ತಾಯಿಯನ್ನು ಮೀರಿಸುತ್ತಾಳೆ ಸುಂದರಿ ರವೀನಾ ಟಂಡನ್ ಪುತ್ರಿ
Tuesday, March 19, 2024
ಬೆಂಗಳೂರು: ಉಪ್ಪೇಂದ್ರ, ಕೆಜಿಎಫ್ ಸಿನಿಮಾದಲ್ಲಿ ಮಿಂಚಿದ್ದ ರವೀನಾ ಟಂಡನ್ ಪುತ್ರಿ ರಾಶಾ ತಡಾನಿ ಸಿನಿಮಾರಂಗವನ್ನು ಪ್ರವೇಶಿಸುವ ಮೊದಲೇ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಸದ್ಯ ರಾಶಾ ತಡಾನಿ ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಮ್ಮನನ್ನೂ ಮೀರಿಸುವ ಸುಂದರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ವಿಜೇತೆ ನಟಿ ರವೀನಾ ಟಂಡನ್ ಕೆಜಿಎಫ್ ಸಿನಿಮಾದಿಂದ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ರವೀನಾ ಟಂಡನ್ ಖ್ಯಾತ ನಿರ್ಮಾಪಕ ರವಿ ಟಂಡನ್ ರವರ ಒಉತ್ರು. ಅವರಿಗೀಗ 49ರ ಆಸುಪಾಸು. ಈಗಲೂ ತಮ್ಮ ಸೌಂದರ್ಯವನ್ನು ಅವರು ಕಾಪಿಟ್ಟುಕೊಂಡು ಬರುತ್ತಿದ್ದಾರೆ. ರವೀನಾ ಟಂಡನ್ ಅವರಂತೆಯೇ ಪುತ್ರಿ ರಾಶಾ ತಡಾನಿ ಸಹ ಚೆಂದುಳ್ಳಿ ಚೆಲುವೆ.
ರಾಶಾ ತಡಾನಿ ತಮ್ಮ 19 ನೇ ಹುಟ್ಟುಹಬ್ಬದ ಸಂಭದಲ್ಲಿದ್ದಾರೆ. ರವೀನಾ ಟಂಡನ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪುತ್ರಿಯ ಬಾಲ್ಯದ ಫೋಟೋಗಳನ್ನು ಶೇರ್ ಮಾಡಿ, ವಿಶ್ ಮಾಡಿದ್ದಾರೆ. ರವೀನಾ ಅವರ ಈ ಸುಂದರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರಾಶಾ, 'ಲವ್ ಯೂ ಮಾಮ್... ಎಂದು ಬರೆದುಕೊಂಡಿದ್ದಾರೆ. ನಟಿಯ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗುತ್ತಿದೆ.
ರಾಶಾ ತಡಾನಿ ಕೆಲವು ಬ್ರಾಂಡ್‌ಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುತ್ರಾರೆ. ಆದಷ್ಟು ಶೀಘ್ರ ರಾಶಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಅದಕ್ಕಿಂತ ಮುಂಚಿತವಾಗಿ, ಆಕೆ ಈಗಾಗಲೇ ಹಲವು ಜಾಹೀರಾತು ಫಲಕಗಳಲ್ಲಿ ಕಾಣಿಸಿಕೊಂಡಿದ್ದರೆ. ಮುಂಬೈನಾದ್ಯಂತ ಜಾಹೀರಾತು ಫಲಕಗಳು ರಾರಾಜಿಸುತ್ತಿವೆ.
ರವೀನಾ ಟಂಡನ್ ತಮ್ಮ ಪುತ್ರಿಯ ಮುಖವನ್ನು ಮುಂಬೈನಾದ್ಯಂತ ಜಾಹೀರಾತು ಫಲಕಗಳಲ್ಲಿ ಗುರುತಿಸಿದ ನಂತರ ಉತ್ಸಾಹವನ್ನು ತಡೆಯಲು ಸಾಧ್ಯವಾಗಲಿಲ್ಲ ಮತ್ತು ಅದರ ವೀಡಿಯೊವನ್ನು ತಮ್ಮ Instagram ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ಜಾಹೀರಾತು ಫಲಕಗಳಲ್ಲಿ ತಾಯಿ ಮತ್ತು ಪುತ್ರಿ ಅಕ್ಕಪಕ್ಕದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ರಾಶಾ ಅವರು ರವೀನಾ ಅವರ ಜೆರಾಕ್ಸ್ ನಂತೆ ಇದ್ದಾರೆ. ತಾಯಿ ಯಾರು? ಮತ್ತು ಮಗಳು ಯಾರು? ಎಂದು ಗೊಂದಲವಾಗುತ್ತಿದೆ. ಈಕೆ ಕೂಡಾ ರವಿನಾ ಅವರಂತೆ ದೊಡ್ಡ ಹೆಸರು ಮಾಡಲಿದ್ದಾರೆ ಎಂದು ರವಿನಾ ಟಂಡರ್ ಅವರ ಫ್ಯಾನ್ಸ್ ರಾಶಾ ತಡಾನಿ ಅವರ ಸೌಂದರ್ಯವನ್ನು ಹಾಡಿ ಹೋಗಳುತ್ತಿದ್ದಾರೆ.
ರಾಶಾ ತನ್ನ ಮೊದಲ ಸಿನಿಮಾವನ್ನು ಸೌತ್ ಸ್ಟಾರ್ ರಾಮ್ ಚರಣ್ ಅವರೊಂದಿಗೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈ ಸಿಸಿಮಾವನ್ನು ಬುಚ್ಚಿ ಬಾಬು ನಿರ್ದೇಶಿಸಲಿದ್ದಾರೆ. ಆದರೆ, ಸಿನಿಮಾ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ರವೀನಾ ಟಂಡನ್ ಪುತ್ರಿಯನ್ನು ಸ್ಟ್ರೀನ್ ಮೇಲೆ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.