ್ದ ಯುವತಿ ಯುಪಿಎಸ್ಸಿ ಮೊದಲ ಪ್ರಯತ್ನದಲ್ಲೇ ಯಶಸ್ವಿ

ಆರನೇ ತರಗತಿಯಲ್ಲಿ ಫೇಲ್ ಆಗಿ ಖಿನ್ನತೆಗೆ ಜಾರಿದ್ದ ಯುವತಿ ಯುಪಿಎಸ್ಸಿ ಮೊದಲ ಪ್ರಯತ್ನದಲ್ಲೇ ಯಶಸ್ವಿ


ನವದೆಹಲಿ: ಹಿಂದೆ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಅನುತ್ತೀರ್ಣಳಾಗಿ, ಅಪಮಾನಗಳನ್ನು ಅನುಭವಿಸಿ, ಮಾನಸಿಕ ಖಿನ್ನತೆಗೆ ಜಾರಿದ್ದ ಯುವತಿ ಇಂದು ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್ ಗಳಿಸಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾಳೆ. ಈ ಮೂಲಕ ಅದೆಷ್ಟೋ ಯುವ ಆಕಾಂಕ್ಷಿಗಳಿಗೆ ಸ್ಪೂರ್ತಿಯಾಗಿ ನಿಂತಿದ್ದಾರೆ. 

ಭಾರತದಲ್ಲಿ ಅತ್ಯಂತ ಕಠಿಣ ಪರೀಕ್ಷೆ ಎಂದೇ ಕರೆಯಲ್ಪಡುವ ಯುಪಿಎಸ್ಸಿ ಎಕ್ಸಾಂನಲ್ಲಿ ಪಾಸ್ ಆಗುವುದು ಬಹಳ ಕಷ್ಟಕರ. ಇದರಲ್ಲಿ ಉತ್ತೀರ್ಣರಾಗಬೇಕಾದರೆ ಬಹಳಷ್ಟು ಶ್ರಮಪಡಬೇಕು. ಕಠಿಣ ಪರಿಶ್ರಮ, ನಿರಂತರ ಶಿಸ್ತುಬದ್ಧತೆಯ ಓದು ಈ ಯಶಸ್ಸಿಗೆ ಪ್ರಮುಖ ಕಾರಣ. ಪ್ರತಿ ವರ್ಷ ಭಾರತದಾದ್ಯಂತ ಲಕ್ಷಾಂತರ ಮಂದಿ ಯುಪಿಎಸ್ಸಿ ಆಕಾಂಕ್ಷಿಗಳು ಈ ಪರೀಕ್ಷೆಗೆ ವರ್ಷಗಳಿಂದ ತಯಾರಿ ನಡೆಸುತ್ತಿರುತ್ತಾರೆ. ಅಧಿಕಾರಿಯಾಗುವ ಕನಸು ಹೊತ್ತವರಿಗೆ ರುಕ್ಮಿಣಿ ರಿಯಾರ್ ಎಂಬವರ ಯಶೋಗಾಥೆ ಖಂಡಿತ ಒಂದು ಸ್ಫೂರ್ತಿ ಎಂದೇ ಹೇಳಬಹುದು.

ತಮ್ಮ ಆರಂಭಿಕ ದಿನಗಳಲ್ಲಿ ಹೆಚ್ಚು ಅಂಕ ಗಳಿಸುತ್ತಿದ್ದ ವಿದ್ಯಾರ್ಥಿಗಳ ಗುಂಪಿಗೆ ಸೇರದ ರುಕ್ಮಿಣಿ, ಆರನೇ ತರಗತಿಯಲ್ಲಿ ಅನುತ್ತೀರ್ಣರಾದರು. ಬಳಿಕ ಬಹಳಷ್ಟು ಟೀಕೆಗೆ ಗುರಿಯಾದ. ಇದರಿಂದ ಖಿನ್ನತೆಗೆ ಒಳಗಾಗಿ, ಅತೀವ ನೋವು ಅನುಭವಿಸಿದರು. ಈ ಘಟನೆಗಳಿಂದ ಹೊರಬಂದ ರಿಯಾರ್, ಗುರುದಾಸ್‌ಪುರಮ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ, ಅಮೃತಸರದ ಗುರು ನಾನಕ್ ದೇವ್ ವಿಶ್ವವಿದ್ಯಾಲಯದಿಂದ ಸಮಾಜ ವಿಜ್ಞಾನದಲ್ಲಿ ಪದವಿ ಪಡೆದುಕೊಂಡರು.

