-->

ಬೆತ್ತಲೆ ಫೋಟೋ ಶೂಟ್ ಮಾಡಿಕೊಂಡ ನಟ ಶಕ್ತಿಮಾನ್ ಪಾತ್ರಕ್ಕೆ ಅರ್ಹನಲ್ಲ: ರಣವೀರ್ ಸಿಂಗ್ ವಿರುದ್ಧ ಮುಖೇಶ್ ಖನ್ನ ಕಟು ಟೀಕೆ

ಬೆತ್ತಲೆ ಫೋಟೋ ಶೂಟ್ ಮಾಡಿಕೊಂಡ ನಟ ಶಕ್ತಿಮಾನ್ ಪಾತ್ರಕ್ಕೆ ಅರ್ಹನಲ್ಲ: ರಣವೀರ್ ಸಿಂಗ್ ವಿರುದ್ಧ ಮುಖೇಶ್ ಖನ್ನ ಕಟು ಟೀಕೆಮುಂಬೈ: ಒಂದಷ್ಟು ವರ್ಷಗಳ ಹಿಂದೆ ಭಾರತೀಯ ಕಿರುತೆರೆ ಇತಿಹಾಸದಲ್ಲಿ ಕ್ರೇಝ್ ಸೃಷ್ಟಿಸಿ ಶಕ್ತಿಮಾನ್ ಪಾತ್ರವನ್ನು ಮಾಡುವ ಮೂಲಕ ಜನಮನ ಗೆದ್ದ ಮುಖೇಶ್ ಖನ್ನ ಇದೀಗ ಅದೇ ಕಥಾಹಂದರವನ್ನು ಇಟ್ಟುಕೊಂಡು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಸಿನಿಮಾದಲ್ಲಿ ಯಾವ ನಟ ಶಕ್ತಿಮಾನ್​ ಪಾತ್ರ ಮಾಡುತ್ತಾರೆ ಎಂದು ಇನ್ನೂ ಅಂತಿಮ ಆಗಿಲ್ಲ. ಆದರೆ ಅಷ್ಟರಲ್ಲಾಗಲೇ ಕೆಲವು ಮಾಧ್ಯಮಗಳು ರಣವೀರ್​ ಸಿಂಗ್​ ಹೆಸರನ್ನು ಎಳೆದುತಂದಿವೆ. ಆದರೆ ಇದು ಸುದ್ದಿ ಸುಳ್ಳು ಎಂದು ಮುಖೇಶ್​ ಖನ್ನಾ ಅವರೇ ಸ್ಪಷ್ಟಪಡಿಸಿದ್ದಾರೆ. ತಾವು ಶಕ್ತಿಮಾನ್​ ಪಾತ್ರಕ್ಕೆ ರಣವೀರ್ ಸಿಂಗ್ ಅವರನ್ನು ಆಯ್ಕೆ ಮಾಡಿಲ್ಲ ಎಂದು ಮುಖೇಶ್​ ಖನ್ನಾ ಹೇಳಿದ್ದಾರೆ.

ಶಕ್ತಿಮಾನ್​ ಪಾತ್ರವನ್ನು ರಣವೀರ್​ ಸಿಂಗ್​ ಮಾಡುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಆದರೂ ನಾನು ಮೌನವಾಗಿದ್ದೆ. ಇದೀಗ ಈ ಸಿನಿಮಾಗೆ ರಣವೀರ್​ ಸಿಂಗ್​ ಸಹಿ ಮಾಡಿದ್ದಾರೆ ಎಂದು ಟಿವಿ ವಾಹಿನಿಗಳು ಕೂಡ ಸುದ್ದಿ ಪ್ರಸಾರ ಮಾಡಲು ಆರಂಭಿಸಿದೆ. ಆದ್ದರಿಂದ ನಾನು ಮಾತನಾಡಬೇಕಾಗಿ ಬಂದಿದೆ. ರಣವೀರ್​ ಸಿಂಗ್​ ಎಷ್ಟೇ ದೊಡ್ಡ ಸ್ಟಾರ್​ ಆಗಿರಬಹುದು. ಆದರೆ ಇಂಥಹ ಇಮೇಜ್​ ಇರುವ ವ್ಯಕ್ತಿ ಶಕ್ತಿಮಾನ್​ ಆಗಲಾರ. ಮುಂದೇನಾಗುತ್ತೋ ನೋಡೋಣ’ ಎಂದಿದ್ದಾರೆ ಮುಖೇಶ್​ ಖನ್ನಾ.

ಈ ಹಿಂದೆ ರಣವೀರ್​ ಸಿಂಗ್​ ಅವರು ತಮ್ಮ ಬೆತ್ತಲೆ ಫೋಟೋಶೂಟ್​ ಮಾಡಿಸಿದ್ದರು. ಅದನ್ನು ಮುಖೇಶ್​ ಖನ್ನಾ ಖಂಡಿಸಿದ್ದಾರೆ. ಈ ರೀತಿ ಬೆತ್ತಲೆಯಾಗಿ ನಟಿಸುವುದು ಭಾರತದ ಸಂಸ್ಕೃತಿಯಲ್ಲ ಎಂದು ಅವರು ಛಾಟಿ ಬೀಸಿದ್ದರು. ‘ಬೆತ್ತಲೆಯಾಗಿ ಕಾಣಿಸಿಕೊಳ್ಳುವುದು ಅವರಿಗೆ ಸರಿ ಎನಿಸಿದರೆ ಅಂತಹ ದೇಶಕ್ಕೆ ಹೋಗಲಿ. ಅಲ್ಲಿ ಪ್ರತಿ ಮೂರನೇ ಒಂದು ದೃಶ್ಯದಲ್ಲಿ ಬೆತ್ತಲೆಯಾಗಿ ನಟಿಸಬಹುದು’ ಎಂದು ಮುಖೇಶ್​ ಖನ್ನಾ ಹೇಳಿದ್ದರು.
ಶಕ್ತಿಮಾನ್​ ಎಂದರೆ ಕೇವಲ ಸೂಪರ್​ ಹೀರೋ ಮಾತ್ರ ಅಲ್ಲ. ಆತ ಸೂಪರ್​ ಟೀಚರ್​ ಕೂಡ ಹೌದು. ಆ ಪಾತ್ರವನ್ನು ಮಾಡುವ ನಟನಿಗೆ ಅಂಥ ಗುಣ ಇರಬೇಕು. ಅವನು ಹೇಳಿದರೆ ಜನರು ಕೇಳುವಂತಿರಬೇಕು. ದೊಡ್ಡ ಸ್ಟಾರ್​ಗಳು ಸಾಕಷ್ಟು ಮಂದಿ ಇದ್ದಾರೆ. ಆದರೆ ಅವರ ಇಮೇಜ್​ ಅಡ್ಡ ಬರುತ್ತದೆ’ ಎಂಬುದು ಮುಖೇಶ್​ ಖನ್ನಾ ಅವರ ಅಭಿಪ್ರಾಯ.

Ads on article

Advertise in articles 1

advertising articles 2

Advertise under the article