ಶೋಲ್ಡರ್ ಲೆಸ್ ಟಾಪ್, ತುಂಡು ಜೀನ್ಸ್ ತೊಟ್ಟು ಬೃಂದಾವನ ಸೀರಿಯಲ್ ನಟಿ ಫೋಟೋ ಶೂಟ್: ಪುಷ್ಪಾ ಬೋಲ್ಡ್ ಲುಕ್ ಗೆ ದಂಗಾದ ಫ್ಯಾನ್ಸ್



ಬೆಂಗಳೂರು: ಕಿರುತೆರೆ ನಟಿಯರಲ್ಲಿ ಹೆಚ್ಚಿನವರು ಸದಾ ಸೀರೆಯಲ್ಲಿ, ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿರುತ್ತಾರೆ. ಸದಾ ಸಂಪ್ರದಾಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಕೆಲ ನಟಿಯರು ಒಮ್ಮೊಮ್ಮೆ ಬೋಲ್ಡ್ ಲುಕ್ ನಲ್ಲಿ ಫೋಟೋ ಶೂಟ್ ಮಾಡಿ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡುತ್ತಾರೆ‌. ಇದೀಗ ಬೃಂದಾವನ ಸೀರಿಯಲ್ ನಟಿ  ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಶಾಕ್‌ ಕೊಟ್ಟಿದ್ದಾರೆ. ಬೃಂದಾವನ ಸೀರಿಯಲ್ ನಾಯಕಿ ಪುಷ್ಪ ಪಾತ್ರಧಾರಿ ಇವರೇನಾ ಎನ್ನುವಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. 

ಬೃಂದಾವನ ಸೀರಿಯಲ್ ನಲ್ಲಿ ನಾಯಕಿ ಪುಷ್ಪಾ ಪಾತ್ರಧಾರಿ ನಟಿ ಅಮೂಲ್ಯ ಭಾರದ್ವಜ್ ಅವರು ಸದ್ಯ ಸೀರಿಯಲ್‌ನಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವ ಚೆಲುವೆ. ಸದಾ ಸೀರೆಯುಟ್ಟು ಮುಗ್ಧೆಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅವರು ಅಪಾರ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಸೀರಿಯಲ್ ನಲ್ಲಿ ಸೋಷಿಯಲ್ ಮೀಡಿಯಾ ಸ್ಟಾರ್ ವರುಣ್ ಆರಾಧ್ಯಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಸದಾ ಸೀರೆಯುಟ್ಟು ಕ್ಯಾಮೆರಾ ಮುಂದೆ ಬರುವ ಹುಡುಗಿ ‘ಪುಷ್ಪ’ ಈಗ ಶೋಲ್ಡರ್ ಲೆಸ್ ಟಾಪ್ ಮತ್ತು ತುಂಡು ಜೀನ್ಸ್ ಧರಿಸಿ ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಟಿಯ ಈ ಅವತಾರ ಕಂಡು ಇದು ಬೃಂದಾವನ ಸೀರಿಯಲ್ ನಟಿ ಪುಷ್ಪ ಇವರೇನಾ? ಎಂದು ಶಾಕ್ ಆಗಿ ಜನರು ಫೋಟೋ ನೋಡ್ತಿದ್ದಾರೆ. ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ.

ಕಡಲ ತೀರದಲ್ಲಿ ಸ್ಟೈಲೀಶ್ ಆಗಿ ನಟಿ ಕಾಣಿಸಿಕೊಂಡ ಅಮೂಲ್ಯ ಭಾರದ್ವಜ್ ತಮ್ಮ ಸುಂದರ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಅಮೂಲ್ಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.‌ ಈ ಹಿಂದೆ ‘ದಾಸಪುರಂದರ’ ಎಂಬ ಸೀರಿಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ಅಮೂಲ್ಯ ನಟಿಸಿದ್ದರು.