ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಹೇಗೆ


ಬೇಸಿಗೆ ಆರಂಭ ಆದಂತೆ ತ್ವಚೆಯ ರಕ್ಷಣೆ ಮಾಡುವುದೇ ದೊಡ್ದ ಸವಾಲಿನ ವಿಷಯ ವಾಗಿರುತ್ತದೆ 
ತ್ವಚೆಯ ರಕ್ಷಣೆ ಬಗ್ಗೆ ಇಲ್ಲಿದೆ ಮಾಹಿತಿ 
ದಿನಕ್ಕೆ  2 ಬಾರಿ ಮುಖ ತೊಳೆಯಿರಿ:
ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೇ  ಹೆಚ್ಚೂ ಬೆವರು ಜೊತೆ 
 ಚರ್ಮದಲ್ಲಿಯೂ ಹೆಚ್ಚು ಎಣ್ಣೆ ಅಂಶ ಕಾಣಿಸುತ್ತದೆ. ಇದರಿಂದಾಗಿ ದಿನಕ್ಕೆ 2 ಬಾರಿ ಮುಖವನ್ನು ಸ್ವಚ್ಛಗೊಳಿಸುವುದು ಉತ್ತಮ 
ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು
 ತೊಳೆಯುವ ಮೊದಲು ಒಂದು ನಿಮಿಷಗಳ ಕಾಲ ಮುಖದ ಮೇಲೆ ಮೃದುವಾದ ಮಸಾಜ್ ಮಾಡಿ
ಸೌತೆಕಾಯಿ: 
ಸೌತೆಕಾಯಿ  ಬೇಸಿಗೆಯಲ್ಲಿ ಚರ್ಮಕ್ಕೆ ಹಿತ ನೀಡುವುದರ ಜೊತೆಗೆ ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ. ದಿನನಿತ್ಯವು ಸೌತೆಕಾಯಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳವುದು ರಿಂದ ಬಿಸಿಲಿನಿಂದಾಗುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ. 
ಮುಖಕ್ಕೆ ಸೌತೆಕಾಯಿ, ಮೊಸರು ಲೇಪನವನ್ನು ಹಚ್ಚಿದರೆ ತಂಪಾಗುತ್ತದೆ. ಜೊತೆಗೆ ಹೊಳಪು ಬರುತ್ತದೆ.
ಮಲಗುವ ಮುನ್ನ ಚರ್ಮಕ್ಕೆ ಆರೈಕೆ ಮಾಡುವುದು ಉತ್ತಮ :
ಬೇಸಿಗೆಯಲ್ಲಿ ರಾತ್ರಿ ಸಮಯದಲ್ಲಿ ಚರ್ಮದ ಆರೈಕೆಯನ್ನು ಕಡೆಗಣಿಸಬಾರದು 
 ಮಲಗುವ ಮುನ್ನ ಕೊಬ್ಬರಿ ಎಣ್ಣೆ ಹಾಗೂ ನೈಟ್ ಕ್ರೀಮ್‌ಗಳನ್ನು ಬಳಸಿ. ಇದರಿಂದಾಗಿ ಚರ್ಮದದಲ್ಲಿ ಉಂಟಾದ ಡ್ಯಾಮೇಜ್‌ಗಳನ್ನು ಸರಿಪಡಿಸಬಹುದಾಗಿದೆ. ಇದನ್ನೂ ಓದಿ: ನೀವು ವೈನ್ ಕುಡಿಯುತ್ತೀರಾ? ವೈನ್ ಸೇವಿಸಿದ್ರೆ ಈ 6 ಆರೋಗ್ಯ ಪ್ರಯೋಜನ ಗ್ಯಾರಂಟಿ