ಟಿಐಎಸ್‌ಎಸ್‌ನಿಂದ ಕೋರ್ಸ್‌ ಮುಗಿಸಿಕೊಂಡರು. ಮೈಸೂರಿನ ಆಶೋದಯ ಮತ್ತು ಮುಂಬೈನ ಅನ್ನಪೂರ್ಣ ಮಹಿಳಾ ಮಂಡಲದಂತಹ ಎನ್‌ಜಿಒಗಳೊಂದಿಗೆ ಇಂಟರ್ನ್‌ಶಿಪ್ ಮಾಡಿದ ರುಕ್ಮಿಣಿ, ಎನ್‌ಜಿಓದಲ್ಲಿ ಕೆಲಸ ಮಾಡುವಾಗ, ನಾಗರಿಕ ಸೇವೆ ಮಾಡುವತ್ತ ಹೆಚ್ಚು ಆಕರ್ಷಿತರಾದರು. ಪರೀಕ್ಷೆ ಬರೆದು, ಅಧಿಕಾರಿಯಾಗಬೇಕು ಎಂದು ಸಂಕಲ್ಪ ಮಾಡಿದ ಇವರು, ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದರು.

ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ 2ನೇ ರಾಂಕ್ ಗಳಿಸುವ ಮೂಲಕ ರುಕ್ಮಿಣಿ ಎಲ್ಲರೂ ತಮ್ಮತ್ತ ತಿರುಗಿ ನೋಡುವಂತೆ ಮಾಡಿದರು. ಬಳಿಕ 2011ರಲ್ಲಿ AIR 2 ಅನ್ನು ಪಡೆದುಕೊಂಡರು. ಅತೀ ಮುಖ್ಯವಾಗಿ ಐಎಎಸ್ ಅಧಿಕಾರಿಯಾದ ರುಕ್ಮಿಣಿ ರಿಯಾರ್ ಅವರು ಯಾವುದೇ ಕೋಚಿಂಗ್ ಕ್ಲಾಸ್‌ಗೂ ಹೋಗದೆ, ತರಬೇತಿ ಪಡೆಯದೆ, ಸ್ವಯಂ ಅಧ್ಯಯನದಿಂದ ಅತ್ಯಂತ ಕಠಿಣ ಪರೀಕ್ಷೆಯನ್ನು ಭೇದಿಸುವಲ್ಲಿ ಯಶಸ್ವಿಯಾದರು.

ಇಂದು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರುಕ್ಮಿಣಿ ರಿಯಾ‌ರ್ ಅವರು 6ನೇ ತರಗತಿಯಿಂದ 12ನೇ ತರಗತಿವರೆಗಿನ ಎನ್‌ಸಿಇಆರ್‌ಟಿ ಪುಸ್ತಕಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದರು. ದಿನನಿತ್ಯ ಪ್ರಕಟವಾಗುತ್ತಿದ್ದ ಸುದ್ದಿಪತ್ರಿಕೆ ಮತ್ತು ಮ್ಯಾಗ್ ಜೀನ್‌ಗಳನ್ನು ಓದುತ್ತಿದ್ದರು. ಇವರ ಯಶಸ್ಸಿನ ಹಾದಿ ನಿಜಕ್ಕೂ ಅನೇಕರಿಗೆ ಸ್ಪೂರ್ತಿದಾಯಕ ಎಂದೇ ಹೇಳಬಹುದು.

Ads on article

Advertise in articles 1

advertising articles 2

Advertise under the article